banjara world conference 
ಕಲಬುರಗಿ

ಬಂಜಾರ ಸಂಸ್ಕೃತಿ, ಪರಂಪರೆ ಶ್ರೀಮಂತ: ವಿಶ್ವ ಸಮ್ಮೇಳನ

ಪ್ರಮುಖ ಮುಖ್ಯಾಂಶಗಳು

  • ಜಯದೇವ ನಾಯಕ ಬಣ್ಣನೆ
  • ವಿಶ್ವ ಬಂಜಾರ ಸಾಹಿತ್ಯ, ಸಾಂಸತಿಕ ಸಮ್ಮೇಳನ
ಕಲಬುರಗಿ: ಭಾರತ ಮತ್ತು ಕರ್ನಾಟಕದಲ್ಲಿ ಲಂಬಾಣಿ ಜನಾಂಗದ ಸಂಸತಿ ಮತ್ತು ಪರಂಪರೆ ಶ್ರೀಮಂತಿಕೆಯಿಂದ ಕೂಡಿದೆ. ಕಾಶ್ಮೀರದಿಂದ ಕನ್ಯಾ ಕುಮಾರಿವರೆಗೆ ವಿಶಿಷ್ಟ ಕಲೆ, ಸಾಹಿತ್ಯ ಮತ್ತು ಸಾಂಸತಿಕ ಹಿರಿಮೆಗೆ ಬಂಜಾರ ಸಮುದಾಯ ಅಪಾರ ಕೊಡುಗೆ ನೀಡಿದೆ ಎಂದು ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ ನಾಯಕ ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಸಂತ ಶ್ರೀ ಸೇವಾಲಾಲ್​ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ತಾಂಡಾ ಅಭಿವೃದ್ಧಿ ನಿಗಮ, ಬಂಜಾರಾ ಲೋಕ ಕಲಾ ಸಂಟನೆ ಸಹಯೋಗದಲ್ಲಿ ಡಾ.ಬಿ.ಆರ್​.ಅಂಬೇಡ್ಕರ್​ ಭವನದಲ್ಲಿ ಶನಿವಾರ ಆಯೋಜಿಸಿದ್ದ ಎರಡು ದಿನಗಳ ವಿಶ್ವ ಬಂಜಾರಾ ಸಾಹಿತ್ಯ ಮತ್ತು ಸಾಂಸತಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಲಂಬಾಣಿ ಜನಾಂಗದ ಆಚಾರ, ವಿಚಾರ, ಪದ್ಧತಿ, ಉಡುಗೆ, ತೊಡುಗೆಗಳು ವಿಭಿನ್ನ ಸಾಂಸತಿಕ ಇತಿಹಾಸ ಹೊಂದಿವೆ. ಚಾರಿತ್ರಿಕವಾಗಿ ದಾಖಲಿಸುವ ಕೆಲಸವಾಗಬೇಕಿದೆ ಎಂದರು.
ದೇಶದಲ್ಲಿ ರಾಥೋಡ್​, ನಾಯಕ್​, ಚವ್ಹಾಣ್​, ಜಾಧವ್​, ಲಬಾನ, ಗೋರಮಾಟಿ ಸೇರಿ 92 ಪಂಗಡಗಳ ಬಂಜಾರ (ಲಂಬಾಣಿ) ಸಮುದಾಯವಿದೆ. ಕಾಯಕವೇ ಕೈಲಾಸ ತತ್ವವನ್ನು ಅಳವಡಿಸಿಕೊಂಡು ಸ್ವಾಭಿಮಾನದಿಂದ ಬದುಕುತ್ತಿರುವ ಜನಸಮೂಹವಿದು ಎಂದರು.
ಮಾಜಿ ಸಂಸದ ಡಾ.ಉಮೇಶ ಜಾಧವ ಮಾತನಾಡಿ, ವಿಶ್ವದ ವಿವಿಧೆಡೆ ಲಂಬಾಣಿ ಸಮುದಾಯ ನೆಲೆಸಿದೆ. ಅಲೆಮಾರಿಗಳಾಗಿ ಕರ್ನಾಟಕ, ಗುಜರಾತ್​, ರಾಜಸ್ಥಾನ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ನೆಲೆಸಿದ್ದಾರೆ. ಮೂಲತ@ ರಾಜಸ್ಥಾನ ಮತ್ತು ಗುಜರಾತ್​ ಮೂಲದ ನಾವು ಲಂಬಾಣಿ ಭಾಷೆ, ವೇಷ, ಸಂಸ್ಕೃತಿ ಆಚರಿಸುವ ಸಮುದಾಯ. ಲಿಪಿಯಿಲ್ಲದ ಭಾಷೆ ನಮ್ಮದಾಗಿದ್ದು, ಸಾಂಸ್ಕೃತಿಕ ಶ್ರೀಮಂತಿಕೆಗೆ ಹೆಸರಾದ ಬಂಜಾರ ಸಮುದಾಯವನ್ನು ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಬೆಳವಣಿಗೆಗೆ ಸರ್ಕಾರ ಆಸಕ್ತಿ ವಹಿಸಬೇಕು ಎಂದರು.
