ಕಲಬುರಗಿ: ಕಲ್ಯಾಣ ನಾಡಿನ ಹೆಬ್ಬಾಗಿಲು ಕಲಬುರಗಿ ಸ್ಮಾರ್ಟ್ ಸಿಟಿಯಾಗಿ ಮಾಡುವುದಷ್ಟೇ ಅಲ್ಲದೆ ಸುಸ್ಥಿರ ಮತ್ತು ಸಮಗ್ರ ಅಭಿವೃದ್ಧಿ ಹೊಂದಿದ ನಗರವನ್ನಾಗಿ ರೂಪಿಸುವ ಮಾಸ್ಟರ್ ಪ್ಲಾನ್ ಸಿದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನೆಹರು ಗಂಜ್ನ ನಗರೇಶ್ವರ ಶಾಲೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ 71ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ವಿದೇಶಿ ಬಂಡವಾಳ ಆಕರ್ಷಣೆ, ಉದ್ಯೋಗ ಸೃಷ್ಟಿ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಿ ನವ ಕರ್ನಾಟಕಕ್ಕೆ ಪೂರಕವಾಗಿ ನವ ಕಲಬುರಗಿ ನಿರ್ಮಾಣ ಮಾಡಲಾಗುವುದು. ಕಳೆದ ವರ್ಷ ಇದೇ ವೇದಿಕೆಯಲ್ಲಿ ನೀಲಿ ಮತ್ತು ಹಸಿರು ಅಭಿವೃದ್ಧಿ ಮಾಡುವುದಾಗಿ ಘೋಷಿಸಿದ್ದೆ. ಇದೀಗ ನೀಲಿನೆ ರೂಪಿಸಿದ್ದು, ಎರಡು ವರ್ಷಗಳಲ್ಲಿ ನಮ್ಮ ಯೋಜನೆಗಳು ಕಾರ್ಯಗತಗೊಳ್ಳಲಿವೆ ಎಂದು ತಿಳಿಸಿದರು.
ಸ್ಪರ್ಧಾತ್ಮಕ ಪರೀೆ ಎದುರಿಸುವ ಯುವಜನತೆಗೆ ನೆರವಾಗಲು ಪ್ರಬುದ್ಧ ಅಕಾಡೆಮಿ ಸ್ಥಾಪಿಸಲಾಗಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಕಲಬುರಗಿ ನೆಕ್ಟ್$್ಸ ಫೌಂಡೇಷನ್ ಸ್ಥಾಪಿಸಲಾಗಿದೆ. ಜಿಲ್ಲೆ ಅಭಿವೃದ್ಧಿಗೆ ಶ್ರಮಿಸುವ ಇಂತಹ ಸಂಸ್ಥೆ ಬೇರೆಲ್ಲೂ ಕಾಣಸಿಗದು. ಅಭಿವೃದ್ಧಿ ಪಯಣದಲ್ಲಿ ಸರ್ಕಾರದೊಂದಿಗೆ ಎಲ್ಲ ಜನಪ್ರತಿನಿಧಿಗಳು, ಪತ್ರಕರ್ತರು, ಸಾರ್ವಜನಿಕರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಶಶೀಲ್ ನಮೋಶಿ, ಜೆಸ್ಕಾಂ ಅಧ್ಯಕ್ಷ ಪ್ರವಿಣ ಪಾಟೀಲ್ ಹರವಾಳ, ಜಿಲ್ಲಾಧಿಕಾರಿ ಇಕ್ರಮ್ ಶರೀಫ್, ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್, ಐಜಿಪಿ ಶಾಂತನು ಸಿನ್ಹಾ, ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ., ಎಸ್ಪಿ ಅಡ್ಡೂರು ಶ್ರೀನಿವಾಸುಲು, ಕೆಕೆಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಡಾ.ಬಿ. ಸುಶೀಲಾ, ಜಿಪಂ ಸಿಇಒ ರಾಹುಲ್ ಸಂಕನೂರ, ಮಹಾನಗರ ಪಾಲಿಕೆ ಆಯುಕ್ತ ಪಿ.ಶ್ರವಣಕುಮಾರ, ಡಿಸಿಪಿ ಶಾಲು, ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ರಿತಿಕಾ ವರ್ಮಾ ಇತರರಿದ್ದರು. ಪ್ರಾಧ್ಯಾಪಕಿ ಸುಜಾತಾ ಪಾಟೀಲ್ ಮತ್ತು ಉಪನ್ಯಾಸಕ ಮಾರುತಿ ಬೇಂದ್ರೆ ನಿರೂಪಣೆ ಮಾಡಿದರು.
ಬಳಿಕ ನಗರೇಶ್ವರ ಶಾಲೆಯಿಂದ ಡಾ.ಎಸ್.ಎಂ. ಪಂಡಿತ ರಂಗಮಂದಿರವರೆಗೆ ಸಾಗಿದ ನಾಡದೇವತೆ ಭುವನೇಶ್ವರಿ ಭಾವಚಿತ್ರದ ಭವ್ಯ ಮೆರವಣಿಗೆಗೆ ಸಚಿವ ಪ್ರಿಯಾಂಕ್ ರ್ಖಗೆ ಡೊಳ್ಳು ಬಾರಿಸಿ ಚಾಲನೆ ನೀಡಿದರು. ವಿವಿಧ ಸ್ತಬ್ಧಚಿತ್ರಗಳು ಗಮನ ಸೆಳೆದವು.
