ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಗುರುವಾರ ಸಡಗರ, ಸಂಭ್ರಮದಿಂದ ಆಚರಿಸಿದರು. ಡೀನ್​ ಪ್ರೊ.ಜಿ.ಆರ್​.ಅಂಗಡಿ, ಅಧ್ಯಾಪಕರಾದ ಡಾ.ಥಿಯಾಗೊ, ಡಾ.ಮಯೂರ್​ ಪೂಜಾರ, ಡಾ.ಗುರು.ಬಿ, ಡಾ.ಬುಚಿ ರೆಡ್ಡಿ, ಡಾ.ಚಂದ್ರಶೇಖರ ಗೌಡ, ಡಾ.ಅಖಿಲೇಶ, ಡಾ.ನಿಶಾ ಪ್ರಜಾಪತಿ, ಡಾ.ಸುರೇಶ, ಡಾ.ಸಾಯಿ ಆಭಿನವ್​ ಇತರರಿದ್ದರು. 
ಕಲಬುರಗಿ

ಕಲಬುರಗಿ ಸಿಯುಕೆನಲ್ಲಿ ಅದ್ದೂರಿ ಆಚರಣೆ

ಪ್ರಮುಖ ಮುಖ್ಯಾಂಶಗಳು

  • ಮಕರ ಸಂಕ್ರಾಂತಿ ವೈವಿದ್ಯತೆಯಲ್ಲಿ ಏಕತೆ
  • ಕಾರ್ಯಕ್ರಮಕ್ಕೆ ಡೀನ್​ ಪ್ರೊ.ಜಿ.ಆರ್​.ಅಂಗಡಿ ಚಾಲನೆ
ಕಲಬುರಗಿ: ನಗರದ ಹೊರವಲಯದ ಕಡಗಂಚಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗವು, ಹಬ್ಬಗಳ ಮೂಲಕ ಮೌಲ್ಯಾಧಾರಿತ ಶಿಕ್ಷಣದ ಮಹತ್ವ ಒತ್ತಿಹೇಳುವ ಮಹತ್ವದ ಸುಗ್ಗಿಯ ಹಬ್ಬವಾದ ಮಕರ ಸಂಕ್ರಾಂತಿಯನ್ನು ಗುರುವಾರ ವಿಜೃಂಭಣೆಯಿಂದ ಆಚರಿಸಿತು.
ಮಕರ ಸಂಕ್ರಾಂತಿ, ಸೂರ್ಯನು ಮಕರ ರಾಶಿಗೆ ಪರಿವರ್ತನೆಯಾಗುವುದನ್ನು ಸೂಚಿಸುತ್ತದೆ. ಇದು ಪ್ರಕೃತಿಯ ಸಮೃದ್ಧಿಗೆ ಕೃತತೆ ವ್ಯಕ್ತಪಡಿಸಲು, ದೀರ್ ದಿನಗಳು ಮತ್ತು ಬೆಚ್ಚಗಿನ ಹವಾಮಾನ ಸ್ವಾಗತಿಸಲು, ಆಧ್ಯಾತ್ಮಿಕ ಬೆಳವಣಿಗೆ ಹೊಸ ಆರಂಭದ ಪ್ರಯಾಣ ಕೈಗೊಳ್ಳುವ ಸಮಯವೂ ಆಗಿದೆ. ಈ ಸಂತೋಷದಾಯಕ ಹಬ್ಬವನ್ನು ಬೇರೆ ಬೇರೆ ರಾಜ್ಯಗಳಲ್ಲಿ ವಿವಿಧ ಹೆಸರಿನಿಂದ ಕರೆಯಲಾಗುತ್ತದೆ. ತಮಿಳುನಾಡಿನಲ್ಲಿ ಪೊಂಗಲ್​ ಎಂದು, ಪಂಜಾಬ್​ ಮತ್ತು ಹರಿಯಾಣದಲ್ಲಿ ಲೋಹ್ರಿ, ಗುಜರಾತ್​ನಲ್ಲಿ ಉತ್ತರಾಯಣ, ಅಸ್ಸಾಂನಲ್ಲಿ ಮಾ ಬಿಹು, ಪಶ್ಚಿಮ ಬಂಗಾಳದಲ್ಲಿ ಪೌತಿ ಸಂಕ್ರಾಂತಿ, ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಖಿಚ್ಡಿ ಪರ್ವ್​, ಆಂಧ್ರಪ್ರದೇಶ, ಕರ್ನಾಟಕ ಮತ್ತು ತೆಲಂಗಾಣಗಳಲ್ಲಿ ಸಂಕ್ರಾಂತಿ ಎಂದು ಹೀಗೆ ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ.
ಈ ಆಚರಣೆಯು ವಿದ್ಯಾರ್ಥಿಗಳಲ್ಲಿ ಮೌಲ್ಯಯುತ ಶೈಕ್ಷಣಿಕ ಒಳನೋಟಗಳೊಂದಿಗೆ, ಕಾಲೋಚಿತ ಬದಲಾವಣೆಗಳು ಮತ್ತು ಸೌರ ಚಲನೆಗಳನ್ನು ಕಲಿಸುವುದು, ಭಾರತೀಯ ಕೃಷಿ ಪದ್ಧತಿ ಮತ್ತು ಸಾಂಸತಿಕ ವೈವಿಧ್ಯತೆ ಎತ್ತಿ ತೋರಿಸುವುದು, ಹಂಚಿಕೆ, ಕೃತತೆ ಮತ್ತು ಸಮುದಾಯ ಬಾಂಧವ್ಯದ ಮೌಲ್ಯಗಳನ್ನು ಪ್ರೋತ್ಸಾಹಿಸುವುದು ಇದರ ಉದ್ದೇಶ.
ಡೀನ್​ ಪ್ರೊ.ಜಿ.ಆರ್​.ಅಂಗಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಧ್ಯಾಪಕರಾದ ಡಾ.ಥಿಯಾಗೊ,ಡಾ. ಮಯೂರ್​ ಪೂಜಾರ, ಡಾ.ಗುರು.ಬಿ, ಡಾ.ಬುಚಿ ರೆಡ್ಡಿ, ಡಾ.ಚಂದ್ರಶೇಖರ ಗೌಡ, ಡಾ.ಆಖಿಲೆಶಾ, ಡಾ.ನಿಶಾ ಪ್ರಜಾಪತಿ, ಡಾ.ಸುರೆಶ, ಡಾ. ಸಾಯಿ ಆಭಿನವ, ಪಿಎಚ್​ಡಿ, ಎಂ.ಇಡಿ, ಬಿ.ಇಡಿ ವಿದ್ಯಾರ್ಥಿಗಳು ಮತ್ತು ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.
"

ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ವಿಜ್ಞಾನ, ಸಂಸತಿ ಮತ್ತು ಸಂಪ್ರದಾಯ ಸಂಯೋಜಿಸುವುದನ್ನು ಈ ಹಬ್ಬ ಕಲಿಸುತ್ತದೆ. ನಮ್ಮ ವಿಶ್ವವಿದ್ಯಾಲಯ 22ಕ್ಕೂ ಹೆಚ್ಚು ರಾಜ್ಯಗಳ ವಿದ್ಯಾರ್ಥಿಗಳನ್ನು ಹೊಂದಿದ್ದು, ಅವರು ವೈವಿಧ್ಯತೆಯಲ್ಲಿ ಏಕತೆಯ ಸಂಕೇತವಾಗಿ ಮಕರ ಸಂಕ್ರಾಂತಿಯನ್ನು ಸಡಗರದಿಂದ ಆಚರಿಸಿದ್ದಾರೆ.

ಪ್ರೊ.ಜಿ.ಆರ್​.ಅಂಗಡಿ,ಡೀನ್​, ಸಿಯುಕೆ, ಕಲಬುರಗಿ.