- ಸಚಿವ ಸಂಪುಟದ ನಿರ್ಧಾರಕ್ಕೆ ಹಿಂದುಗಳ ಕಿಡಿ
- ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ವೇಳೆ ಗಲಾಟೆ
ಕಲಬುರಗಿ: ಆಳಂದ ಪಟ್ಟಣದ ಲಾಡ್ಲೇ ಮಶಾಕ್ ದರ್ಗಾದಲ್ಲಿನ ರಾವ ಚೈತನ್ಯ ಲಿಂಗದ ಶುದ್ಧೀಕರಣದ ವೇಳೆ ಕೇಂದ್ರ ಸಚಿವ, ಜಿಲ್ಲಾಧಿಕಾರಿ, ಶಾಸಕರು, ಹಿಂದು ಮುಖಂಡರ ಮೇಲೆ ಕಲ್ಲು ತೂರಾಟ, ಹಲ್ಲೆ, ದೋಂಬಿ, ಗಲಾಟೆ ಪ್ರಕರಣದಲ್ಲಿ ಭಾಗವಹಿಸಿದ್ದ ಮುಸ್ಲಿಮರ ಮೇಲಿನ ಪ್ರಕರಣ ಹಿಂಪಡೆಯಲು ರಾಜ್ಯ ಸಚಿವ ಸಂಪುಟದ ತೀರ್ಮಾನಕ್ಕೆ ಹಿಂದುಪರ ಸಂಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.
2022 ಮಾ.1ರಂದು ರಾವ ಚೈತನ್ಯ ಶಿವಲಿಂಗದ ಶುದ್ಧೀಕರಣ ಮುಗಿಸಿ ವಾಪಸ್ ಆಗು ವೇಳೆ ಕೇಂದ್ರ ಸಚಿವರು, ಶಾಸಕರು ಸೇರಿ ಹಿಂದು ಮುಖಂಡರ ಮೇಲೆ ಮುಸ್ಲಿಂ ಧರ್ಮದ ಸಾವಿರಾರು ಜನರು ಕಲ್ಲು, ಬಡಿಗೆ, ಮಾರಕಾಸ್ತ್ರಗಳಿಂದ ಗುಂಪು ದಾಳಿ ಮಾಡಿ, ವಾಹನಗಳನ್ನು ಜಖಂಗೊಳಿಸಿದ್ದರು. ಈ ಕುರಿತು ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಏಳು ಪ್ರಕರಣ ದಾಖಲಾಗಿ, ದೋಷಾರೋಪಣೆ ಪಟ್ಟಿ ಸಹ ಸಲ್ಲಿಸಲಾಗಿತ್ತು. ಆದರೆ ಪ್ರಕರಣವನ್ನು ಕೈಬಿಡುವಂತೆ ಹಜರತ್ ಲಾಡ್ಲೇ ಮಶಾಕ್ ದರ್ಗಾ ಸಮಿತಿಯವರು ಸಭಾಪತಿ ಯುಟಿ ಖಾದರ್ ಅವರಿಗೆ ಮನವಿ ಮಾಡಿದ್ದು, ಯುಟಿ ಖಾದರ್ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, ಮುಸ್ಲಿಂ ಸಮುದಾಯದವರ ಮೇಲಿನ ಪ್ರಕರಣ ವಾಪಸ್ ಪಡೆಯುವಂತೆ ಕೋರಿದ್ದರು.
ಸಭಾಪತಿ ಯುಟಿ ಖಾದರ್ ಕೋರಿಕೆಯಂತೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 2022 ಮಾ.1ರಂದು ನಡೆದ ಕೋಮು ಗಲಭೆ ಪ್ರಕರಣದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ದಾಖಲಾದ ಎಂಟು ಪ್ರಕರಣದಲ್ಲಿ 200ಕ್ಕೂ ಹೆಚ್ಚು ಮುಸ್ಲಿಮರ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯಲಾಗಿದ್ದು, ಇದಕ್ಕೆ ಹಿಂದುಪರ ಸಂಟನೆಗಳು, ಹಿಂದುಗಳು, ಬಿಜೆಪಿ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ರಾಜ್ಯ ಸರ್ಕಾರದ ತೀರ್ಮಾನಕ್ಕೆ ಕಿಡಿ ಕಾರಿದ್ದಾರೆ.
ಖಾಸಗಿ ದೂರು ಹಿಂಪಡೆತ?
