ಸೇಡಂನಲ್ಲಿ ಶ್ರೀ ಕೊತ್ತಲ ಬಸವ ಸಭಾಭವನ ಉದ್ಘಾಟನೆ ನಿಮಿತ್ತ ನಡೆದ ರಂಗ ಸುನೇರಿ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಶ್ರೀ ಸದಾಶಿವ ಸ್ವಾಮೀಜಿ, ಮಹಾಂತೇಶ ನವಲಕಲï, ಡಾ.ಸದಾನಂದ ಪೆರ್ಲ, ಸಿದ್ದಪ್ಪ ತಳ್ಳಳ್ಳಿ, ಮಹಿಪಾಲರೆಡ್ಡಿ ಮುನ್ನೂರ, ಪ್ರಭಾಕರ ಜೋಶಿ, ಜಗದೀಶ ಕಡಬಗಾಂವ ಇದ್ದರು. 
ಕಲಬುರಗಿ

ರಂಗಭೂಮಿ ದಾಖಲೆ, ಚರಿತ್ರೆ ಕಟ್ಟಿಕೊಡುವ ಕೃತಿ

ಸೇಡಂ: ಅರ್ಪಣಾ ಮನೋಭಾವದಿಂದ ದುಡಿದ ಅನನ್ಯ ಕಲಾವಿದರು ಮತ್ತು ಪೋಷಕರನ್ನು ದಾಖಲಿಸಿ ಗ್ರಂಥ ರೂಪದಲ್ಲಿ ಕೊಟ್ಟಿರುವುದು ರಂಗಭೂಮಿಗೆ ದೊಡ್ಡ ಕೊಡುಗೆಯಾಗಿದೆ ಎಂದು ಆಕಾಶವಾಣಿ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥ ಡಾ.ಸದಾನಂದ ಪೆರ್ಲ ಹೇಳಿದರು. 
ಪಟ್ಟಣದಲ್ಲಿ ಕೊತ್ತಲ ಬಸವೇಶ್ವರ ಪಂಚ ಮಂಡಳಿ ನಿರ್ಮಿಸಿದ ಶ್ರೀ ಕೊತ್ತಲಬಸವ ಸಭಾಭವನ ಉದ್ಘಾಟನೆ ನಿಮಿತ್ತ ನೃಪತುಂಗ ಅಧ್ಯಯನ ಸಂಸ್ಥೆ ಭಾನುವಾರ ಏರ್ಪಡಿಸಿದ್ದ ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ ರಚಿತ ರಂಗ ಸುನೇರಿ ಕೃತಿ ಜನಾರ್ಪಣೆ ಹಾಗೂ ಕರ್ನಾಟಕ ರಾಜ್ಯೋತ್ಸವದ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜಿ.ಎನ್. ಮೋಹನ್ ಅವರ ಬಹುರೂಪಿ ಪ್ರಕಾಶನದಿಂದ ಬಹುಮುಖ್ಯ ವ್ಯಕ್ತಿತ್ವದ ಮುನ್ನೂರ ಪುಸ್ತಕ ಪ್ರಕಟಗೊಂಡಿದ್ದು ಶ್ಲಾಘನೀಯ. ರಂಗಭೂಮಿ ಸೇವೆ ಮಾಡಿದ ಕಲಾವಿದರ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ಕಟ್ಟಿಕೊಡುವ ಮತ್ತು ಸಂಶೋಧನಾಕಾರರಿಗೆ ಉಪಯುಕ್ತ ಮಾಹಿತಿ ನೀಡುವ ಮಹತ್ವದ ಅಧ್ಯಯನಶೀಲ ಕೃತಿ ಇದಾಗಿದೆ. ರಂಗ ಸುನೇರಿಯಲ್ಲಿ 18 ಕಲಾವಿದರ ಬದುಕು, ಸಾಧನೆಯನ್ನು ಮನಮುಟ್ಟುವಂತೆ ಕಟ್ಟಿಕೊಡಲಾಗಿದೆ. ಚಿಕಿತ್ಸಕ ಬುದ್ಧಿ ಮತ್ತು ಸೂಕ್ಷö್ಮ ಒಳನೋಟಗಳನ್ನು ಮನಮುಟ್ಟುವಂತೆ ಮುನ್ನೂರ ಸರಳ ಭಾಷಾ ಶೈಲಿ ಬರಹದಲ್ಲಿ ಪಡಿಮೂಡಿಸಿz್ದÁರೆ. ಕಲ್ಯಾಣ ಕರ್ನಾಟಕದಲ್ಲಿ ಅತ್ಯಂತ ಸತ್ವಯುತ ಶ್ರೇಷ್ಠ ಬರಹಗಾರರಿದ್ದರೂ ಪ್ರಚಾರ ಮತ್ತು ಅವಕಾಶಗಳ ಕೊರತೆಯಿಂದ ಬೆಳಕಿಗೆ ಬರದಿರುವುದು ಕಳವಳಕಾರಿ ಸಂಗತಿ ಎಂದರು.
ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಸೇಡಂನ ಇತಿಹಾಸವನ್ನು ಜನಮಾನಸಕ್ಕೆ ತಿಳಿಸುವ ದೊಡ್ಡ ಜವಾಬ್ದಾರಿ ಲೇಖಕರ ಮೇಲಿದೆ ಎಂದರು.
ಕವಿ ಕೆರಳ್ಳಿ ಗುರುನಾಥ ರೆಡ್ಡಿ ಪ್ರತಿಷ್ಠಾನದ ಅಧ್ಯP್ಷÀ ಸಿದ್ದಪ್ಪ ತಳ್ಳಳ್ಳಿ ಅಧ್ಯP್ಷÀತೆ ವಹಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿದ ಕಥೆಗಾರ ಮಹಾಂತೇಶ ನವಲಕಲï ಹಾಗೂ ರಂಗಾಯಣ ಮಾಜಿ ನಿರ್ದೇಶಕ ಪ್ರಭಾಕರ ಜೋಶಿ, ಲೇಖಕ ಮಹಿಪಾಲರೆಡ್ಡಿ ಮುನ್ನೂರ ಮಾತನಾಡಿದರು. 
ಅಂಜನಾ ಭೋವಿ ಮತ್ತು ತಂಡದವರು ಪ್ರಾರ್ಥನ ಗೀತೆ ಹಾಡಿದರು. ಜಗದೀಶ ಕಡಬಗಾಂವ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಜಗದೀಶ್ವರಿ ನಿರೂಪಣೆ ಮಾಡಿದರು. ನೃಪತುಂಗ ಅಧ್ಯಯನ ಸಂಸ್ಥೆ ನೂತನ ಅಧ್ಯP್ಷÀರಾಗಿ ಆಯ್ಕೆಯಾದ ಜಗದೀಶ ಕಡಬಗಾಂವ ಅವರಿಗೆ ನಿಕಟಪೂರ್ವ ಅಧ್ಯP್ಷÀ ಪ್ರಭಾಕರ ಜೋಶಿ ಅಧಿಕಾರ ಹಸ್ತಾಂತರಿಸಿದರು. 
"

