ನಟಿ ನಯನಾ 
ಕಲಬುರಗಿ

ಕಾಮಿಟಿ ಕಿಲಾಡಿ ನಟಿ ನಯನಾ ವಿರುದ್ಧ ಅಟ್ರಾಸಿಟಿ ಕೇಸ್​ ದಾಖಲು

ಕಲಬುರಗಿ: ದಲಿತರ ಬಗ್ಗೆ ನಿಷೇಧಿತ ಪದ ಬಳಸಿ, ನಿಂದಿಸಿ ಅವಹೇಳನ ಮಾಡಿದ ಆರೋಪದ ಮೇಲೆ ಕಾಮಿಡಿ ಕಿಲಾಡಿ ನಟಿ ನಯನಾ ವಿರುದ್ಧ ನಗರದ ಸಬ್​ ಅರ್ಬನ್​ ಠಾಣೆಯಲ್ಲಿ ಜಾತಿನಿಂದನೆ (ಅಟ್ರಾಸಿಟಿ) ಪ್ರಕರಣ ದಾಖಲಾಗಿದೆ. ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಚಿಟ್​ ಂಡ್​ ಸಂಸ್ಥೆ ಬಗ್ಗೆ ಮಾತನಾಡುವ ವೇಳೆ ದಲಿತರ ಬಗ್ಗೆ ನಿಷೇಧಿತ ಪದವನ್ನು ಬಳಸಿ, ಉದ್ದೇಶಪೂರ್ವಕವಾಗಿ ಶೋಷಿತ ಸಮುದಾಯವನ್ನು ಅವಹೇಳನ ಮಾಡಿ, ವಿಕೃತಿ ಮೆರೆದಿದ್ದಾರೆ. ಕೆಟ್ಟ ಪದ ಬಳಕೆಯಿಂದ ನಮ್ಮ ಮನಸ್ಸಿಗೆ ನೋವು ಆಗಿದ್ದು, ಜಾತಿ ನಿಂದನೆ ಆಗಿದೆ. ನಯನಾ ಮೇಲ್ಜಾತಿಯವರಾಗಿದ್ದು, ದಲಿತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಕನ್ನಡ ಕಾಮಿಡಿ ಕಿಲಾಡಿಗಳು ಶೋ ಮೂಲಕ ಖ್ಯಾತಿಗೆ ಬಂದಿರುವ ನಯನಾ ಮಾತನಾಡಿದ್ದ ವಿಡಿಯೋ ವೈರಲ್​ ಆಗುತ್ತಿದೆ. ನಯನಾ ವಿರುದ್ಧ ದಲಿತ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ ನೀಡಿದ ದೂರಿನಂತೆ ಎಸ್ಸಿ, ಎಸ್ಟಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.