Basav jayanti  
ಕಲಬುರಗಿ

ಚಿಂಚೋಳಿಯಲ್ಲಿ ಬಸವ ಜಯಂತಿ ರದ್ದು: ತಾಲೂಕಾಡಳಿತದ ವಿರುದ್ಧ ಆಕ್ರೋಶ

ಚಿಂಚೋಳಿ: ತಾಲೂಕಿನಲ್ಲಿ ವಿಶ್ವಗುರು ಬಸವಣ್ಣನವರ 893ನೇ ಜಯಂತಿ ಆಚರಣೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಗೈರು, ಕಾರ್ಯಕ್ರಮದ ವೇದಿಕೆ ಅವ್ಯವಸ್ಥೆಯಿಂದ ಕೂಡಿದ್ದರಿಂದ ಅಖಿಲ ಭಾರತ ವೀರಶೈವ ಸಮಾಜವು ತೀವೃವಾಗಿ ಖಂಡಿಸಿ ವೇದಿಕೆ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿ ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೂ ಮುಂಚೆ ಡಾ. ಬಿ. ಆರ್ ಅಂಬೇಡ್ಕರ ವೃತ್ತ ಹಾಗೂ ಚಂದಾಪುರದ ಅಕ್ಕಮಾಹದೇವಿ ಪರುಷಕಟ್ಟೆಯಿಂದ ಬಸವೇಶ್ವರ ವೃತ್ತದ ವರೆಗೆ ಬೃಹತ ಮೆರವಣಿಗೆ ಆಗಮಿಸಿ ಸಮಾಜ ಬಾಂಧವರು ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸ್ಮರಿಸಿದರು.
ಈ ವೇಳೆ ಗೌತಮ ಪಾಟೀಲ್, ಶರಣಪ್ಪ ಮೋತಕಪಳ್ಳಿ, ವೀರೇಶ ಯಂಪಳ್ಳಿ, ಬಾಬುರಾವ ಪಾಟೀಲ್, ಅಜೀತ್ ಪಾಟೀಲ್, ಸುರೇಶ ದೇಶಪಾಂಡೆ, ಮಲ್ಲಿಕಾರ್ಜುನ ಬುಶೇಟ್ಟಿ, ಶೇಶಿಕಾಂತ ಆಡಕಿ, ಭೀಮಶೇಟ್ಟಿ ಮುಕ್ಕಾ, ಸೇರಿದಂತೆ ಅನೇಕರು ಇದ್ದರು.