ಆಳಂದ: ಮುಂಬರುವ ಚುನಾವಣೆಯಲ್ಲಿ ಗುತ್ತೇದಾರ್ ಕುಟುಂಬದವರು ಯಾರೇ ಸ್ಪರ್ಧಿಸಿದರೂ ಲಿಂಗಾಯತ ಸಮುದಾಯ ತಕ್ಕ ಪಾಠ ಕಲಿಸಲಿದೆ ಎಂದು ಕೆವೈಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ ಸಾವಳೇಶ್ವರ ಎಚ್ಚರಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ್ ಅವರು ಶಾಸಕ ಬಿ.ಆರ್.ಪಾಟೀಲ್ ಅವರನ್ನು ಏಕವಚನದಲ್ಲಿ ಅವಹೇಳನ ಮಾಡಿರುವುದನ್ನು ಖಂಡಿಸಿ ಬಸ್ ನಿಲ್ದಾಣ ಎದುರು ಲಿಂಗಾಯತ ಸಮುದಾಯದಿಂದ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆ ಮಾಡಿ, ಅದು ಬಿಟ್ಟು ವೈಯಕ್ತಿಕ ಅವಹೇಳನ ಸರಿಯಲ್ಲ. ತಂದೆ-ಮಗನ ರಾಜಕೀಯ ಜೀವನ 2027ರಲ್ಲಿ ಅಂತ್ಯವಾಗಲಿದೆ ಎಂದು ಕಿಡಿಕಾರಿದರು.
ಪ್ರಮುಖರಾದ ಶರಣಬಸಪ್ಪ ಭೂಸನೂರ, ಬಸವರಾಜ ಪವಾಡಶೆಟ್ಟಿ, ಗುರುಶರಣಗೌಡ ಪಾಟೀಲ್, ಗುರುಲಿಂಗಜಂಗಮ ಪಾಟೀಲ್, ಗುರುಶಾಂತ ಪಾಟೀಲ್, ಸಾತಲಿಂಗಪ್ಪ ಪಾಟೀಲ್, ಲಿಂಗರಾಜ ಪಾಟೀಲ್, ಶರಣಬಸಪ್ಪ ವಾ, ಸತೀಶ ಪನಶೆಟ್ಟಿ, ಪಂಡಿತ ಶೇರಿಕಾರ, ಗಣೇಶ ಪಾಟೀಲ್, ಆನಂದ ದೇಶಮುಖ, ಸಂತೋಷ ವಾಲೆ, ಅಪ್ಪಾರಾವ ಜವಳಿ ಇತರರಿದ್ದರು.
ಲಿಂಗಾಯತ ಭವನದಿಂದ ಪ್ರಾರಂಭವಾದ ಪ್ರತಿಭಟನೆ ಮೆರವಣಿಗೆ ರಜ್ವಿ ರಸ್ತೆ, ಸಿದ್ದಾರ್ಥ ಚೌಕ್, ಹಳೇ ತಹಸಿಲ್ ಕಚೇರಿ, ಚಕ್ರಕಟ್ಟ, ಗಣೇಶ ಮಂದಿರ, ಶ್ರೀರಾಮ ಮಾರ್ಕೆಟ ಮಾರ್ಗವಾಗಿ ಬಸ್ ನಿಲ್ದಾಣದ ತಲುಪಿತು. ದಾರಿಯುದ್ದಕ್ಕೂ ಗುತ್ತೇದಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.