ಕಲಬುರಗಿ: ತಾರಫೈಲ್ ಪ್ರದೇಶದಲ್ಲಿ ಸೌಕರ್ಯಗಳಿಲ್ಲದೆ ಸಮಸ್ಯೆಗಳ ಸುಳಿಗೆ ಸಿಲುಕಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದನ್ನು ಮಹಾನಗರ ಪಾಲಿಕೆ ಸದಸ್ಯ ಸಚಿನ್ ಶಿರವಾಳ ದತ್ತು ತೆಗೆದುಕೊಂಡು ಮಾದರಿ ರೀತಿಯಲ್ಲಿ ಅಭಿವೃದ್ಧಿಪಡಿಸುವ ಮೂಲಕ ಮಕ್ಕಳು ಸ್ಮಾರ್ಟ್ ಕ್ಲಾಸ್ನಲ್ಲಿ ಕುಳಿತುಕೊಳ್ಳುವಂತೆ ಮಾಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನಸೇವಾ ಮನೋಭಾವ ಹಾಗೂ ಸಮಾಜಮುಖಿ ಚಿಂತನೆಗೆ ಗೌರವ ಸಲ್ಲಿಸಲು ಸರ್ಕಾರಿ ಶಾಲಾ ಕಟ್ಟಡದಲ್ಲಿ ಸಣ್ಣಪುಟ್ಟ ರಿಪೇರಿ ಕೆಲಸ ಮಾಡಿಸಿ ಬಣ್ಣ ಬಳಿಯಲಾಗಿದೆ. ಮಕ್ಕಳಲ್ಲಿ ಸೃಜನಶೀಲತೆ ಹಾಗೂ ಕಲಿಕೆಯ ಆಸಕ್ತಿ ಹೆಚ್ಚಿಸಲು ಶಾಲೆ ಸುತ್ತುಗೋಡೆ ಮೇಲೆ ಆಕರ್ಷಕ ಕಲಾತ್ಮಕ ಚಿತ್ರಕಲೆಗಳನ್ನು ಬಿಡಿಸಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ಆಧುನಿಕ ತಂತ್ರಜ್ಞಾನ ಮೂಲಕ ಗುಣಮಟ್ಟದ ಶಿಕ್ಷಣ ಒದಗಿಸಲು ಸ್ಮಾರ್ಟ್ ಕ್ಲಾಸ್ಗಳನ್ನಾಗಿ ಪರಿವರ್ತಿಸಲಾಗಿದೆ. ಇಡೀ ಶಾಲೆ ಆವರಣ ಹಾಗೂ ಸುತ್ತಲಿನ ಪ್ರದೇಶದಲ್ಲಿ ಹಸಿರು ವಾತಾವರಣಕ್ಕಾಗಿ ಸಸಿಗಳನ್ನು ಶಿರವಾಳ ನೆಡಿಸಿದ್ದಾರೆ. ಇದಕ್ಕಾಗಿ ಸ್ವಂತ ಹಣ ವೆಚ್ಚ ಮಾಡಿದ್ದಾರೆ. ಅದೇ ಶಾಲೆಯಲ್ಲಿ ಸಚಿವ ರ್ಖಗೆ ಜನ್ಮದಿನ ಆಚರಿಸಿ ಅರ್ಥಪೂರ್ಣಗೊಳಿಸಿದ್ದಾರೆ.
ಶಾಸಕರಾದ ಅಲ್ಲಮಪ್ರಭು ಪಾಟೀಲ್, ಜಗದೇವ ಗುತ್ತೇದಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಕಿರಣ ದೇಶಮುಖ, ಕುಡಾ ಅಧ್ಯಕ್ಷ ಮಜರ್ ಅಲಂಖಾನ್, ಕೆಕೆಆರ್ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಹ್ಮದ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಣುಕಾ ಹೋಳ್ಕರ್, ಮುಖಂಡರಾದ ಸಂತೋಷ ಪಾಟೀಲ್ ದಣ್ಣೂರ, ಬಸವರಾಜ ಬಿರಾದಾರ ಸೊನ್ನ, ರಾಜೀವ ಜಾನೆ, ಈರಣ್ಣ ಝಳಕಿ, ಪಪ್ಪು ಪಟೇಲ್, ಫಾರೂಕ್ ಸೇಠ, ಶ್ರೀನಿವಾಸ ಲಾಖೆ, ಅಜರುದ್ದೀನ್, ಅಜಿಮುದ್ದೀನ್ ಇತರರು ನವೀಕೃತ ಶಾಲೆ ಉದ್ಘಾಟನೆ ಹಾಗೂ ಪ್ರಿಯಾಂಕ್ ರ್ಖಗೆ ಜನ್ಮದಿನದಲ್ಲಿ ಭಾಗಿಯಾಗಿ ಸಸಿಗಳನ್ನು ನೆಟ್ಟು ಮಕ್ಕಳೊಂದಿಗೆ ಸಂಭ್ರಮಿಸಿದರು.