ಶಹಾಬಾದ್​ನಲ್ಲಿ ಎಐಟಿಯುಸಿ ಕಾರ್ಮಿಕ ಸಂಟನೆಯ 43ನೇ ರಾಷ್ಟ್ರೀಯ ಸಮ್ಮೇಳನದ ಭಿತ್ತಿಪತ್ರಗಳನ್ನು ರಾಜ್ಯ ಉಪಾಧ್ಯಕ್ಷ ಪ್ರಭುದೇವ ಯಳಸಂಗಿ, ಜಿಲ್ಲಾಧ್ಯಕ್ಷ ಎಚ್​.ಎಸ್​.ಪತಕಿ ಬಿಡುಗಡೆಗೊಳಿಸಿದರು. ಮಹ್ಮದ್​ ಉಬೇದುಲ್ಲಾ, ವಿಶಾಲ್​ ನಂದೂರಕರ್​, ಭೀಮಾಶಂಕರ ಮಾಡಿಯಾಳ, ಸಾ ಇತರರಿದ್ದರು. 
ಕಲಬುರಗಿ

ಎಐಟಿಯುಸಿ ರಾಷ್ಟ್ರೀಯ ಸಮ್ಮೇಳನ 22ರಿಂದ

ಶಹಾಬಾದ್​: ಅಖಿಲ ಭಾರತ ಟ್ರೇಡ್​ ಯೂನಿಯನ್​ ಕಾಂಗ್ರೆಸ್​ (ಎಐಟಿಯುಸಿ)ನ 43ನೇ ರಾಷ್ಟ್ರೀಯ ಸಮ್ಮೇಳನ ನ.22 ರಿಂದ 26ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ರಾಜ್ಯ ಉಪಾಧ್ಯಕ್ಷ ಪ್ರಭುದೇವ ಯಳಸಂಗಿ ಹೇಳಿದರು.

ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಸಮ್ಮೇಳನ ಪ್ರಥಮ ಬಾರಿ ರಾಜ್ಯದಲ್ಲಿ ನಡೆಯುತ್ತಿರುವುದು ಕಾರ್ಮಿಕ ಸಂಟನೆಗೆ ಹೆಮ್ಮೆಯ ವಿಷಯವಾಗಿದೆ. ದೇಶದ ವಿವಿಧ ರಾಜ್ಯಗಳಿಂದ ಸುಮಾರು 1200ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಾರಿಗೆ, ವಿದ್ಯುತ್​, ಗಣಿ, ಸಿಮೆಂಟ್​, ಕಲ್ಲಿದ್ದಲು, ಬ್ಯಾಂಕಿಂಗ್​, ವಿಮೆ ಸೇರಿ ವಿವಿಧ ೇತ್ರದ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಮುಂದಿನ 3 ವರ್ಷದ ಹೋರಾಟ ರೂಪರೇಷಗಳ ಚರ್ಚೆ ನಡೆಯಲಿದೆ. ಮಾಜಿ ಸಚಿವ ಎಸ್​.ಕೆ.ಕಾಂತಾ, ಮಹಾದೇವನ್​, ಎಂ.ದೀಪಕ್​, ಮುರುಳಿಧರ್​ ಅವರನ್ನು ವಿಶೇಷವಾಗಿ ಸತ್ಕರಿಸಲಾಗುವುದು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲಾಧ್ಯಕ್ಷ ಎಚ್​.ಎಸ್​.ಪದಕಿ, ತಾಲೂಕು ಅಧ್ಯಕ್ಷ ವಿಶಾಲ ನಂದೂರಕರ ಮಾತನಾಡಿದರು. ಮಹ್ಮದ್​ ಉಬೇದುಲ್ಲಾ, ಸಾ ಗೊಪ್ಪನ, ಭೀಮರಾವ ಸಂಕನಕರ್​, ಭೀಮಾಶಂಕರ ಮಾಡಿಯಾಳ, ಸಾಜೀದ್​ ಅಹ್ಮದ್​ ಇದ್ದರು.