ಲಾಡ್ಲೇ ಮಶಾಕ್ ದರ್ಗಾದಲ್ಲಿನ ರಾವ ಚೈತನ್ಯ ಶಿವಲಿಂಗ ಶುದ್ಧೀಕರಣದ ವೇಳೆ ನಡೆದ ಕೋಮು ಗಲಭೆ, ಕೇಂದ್ರ ಸಚಿವರು, ಶಾಸಕರು, ಜಿಲ್ಲಾಧಿಕಾರಿ, ಎಸಿ, ಪೊಲೀಸರು ಸೇರಿ ಹಿಂದು ಮುಖಂಡರ ಮೇಲೆ ದಾಳಿ ಕುರಿತು ಪೊಲೀಸ್ ಇಲಾಖೆ ಸ್ವಯಂ ಪ್ರೇರಿತ ದೂರು ದಾಖಲಿಸಿದ್ದು, ಅದನ್ನು ಹಿಂಪಡೆಯಲಾಗಿದೆ. ಆದರೆ ಅದೇ ಟನೆ ವೇಳೆ ದಾಖಲಾಗಿದ್ದ ಎರಡು ಖಾಸಗಿ ಪ್ರಕರಣಗಳನ್ನು ಹಿಂಪಡೆದಿದ್ದು, ಯಾವ ನಿಯಮದ ಅಡಿ ಎಂಬುದು ಹಿಂದು ಮುಖಂಡರ ಪ್ರಶ್ನೆಯಾಗಿದೆ. ಬಿಜೆಪಿ ಮುಖಂಡ, ಜಿಪಂ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ್ ಕಾರ್ ಚಾಲಕ ನೀಡಿದ ದೂರು ಮತ್ತು ಪತ್ರಕರ್ತ ಪ್ರಕಾಶ ಜಂಗಲೆ ನೀಡಿದ ಖಾಸಗಿ ಪ್ರಕರಣವನ್ನು ಹಿಂಪಡೆದಿದ್ದು, ಹೇಗೆ ಎಂಬ ಪ್ರಶ್ನೆ ಮೂಡಿದೆ. |
|---|
ಕೋರ್ಟ್ ಮೊರೆ ಹೋಗಲು ನಿರ್ಧಾರ
ರಾವ ಚೈತನ್ಯ ಲಿಂಗದ ಶುದ್ಧೀಕರಣಕ್ಕೆ ಹೊರಟವರ ಮೇಲೆ ದಾಳಿ ಮಾಡಿದ ಪ್ರಕರಣ ವಾಪಸ್ ಪಡೆದಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹಿಂದುಪರ ಸಂಟನೆಗಳು, ಕಾನೂನು ಬಾಹಿರವಾಗಿ ಪ್ರಕರಣ ಹಿಂಪಡೆಯಲಾಗಿದೆ. ಚಿತ್ತಾಪುರದಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದವರ ಮೇಲಿನ ಪ್ರಕರಣ ಹಿಂಪಡೆದಾಗಲೂ ಕೋರ್ಟ್ ಮೊರೆ ಹೋಗಿ, ಅದಕ್ಕೆ ತಡೆ ನೀಡಲಾಗಿತ್ತು. ಅದೇ ಮಾದರಿ ಆಳಂದ ಪ್ರಕರಣದ ಕುರಿತು ಸಚಿವ ಸಂಪುಟದ ತೀರ್ಮಾನದ ವಿರುದ್ಧ ಕೋರ್ಟ್ ಮೊರೆ ಹೋಗಲಾಗುವುದು ಎಂದು ಹಿಂದುಪರ ಸಂಟನೆಗಳ ಮುಖಂಡರು ತಿಳಿಸಿದ್ದಾರೆ.