ರಾಜ್ಯದ ಒಟ್ಟು ಜಿಡಿಪಿಗೆ ಬೆಂಗಳೂರು ನಗರ ಜಿಲ್ಲೆ ಪಾಲು ಶೇ.40, ಕಲಬುರಗಿ ಜಿಲ್ಲೆ ಕೊಡುಗೆ ಈಗ ಶೇ.1.9 ಇದೆ. ಈ ಪ್ರಮಾಣ ಗಣನೀಯ ಹೆಚ್ಚಿಸುವ ಗುರಿ ಹೊಂದಲಾಗಿದೆ. ಕಲ್ಯಾಣ ಕರ್ನಾಟಕದ ಆರ್ಥಿಕ ಚೈತನ್ಯ ಹೆಚ್ಚಿಸಲು ಕಕ ಎಕನಾಮಿಕ್ ಮಿಷನ್ ಸ್ಥಾಪಿಸುವುದಾಗಿ ಸಿಎಂ ೂಷಿಸಿದ್ದಾರೆ. ಶ್ರೀದಲ್ಲಿಯೇ ಲೀಪ್ ಯೋಜನೆಯಡಿ ಎಲೆಕ್ಟ್ರಾನಿಕ್ಸ್ ಮತ್ತು ಟೆಕ್ಸ್ಟೈಲ್ ಉದ್ಯಮಕ್ಕೆ ಸಂಬಂಧಿಸಿದ ತರಬೇತಿ ಕಾರ್ಯಾಗಾರ ಆರಂಭಿಸಲಾಗುವುದು. ಜಿಲ್ಲೆಯ ಜನರ ಜೀವನಮಟ್ಟ ಸುಧಾರಣೆಯಾಗಿ ತಲಾ ಆದಾಯ ಹೆಚ್ಚಿಸುವುದೇ ಮುಖ್ಯ ಗುರಿಯಾಗಿದೆ ಎಂದು ಸಚಿವ ಪ್ರಿಯಾಂಕ್ ತಿಳಿಸಿದರು. ಕಲ್ಯಾಣ ಕರ್ನಾಟಕ ಬಯೋ ಎಕನಾಮಿಕ್ ಮಿಷನ್ ಮೂಲಕ ರೈತರ ತಲಾದಾಯ ವೃದ್ಧಿಗೆ ಹೊಸ ಬಾಗಿಲುಗಳನ್ನು ತೆರೆಯಲಾಗುತ್ತಿದೆ. ತಂತ್ರಜ್ಞಾನವನ್ನು ಕೃಷಿ ೇತ್ರಕ್ಕೆ ಜೋಡಿಸಿ ಸ್ಥಳಿಯ ಪ್ರಸಿದ್ಧ ಉತ್ಪನ್ನಗಳಾದ ಕಲಬುರಗಿ ತೊಗರಿ ಮತ್ತು ಕಮಲಾಪುರ ಬಾಳೆಹಣ್ಣಿಗೆ ಜಾಗತಿಕ ಮಟ್ಟದ ಮಾರುಕಟ್ಟೆ ಕಲ್ಪಿಸಲಾಗುವುದು ಎಂದರು.
ಇತ್ತೀಚೆಗೆ ದಸರಾಕ್ಕೆ ಆಗಮಿಸಿದ್ದ 40ಕ್ಕೂ ಹೆಚ್ಚು ವಿದೇಶಿ ರಾಯಭಾರಿಗಳೊಂದಿಗೆ ಸಂವಾದ ನಡೆಸುವ ಅವಕಾಶ ಸಿಕ್ಕಿತ್ತು. ಕನ್ನಡ ಭಾಷೆೆಗೆ 2,000 ವರ್ಷದ ಸುದೀರ್ ಇತಿಹಾಸವಿದೆ ಎಂಬುದನ್ನು ತಿಳಿದು ವಿದೇಶಿ ಪ್ರತಿನಿಧಿಗಳು ಆಶ್ಚರ್ಯ ಹಾಗೂ ಸಂತಸ ವ್ಯಕ್ತಪಡಿಸಿದ್ದಾರೆ. ಕನ್ನಡ ಕೇವಲ ಭಾಷೆಯಲ್ಲ, ಅದು ಭಾವನೆ, ಇತಿಹಾಸ ಮತ್ತು ವಿಚಾರ&ಆಚಾರಗಳ ಸಂಗಮ. ಜನಪದ, ದಾಸ, ಜೈನ, ನವೋದಯ, ನವ್ಯ ಮತ್ತು ಬಂಡಾಯ ಸಾಹಿತ್ಯದಂತಹ ವೈವಿಧ್ಯಮಯ ಪರಂಪರೆ ಬೇರಾವ ಭಾಷೆಯಲ್ಲೂ ಕಾಣಸಿಗುವುದಿಲ್ಲ ಎಂದು ಸಚಿವ ಪ್ರಿಯಾಂಕ್ ಹೇಳಿದರು. ಕರ್ನಾಟಕ ವೈವಿಧ್ಯದಿಂದ ಕೂಡಿದೆ. ಮಲೆನಾಡು ಹಸಿರ ಸಿರಿಯಾದರೆ, ಕಲ್ಯಾಣ ಕರ್ನಾಟಕ ತೊಗರಿ ಕಣಜ ಹಾಗೂ ಸೂಫಿ&ಸಂತರ ನಾಡು. ಮಂಡ್ಯ ರೇಷ್ಮೆ&ಹಾಲಿನ ನಾಡಾದರೆ, ಕರಾವಳಿ ವಿಭಿನ್ನ ಸಂಸತಿಯ ನೆಲೆ. ಬಸವಣ್ಣನವರ ಸಮಾನತೆ ತತ್ವ ಸಾರಿದ ಈ ನೆಲ ಜಾಗತಿಕ ಮಟ್ಟದಲ್ಲಿ ಜ್ಞಾನದ ನಾಡಾಗಿ ಗುರುತಿಸಿಕೊಂಡಿದ