ಚಿಂಚೋಳಿ: ಮಾಜಿ ಸಚಿವ, ಶಾಸಕ ಪ್ರಿಯಾಂಕ ಖರ್ಗೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷದ ಬಲವರ್ದನೆಗೆ ಮುಂದಾಗಬೇಕು ಎಂದು ಮಾಜಿ ಪುರಸಭೆ ಅಧ್ಯಕ್ಷ ಆನಂದ ಟೈಗರ್ ಹೇಳಿದರು.
ಪಟ್ಟಣದಲ್ಲಿ ಶನಿವಾರದಂದು ಪುರಸಭೆ ಮಾಜಿ ಅಧ್ಯಕ್ಷ ಆನಂದ ಟೈಗರ್ ನೇತೃತ್ವದಲ್ಲಿ ತಥಾಗತ್ ಗೌತಮ ಬುದ್ಧನ ಮೂರ್ತಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿ ಮಾತನಾಡಿದ ಅವರು, ಕಳೆದ ಬಿಜೆಪಿ ಸರಕಾರದಲ್ಲಿನ ಪಿಎಸ್ಐ, ಬಿಟ್ ಕ್ವಾಯಿನ್, ಗಂಗಾ ಕಲ್ಯಾಣ ಸೇರಿದಂತೆ ಹಗರಣಗಳ ವಿರುದ್ಧ ಹೋರಾಡುವ ಮೂಲಕ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ.
ಪ್ರಸ್ತುತ ಐಟಿಬಿಟಿ, ಪಂಚಾಯತ ರಾಜ ಗ್ರಾಮೀಣ ಅಭಿವೃದ್ಧಿ ಸಚಿವರಾಗಿ ಪಾರದರ್ಶಕವಾಗಿ ಆಡಳಿತ ನೀಡುವ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಇದೀಗ ದಲಿತ, ಹಿಂದುಳಿದ ನಾಯಕ ಪ್ರಿಯಾಂಕ ಖರ್ಗೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಮಾತನಾಡಿದರು.
ಅದೇ ರೀತಿ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ದೀಪಕನಾಗ ಪುಣ್ಯಶೇಟ್ಟಿ, ಬ್ಲಾಕ ಕಾಂಗ್ರೇಸ್ ಅಧ್ಯಕ್ಷ ಬಸವರಾಜ ಮಾಲಿ, ಕಾಂಗ್ರೇಸ್ ಹಿರಿಯ ಮುಖಂಡ ಬಾಬುರಾವ ಪಾಟೀಲ್, ಅಬ್ದುಲ್ ಬಾಸೀದ್, ಆರ್. ಗಣಪತರಾವ, ಲಕ್ಷ್ಮಣ ಆವುಂಟಿ ಸೇರಿದಂತೆ ವಿವಿಧ ಮುಖಂಡರು ಪ್ರಿಯಾಂಕ ಖರ್ಗೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಹೈಕಮಾಂಡಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾಜಿ ಪುರಸಭೆ ಸದಸ್ಯ ಅನ್ವರ ಖತೀಬ್, ವೀರಶೇಟ್ಟಿ ಪಾಟೀಲ್, ಡಾ. ತುಕರಾಮ ಪವಾರ, ವಿಶ್ವನಾಥ ಹೋಡೆಬೀರನಳ್ಳಿ, ಕಾಶಿನಾಥ ಸಿಂಧೆ, ಲೋಕೇಶ ಐನೋಳ್ಳಿ, ರಾಮಶೇಟ್ಟಿ ಪವಾರ, ಅನೀಲಕುಮಾರ ಜಮಾದಾರ, ವಾಮನರಾವ ಕೋರವಿ, ಮಹ್ಮದ ಹಾದಿಸಾಬ್, ಮತೀನ ಸೌದಾಗಾರ, ವಿಜಯಕುಮಾರ ರೋಟ್ಟಿ, ಅಲ್ಲಾವುದ್ದಿನ ಅನ್ಸಾರಿ ಸೇರಿದಂತೆ ಅನೇಕರು ಇದ್ದರು.