ಗುಲ್ಬರ್ಗ ವಿವಿ ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಲಂಬಾಣಿ ಜನಾಂಗದ ಇತಿಹಾಸ ಮತ್ತು ಸ್ಥಿತಿಗತಿಗಳ ಚಿಂತನೆ ಮತ್ತು ಮಂಥನದಿಂದ ಬದಲಾವಣೆ ಸಾಧ್ಯ ಎಂದರು.
ಪೌರಾದೇವಿ ಬಂಜಾರ ಶಕ್ತೀಪಿಠದ ಶ್ರೀ ಡಾ.ಬಾಬುಸಿಂಗ್​ ಮಹಾರಾಜರು, ಶ್ರೀ ಬಳಿರಾಮ್​ ಮಹಾರಾಜ, ಅಶೋಕ ಪವಾರ, ಅನಂತ ನಾಯಕ, ಎಐಬಿಎಸ್​ಎಸ್​ ಅಧ್ಯಕ್ಷ ಶಂಕರ ಪವಾರ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಸಾಂಸತಿಕ ವೈಭವದ ಮೆರವಣಿಗೆ ನಡೆಯಿತು. ಶಾಸಕ ಬಸವರಾಜ ಮತ್ತಿಮಡು, ಸಿಂಡಿಕೇಟ್​ ಸದಸ್ಯರಾದ ರಾವೇಂದ್ರ ಎಂ.ಭೈರಪ್ಪ, ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ್​, ಖ್ಯಾತ ಜಾನಪದ ವಿದ್ವಾಂಸ ಪ್ರೊ.ಪಿ.ಕೆ.ಖಂಡೋಬಾ, ಹರಿಯಾಣ ಸರ್ಕಾರದ ಗೃಹ ಉಪ ಕಾರ್ಯದರ್ಶಿ ಗಗನ್​ ದೀಪ್​ಸಿಂಗ್​, ಮಾತನಾಡಿದರು. ಜಯದೇವ ನಾಯಕ್​, ಪ್ರೊ.ಲಕ್ಷಿ$್ಮಕಾಂತ ರಾಠೋಡ, ರೇವುನಾಯಕ ಬೆಳಮಗಿ, ಶಾಸಕ ಡಾ.ಅವಿನಾಶ್​ ಜಾಧವ್​, ಬಾಬುರಾವ್​ ಚವ್ಹಾಣ್​, ಡಾ.ಎನ್​.ಜಿ.ಕಣ್ಣೂರು, ಜಯಾಂಬಿಕ ಇತರರಿದ್ದರು. ಪ್ರೊ.ಶಾರದಾ ರಾಠೋಡ ಪ್ರಾಸ್ತಾವಿಕ ಮಾತನಾಡಿದರು. ಪ್ರೊ.ದಶರಥ ನಾಯಕ್​ ಸ್ವಾಗತಿಸಿದರು.
ಡಾ.ಬಿ.ಆರ್​.ಅಂಬೇಡ್ಕರ್​ ಶಿಕ್ಷಣ ಪಡೆದು ಪೆನ್ನಿನ ಮೂಲಕ ಸಂವಿಧಾನ ರಚಿಸಿ ದೇಶದ ಇತಿಹಾಸ ಬರೆದರು. ಶೇ.80 ಹಿಂದುಳಿದ ತಳಸಮುದಾಯಗಳು ಸಂವಿಧಾನದ ಅಡಿಯಲ್ಲಿ ಬದುಕುತ್ತಿದ್ದೇವೆ. ಮಕ್ಕಳ ಕೈಗೆ ಪೆನ್ನು ನೀಡಿ ಶಿಕ್ಷಣ ನೀಡಬೇಕು. ಆಗ ಮನೆ, ಕುಟುಂಬ, ಸಮಾಜ, ರಾಜ್ಯ ಮತ್ತು ದೇಶವನ್ನು ಬದಲಿಸಲು ಸಾಧ್ಯವಿದೆ. ದೇಶದಲ್ಲಿನ ಬಂಜಾರ ಸಮುದಾಯದ ಜಾತಿ ಸಮೀಕ್ಷೆ ಆಗಬೇಕು. ಒಂದೇ ಜಾತಿ ಒಂದೇ ಮೀಸಲಾತಿ ತರಬೇಕು.
-> ಜಯದೇವ ನಾಯಕ
ಅಧ್ಯಕ್ಷ, ಕರ್ನಾಟಕ ತಾಂಡಾ ಅಭಿವೃದ್ಧಿ ಮಂಡಳಿ
ಬಂಜಾರ ಸಮಾಜವೂ ಶ್ರಮಜೀವಿಗಳ, ಗೋ ರಕ್ಷಣೆ, ದೇಶ, ಧರ್ಮ ಅಭಿಮಾನಿಗಳ, ನಂಬಿಕಸ್ತ ಸಮಾಜ. ಈ ಸಮಾಜಕ್ಕೆ ಶಕ್ತಿ ತುಂಬಬೇಕು. ತಜ್ಞರು, ಸಾಹಿತಿಗಳು, ಪ್ರಾಜ್ಞರು ಸಾಥ್​ ನೀಡಬೇಕು. ತಾಂಡಾದಲ್ಲಿರುವವರು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಬಂಜಾರ ಸಮಾಜದ ಪ್ರಗತಿಗೆ ಸದಾ ಜತೆಗಿರುವೆ.
> ಬಸವರಾಜ ಮತ್ತಿಮಡು, ಶಾಸಕ