atrocities against farmers 
ಕಲಬುರಗಿ

ಆಳಂದಲ್ಲಿ ರೈತರ ಮೇಲೆ ದೌರ್ಜನ್ಯ: ಮಹೇಶ್ವರಿ ವಾಲಿ ಖಂಡನೆ

ಕಲಬುರಗಿ: ಆಳಂದ ತಾಲೂಕಿನ ಹೊನ್ನಳ್ಳಿ& ಶುಕ್ರವಾಡಿ ಗ್ರಾಮದ ಮಧ್ಯೆ ರಸ್ತೆ ನಿರ್ಮಾಣದ ನೆಪದಲ್ಲಿ ನಕಾಶೆಯಲ್ಲಿ ಇಲ್ಲದ ರೈತರ ಜಮೀನುಗಳಲ್ಲಿ ಭೂಮಿಯನ್ನು ಅತಿಕ್ರಮಿಸಿ, ದಬ್ಬಾಳಿಕೆ ನಡೆಸಿ ಅನಧಿಕೃತವಾಗಿ ರಸ್ತೆ ಮಾಡಲಾಗುತ್ತಿದೆ ಎಂದು ಜೆಡಿಎಸ್​ ಮಹಿಳಾ ಟಕದ ಜಿಲ್ಲಾಧ್ಯೆ ಮಹೇಶ್ವರಿ ವಾಲಿ ಆರೋಪಿಸಿದರು.
ಹೊನ್ನಳ್ಳಿ ಗ್ರಾಮದ ಸರ್ವೇ 14/3, 17, 29ರಲ್ಲಿ ಕೆಲ ರಾಜಕಾರಣಿಗಳು, ತಹಸೀಲ್ದಾರರು, ಲೋಕೋಪಯೋಗಿ ಇಲಾಖೆ ಎಇಇ, ಜೆಇಗಳು ಶಾಮೀಲಾಗಿ, ಹೊನ್ನಳ್ಳಿ& ಶುಕ್ರವಾಡಿ ಮಧ್ಯೆ ಅನಧಿಕೃತವಾಗಿ ರಸ್ತೆ ನಿರ್ಮಿಸುತ್ತಿದ್ದಾರೆ. ಇದರಿಂದ ಬಡ ರೈತರ ಶಿವಪುತ್ರ ಬಿರಾದಾರ 1.5 ಎಕರೆ, ಬಾಬುರಾವ ಕೋರೆ, ನಾಗಣ್ಣ ಕೋರೆ ಅವರ 3.4 ಎಕರೆ, ಈಶ್ವರ ಮೂಲಗೆ ಅವರ 2 ಎಕರೆ ಜಮೀನು ರಸ್ತೆ ಪಾಲಾಗುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಹೊನ್ನಳ್ಳಿ ಶುಕ್ರವಾಡಿ ಮಧ್ಯೆ ಸರ್ಕಾರದ ಅಧಿಕೃತ ದಾಖಲೆಗಳಲ್ಲಿ ಹಳೇ ನಕಾಶೆಗಳಲ್ಲಿ ಇರುವ ರಸ್ತೆ ಮಾರ್ಗವನ್ನು ಕೈಬಿಟ್ಟು, ಬಡ ರೈತರ ಜಮೀನು ಹಾಳು ಮಾಡಿ, ರಸ್ತೆ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಕೋರ್ಟ್​ ಮೊರೆ ಹೋಗಿದ್ದು, ನ್ಯಾಯಾಲಯವೂ ರೈತರ ಪರ ಸ್ಟೇ ನೀಡಿ ತೀರ್ಪು ನೀಡಿದೆ. ಆದರೆ ಕೆಲ ದಿನಗಳ ನಂತರ ಕೆಲವರು ಕೋರ್ಟ್​ಗೆ ಹೋಗಿದ್ದು, ಸ್ಟೇ ನೀಡಿರುವುದನ್ನು ಮರೆಮಾಚಿ, ಶುಕ್ರವಾಡಿಗೆ ಹೋಗಲು ತೊಂದರೆ ಆಗುತ್ತಿದೆ ಎಂದು ಸುಳ್ಳು ಹೇಳಿ ಅನುಮತಿ ತಂದಿದ್ದಾರೆ. ಈ ಬಗ್ಗೆ ನ್ಯಾಯಾಂಗ ನಿಂದನೆ ದೂರು ಸಹ ನೀಡಲಾಗಿದೆ ಎಂದರು.
ಕೂಡಲೇ ಈ ಅನ್ಯಾಯ ತಡೆಯಬೇಕು. ಇಲ್ಲದಿದ್ದರೆ ಹೋರಾಟವನ್ನು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಲಕ್ಷಿ$್ಮಕಾಂತ ಬಿರಾದಾರ ಇತರರಿದ್ದರು.