ಆಳಂದ ಲಾಡ್ಲೆ ಮಶಾಕ್ ದರ್ಗಾದಲ್ಲಿನ ರಾವ ಚೈತನ್ಯ ಅವರ ಲಿಂಗವಿದ್ದು, ಅದರ ಶುದ್ದೀಕರಣಕ್ಕೆ ನಾವು ಮುಂದಾದಾಗ ಸಾವಿರಾರು ಮುಸ್ಲಿಮರು ಭಾರಿ ಪ್ರಮಾಣದಲ್ಲಿ ಗದ್ದಲ ಮಾಡಿ ಕೋಮು ಗಲಭೆ ಸೃಷ್ಟಿ ಮಾಡಿದಾಗ 8 ಪ್ರಕರಣಗಳು ದಾಖಲಾಗಿದ್ದು, ಅವುಗಳನ್ನು ಈಗ ರಾಜ್ಯ ಸರ್ಕಾರ ವಾಪಸ್ ಪಡೆಯಲು ಸಚಿವ ಸಂಪುಟದಲ್ಲಿ ನಿರ್ಧಾರ ಮಾಡಿದ್ದು, ಖಂಡನೀಯ. ಅದನ್ನು ಮರು ಪರಿಶೀಲಿಸಬೇಕು. ಇಲ್ಲದಿದ್ದರೆ ಕಾನೂನು ಸಂರ್ಷಕ್ಕೆ ಮುಂದಾಗಬೇಕಾಗುತ್ತದೆ.
— > ಸಿದ್ದಲಿಂಗ ಸ್ವಾಮೀಜಿ, ರಾಜ್ಯಾಧ್ಯಕ್ಷ ಶಿವಸೇನಾ ಪಕ್ಷ
ರಾವ ಚೈತನ್ಯ ಶಿವಲಿಂಗ ಶುದ್ಧೀಕರಣಕ್ಕೆ ಹೊರಟವರ ಮೇಲೆ ವ್ಯವಸ್ಥಿತ ಯೋಜನೆ ರೂಪಿಸಿ, ಧರ್ಮದ್ವೇಷದಿಂದ ದಾಳಿ ಮಾಡಿದವರ ವಿರುದ್ಧದ ಪ್ರಕರಣ ವಾಪಸ್ ತೆಗೆದುಕೊಳ್ಳುವ ಮೂಲಕ ರಾಜ್ಯ ಸರ್ಕಾರ ಒಂದು ಸಮುದಾಯದ ತುಷ್ಟೀಕರಣ ಮಾಡುತ್ತಿದೆ. ಇದು ಸರಿಯಲ್ಲ. ಕೂಡಲೇ ಈ ನಿರ್ಧಾರವನ್ನು ಮರುಪರಿಶೀಲಿಸಬೇಕು. ಇಲ್ಲದಿದ್ದರೆ ಕೋರ್ಟ್ ಮೊರೆ ಹೋಗಿ, ಪಾಠ ಕಲಿಸಲಾಗುವುದು.
— > ಹರ್ಷಾನಂದ ಗುತ್ತೇದಾರ್, ಬಿಜೆಪಿ ಮುಖಂಡ ಜಿಪಂ ಮಾಜಿ ಸದಸ್ಯ
ಆಳಂದ ಲಾಡ್ಲೇ ಮಶಾಕ್ ದರ್ಗಾದಲ್ಲಿನ ರಾವ ಚೈತನ್ಯ ಶಿವಲಿಂಗದ ಶುದ್ಧೀಕರಣಕ್ಕೆ ಹೊರಟ್ಟಿದ ಸರ್ಕಾರ ಪ್ರತಿನಿಧಿಗಳು, ಅಧಿಕಾರಿಗಳು, ಹಿಂದುಗಳ ಮೇಲೆ ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಯೋಜನೆ ಅಡಿ ಕೇಸ್ ಹಿಂಪಡೆಯಲು ಬರುತ್ತದೆಯೇ ಎಂದು ರಾಜ್ಯ ಸರ್ಕಾರವೂ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ ನಿರ್ದೇಶಕರಿಗೆ ವರದಿ ಕೇಳಿತ್ತು. ಅಭಿಯೋಗ ಇಲಾಖೆಯೂ ಕೂಲಂಕಶವಾಗಿ ಪರಿಶೀಲಿಸಿ, ಹಿಂಪಡೆಯಲು ಅರ್ಹವಲ್ಲದ ಪ್ರಕರಣಗಳಾಗಿವೆ ಎಂದು ವರದಿ ನೀಡಿತ್ತು. ಆದರೂ ಸಹ ಸರ್ಕಾರ ಮುಸ್ಲಿಂ ತುಷ್ಟೀಕರಣಕ್ಕಾಗಿ ಕಿಡಿಗೇಡಿಗಳ ರಕ್ಷಣೆಗಾಗಿ ಇಂತಹ ಕ್ರಮ ಕೈಗೊಂಡಿದೆ ಎಂದು ಹಿಂದು ಮುಖಂಡರು ಆರೋಪಿಸಿದ್ದಾರೆ.