ಅಫಜಲಪುರ ತಾಲೂಕಿನ ಘೂಳನೂರಿನಲ್ಲಿ ನಿರ್ಮಾಣವಾಗುತ್ತಿರುವ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿಯನ್ನು ಶಾಸಕ ಎಂ.ವೈ.ಪಾಟೀಲ್ ಪರಿಶೀಲಿಸಿದರು. ಪ್ರಕಾಶ ಜಮಾದಾರ, ಮಂಜುನಾಥ ಅಂಜುಟಗಿ, ಸಂಜೀವಕುಮಾರ ದಾಸರ, ಬಸವರಾಜ ಕಿಣಗಿ, ಶಂಕರಲಿAಗ ತಳಕೇರಿ ಇತರರಿದ್ದರು. 
ಕಲಬುರಗಿ

ಅಂತರ್ಜಲ ವೃದ್ಧಿಗೆ ಬ್ಯಾರೇಜ್ ಸಹಕಾರಿ

ಹರೀಶ ಕುಲಕರ್ಣಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಂ.ವೈ.ಪಾಟೀಲ್ ಹೇಳಿಕೆ
  • ಘೂಳನೂರಿನಲ್ಲಿ ಕಾಮಗಾರಿ ಪರಿಶೀಲನೆ
ಅಫಜಲಪುರ: ಘೂಳನೂರ, ಮೋಘನ, ಇಟಗಾ ಮಧ್ಯದಲ್ಲಿ ೭೫ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬ್ರಿಡ್ಜ್ ಕಂ ಬ್ಯಾರೇಜ್‌ನಿಂದ ನೀರಾವರಿ ಕ್ಷೇತ್ರದಲ್ಲಿ ಕ್ರಾಂತಿ ಆಗಲಿದೆ. ಜತೆಗೆ ಈ ಭಾಗದಲ್ಲಿ ಅಂತರ್ಜಲವೃದ್ಧಿಗೆ ಸಹಕಾರಿಯಾಗಲಿದೆ ಎಂದು ಶಾಸಕ ಎಂ.ವೈ.ಪಾಟೀಲ್ ಹೇಳಿದರು.
ಘೂಳನೂರ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿ ಪರಿಶೀಲಿಸಿದ ಅವರು, ಕಾಮಗಾರಿ ಕೊನೆಯ ಹಂತಕ್ಕೆ ಬಂದಿದ್ದು, ಇನ್ನೂ ೧೫ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಬಳಿಕ ಪ್ರಾಯೋಗಿಕ ಪರಿಶೀಲನೆ ಜರುಗಲಿದೆ. ಮಳೆಗಾಲದಲ್ಲಿ ನೀರನ್ನು ಹಿಡಿದಿಡಲು ಅಧಿಕಾರಿಗಳು ಸನ್ನದ್ಧರಾಗಬೇಕು. ಈ ಕಾಮಗಾರಿಯಿಂದ ಸುಮಾರು ೧೭೫೦ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ. ಗಾಣಗಾಪುರ, ಘತ್ತರಗಾ, ಕಲ್ಲೂರ, ಶಿವಪುರವರೆಗೆ ನೀರು ನಿಲ್ಲುತ್ತದೆ. ನೀರಾವರಿಯಿಂದ ರೈತರು ವಾಣಿಜ್ಯ ಬೆಳೆಗಳು ಬೆಳೆಯುವುದರಿಂದ ಆರ್ಥಿಕವಾಗಿ ಸಬಲರಾಗುತ್ತಾರೆ. ಜತೆಗೆ ಕಾರ್ಖಾನೆಗಳ ಸ್ಥಾಪನೆಯಿಂದ ಸ್ಥಳೀಯವಾಗಿ ಉದ್ಯೋಗ ದೊರೆಯುತ್ತವೆ ಎಂದರು.
ಸಣ್ಣ ನೀರಾವರಿ ಎಇಇ ಶಾಂತಪ್ಪ ಜಾಧವ್ ಮಾತನಾಡಿ, ಬ್ಯಾರೇಜ್‌ಗೆ ೩೦ ಗೇಟ್‌ಗಳಿದ್ದು, ಗೇಟ್ ಅಳವಡಿಕೆ ಕೆಲಸ ಮುಕ್ತಾಯ ಹಂತದಲ್ಲಿದೆ. ಸುಮಾರು ೦.೩೭೫ ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದ್ದು, ೧೫ ಕಿಮೀ. ವರೆಗೆ ನೀರು ನಿಲ್ಲುತ್ತದೆ ಎಂದು ಮಾಹಿತಿ ನೀಡಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯP್ಷÀ ಪ್ರಕಾಶ ಜಮಾದಾರ, ಎಪಿಎಂಸಿ ಅಧ್ಯP್ಷÀ ಮಂಜುನಾಥ ಅಂಜುಟಗಿ, ತಹಸೀಲ್ದಾರ್ ಸಂಜೀವಕುಮಾರ ದಾಸರ, ಪ್ರಮುಖರಾದ ಬಸವರಾಜ ಕಿಣಗಿ, ಶಂಕರಲಿAಗ ತಳಕೇರಿ, ಶಿವಶರಣಪ್ಪ ಪಾಟೀಲ್, ಲಕ್ಷ್ಮೀಪುತ್ರ ಕರಜಗಿ, ಮಂಜುನಾಥ ಮಾಲಿಪಾಟೀಲ್, ಸಂತೋಷ ಮಾಲಿಪಾಟೀಲ್, ಬೀರಪ್ಪ ಪೂಜಾರಿ, ಮಾಳಿಂಗರಾಯ ಪೂಜಾರಿ ಇತರರಿದ್ದರು.
"

ತಾಲೂಕಿನಲ್ಲಿ ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ನೀರಾವರಿ ಹಾಗೂ ಅಂತರ್ಜಲ ಸೌಲಭ್ಯ ಹೆಚ್ಚಿಸಲು ಘತ್ತರಗಾ, ದೇವಲಗಾಣಗಾಪುರ, ಚಿನಮಳ್ಳಿ, ಘೂಳನೂರಿನ ಬ್ಯಾರೇಜ್‌ಗಳಿಗೆ ಹೈಡ್ರಾಲಿಕ್ ಗೇಟ್‌ಗಳು ಅಳವಡಿಸಲಾಗಿದೆ. ಜತೆಗೆ ಬೆಳಗುಂಪಾ ಹತ್ತಿರ ಬ್ರಿಡ್ಜ್ ಕಂ ಬ್ಯಾರೇಜ್ ಹಾಗೂ ಬಂದರವಾಡ ಬಳಿ ಏತ ನೀರಾವರಿ ಯೋಜನೆಗೆ ಕ್ರಮಗೊಳ್ಳಲಾಗಿದೆ.

| ಎಂ.ವೈ.ಪಾಟೀಲ್, ಶಾಸಕ