- ಡಾ. ಸುಜಾತಾ ಜಂಗಮಶೆಟ್ಟಿ ಹೇಳಿಕೆ
- ರಂಗಾಯಣದಲ್ಲಿ ಪರಿಸರ ದಿನ
ಕಲಬುರಗಿ: ವಿಶ್ವ ಪರಿಸರ ದಿನದ ನಿಮಿತ್ತ ಗಿಡಗಳನ್ನು ನೆಡುವುದಷ್ಟೇ ಜವಾಬ್ದಾರಿಯಲ್ಲ, ಪದ್ಮಶ್ರೀ ಸಾಲುಮರದ ತಿಮ್ಮಕ್ಕನವರ ಪರಿಸರ ಪ್ರೇಮ ಮಾದರಿಯಾಗಿ ಇಟ್ಟುಕೊಳ್ಳಬೇಕು. ಸುವರ್ಣ ಸಾಂಸತಿಕ ಸಮುಚ್ಛಯದ ಆವರಣದಲ್ಲಿ ನೆಡಲಾದ ಗಿಡಗಳು ಹಾನಿಯಾಗದಂತೆ ರಕ್ಷಿಸಲು ಸಿಬ್ಬಂದಿ ದತ್ತು ಪಡೆದು ಪೋಷಿಸಬೇಕು ಎಂದು ರಂಗಾಯಣ ನಿರ್ದೇಶಕ ಡಾ.ಸುಜಾತಾ ಜಂಗಮಶೆಟ್ಟಿ ಹೇಳಿದರು.
ಜಿಲ್ಲಾಡಳಿತ, ಪ್ರಾದೇಶಿಕ ಅರಣ್ಯ ವಿಭಾಗ, ಕನ್ನಡ ಮತ್ತು ಸಂಸತಿಕ ಇಲಾಖೆ ಹಾಗೂ ರಂಗಾಯಣ ಕಲಬುರಗಿ ಆಶ್ರಯದಲ್ಲಿ ಡಾ.ಸಿದ್ದಯ್ಯ ಪುರಾಣಿಕ ಸುವರ್ಣ ಸಾಂಸ್ಕೃತಿಕ ಸಮುಚ್ಛಯದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ ಡಾಂಗೆ ಮಾತನಾಡಿ, ಗಿಡಗಳನ್ನು ದತ್ತು ಪಡೆಯುವುದು ಅತ್ಯಂತ ಉತ್ತಮ ಆಲೋಚನೆಯಾಗಿದೆ. ನಿತ್ಯ ಊಟ ಮಾಡಿದ ನಂತರ ಗಿಡಗಳ ಬಳಿಯೇ ಕೈ ತೊಳೆದುಕೊಂಡರೆ ನೀರು ವ್ಯರ್ಥವಾಗುವುದಿಲ್ಲ ಮತ್ತು ಗಿಡಗಳಿಗೂ ನೀರು ಸಿಗುತ್ತದೆ. ಪ್ರತಿಯೊಬ್ಬರೂ ಜನ್ಮದಿನದ ನೆನಪಿಗೆ ಒಂದೊಂದು ಗಿಡ ನೆಟ್ಟರೆ ನಮ್ಮ 60*-70 ವಯಸ್ಸಿನವರೆಗೂ ಉತ್ತಮ ಪರಿಸರ ನೀಡುತ್ತವೆ ಎಂದು ತಿಳಿಸಿದರು.
ಸಮುಚ್ಚಯದ ಆವರಣಕ್ಕೆ 200 ಗಿಡ ನೀಡಿ, 50 ಗಿಡಗಳನ್ನು ನೆಡಲಾಯಿತು. ರಂಗಾಯಣದ ಆಡಳಿತಾಧಿಕಾರಿ ಹಾಗೂ ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಸ್ವಾಗತಿಸಿದರು. ರಂಗಾಯಣದ ಕಲಾವಿದರು ಪರಿಸರ ಜಾಗೃತಿ ಮೂಡಿಸುವ ಪರಿಸರ ಗೀತೆಗಳನ್ನು ಹಾಡಿದರು. ಉಪವಲಯ ಅರಣ್ಯಾಧಿಕಾರಿ ರಮೇಶ ಹಾಳಕೇರಿ, ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ರಂಗಾಯಣದ ಕಲಾವಿದರು ಹಾಗೂ ಕನ್ನಡ ಮತ್ತು ಸಂಸತಿ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.