suresh patil jogur 
ಕಲಬುರಗಿ

ಅಲ್ಲಮಪ್ರಭು ಪಾಟೀಲ್​ಗೆ ಸಚಿವ ಸ್ಥಾನ ನೀಡಿ

ಕಲಬುರಗಿ: ರಾಜ್ಯದಲ್ಲಿ ಶೀಘ್ರ ಅಸ್ತಿತ್ವಕ್ಕೆ ಬರಲಿರುವ ಹೊಸ ಸಚಿವ ಸಂಪುಟದಲ್ಲಿ ಹಿರಿಯ ಶಾಸಕರು, ರಾಜಕೀಯ ಅನುಭವ ಇರುವ, ಸದಾಕಾಲ ಜನಸೇವೆಯಲ್ಲಿರುವ ಶಾಸಕ ಅಲ್ಲಂಪ್ರಭು ಪಾಟೀಲರಿಗೆ ಸಚಿವ ಸ್ಥಾನ ನೀಡಿ ಜನಸೇವೆಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕು ಎಂದು ಕಾಂಗ್ರೆಸ್‌ ಮುಖಂಡ ಸುರೇಶ ಪಾಟೀಲ್​ ಜೋಗೂರ ಆಗ್ರಹಿಸಿದ್ದಾರೆ.
ಗ್ರಾಮ ಪಂಚಾಯಿತಿ ಅಧ್ಯಕ್ಷ, ಜಿಲ್ಲಾ ಪಂಚಾಯಿತ ಅಧ್ಯಕ್ಷ, ಹಾಪ್​ಕಾಮ್ಸ್​ ಅಧ್ಯಕ್ಷ, ಕಾಂಗ್ರೆಸ್​ ಜಿಲ್ಲಾಧ್ಯಕ್ಷರಾಗಿ, ಪರಿಷತ್​ ಸದಸ್ಯರಾಗಿ, ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಜನಸೇವೆಗೆ ಸಚಿವ ಸ್ಥಾನ ನೀಡಿದರೆ ಸಂಘಟನೆ ಬಲ ಬರುವ ಜತೆಗೆ ಆಡಳಿತಾತ್ಮಕವಾಗಿ ಬಲ ಬರಲಿದೆ ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.