ಸೇಡಂ ಇಡೀ ರಾಷ್ಟçದ ಗಮನಸೆಳೆದ ಇತಿಹಾಸಪ್ರಸಿದ್ಧ ನೆಲವಾಗಿದೆ. ಆದರೆ ಇಲ್ಲಿನ ಇತಿಹಾಸವನ್ನು ಬೇಕಾಬಿಟ್ಟಿ ಅರ್ಥೈಸಿಕೊಂಡು ರಚಿಸಲಾ ಗಿದೆ. ಅದಕ್ಕಾಗಿ ಇತಿಹಾಸದ ಮರುಸೃಷ್ಟಿ ಸಾಹಿತಿ ಮತ್ತು ಅಧ್ಯಯನಕಾರರಿಂದ ಪ್ರಾಮಾಣಿಕವಾಗಿ ನಡೆಯಬೇಕಾಗಿದೆ.

 | ಮಹಾಂತೇಶ ನವಲಕಲ್ಕಥೆಗಾರ

ರಾಜ್ಯೋತ್ಸವ ನಿಮಿತ್ತ ಕವನ ವಾಚನ

ಲಿಂಗಾರೆಡ್ಡಿ ಶೇರಿ, ಡಾ.ಬಿ.ಆರ್. ಅಣ್ಣಾಸಾಗರ, ಡಾ.ಪಲ್ಲವಿ ಪಾಟೀಲ್, ಡಾ.ಅಮರಮ್ಮ ಪಾಟೀಲ್, ಡಾ.ಸುವರ್ಣ ಅಳ್ಳೊಳ್ಳಿ, ಆರತಿ ಕಡಗಂಚಿ, ಪ್ರಕಾಶ ಗೋಣಗಿ, ಮುರುಗೆಪ್ಪ ಹಣಮನಳ್ಳಿ, ವಿಜಯಭಾಸ್ಕರರೆಡ್ಡಿ, ರಾಜೇಶ್ವರಿ ಸಾತನೂರ, ರುಕ್ಮಿಣಿ ಕಾಳಗಿ, ಜ್ಯೋತಿ ಲಿಂಗAಪಲ್ಲಿ, ಶರಣಕುಮಾರ ತಳ್ಳಳ್ಳಿ ಇತರರು ರಾಜ್ಯೋತ್ಸವ ನಿಮಿತ್ತ ಕವನ ವಾಚನ ಮಾಡಿದರು.