ಸೇಡಂನ ಪ್ರಮುಖ ಬೀದಿಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಿಂದ ಆಕರ್ಷಕ ಪಥಸಂಚಲನ ಜರುಗಿತು.  
ಕಲಬುರಗಿ

ರಾಷ್ಟ್ರೀಯ ಸ್ವಯಂಸೇವಕರಿಂದ ಶಿಸ್ತಿನ ಹೆಜ್ಜೆ

ಸೇಡಂ: ವಿಜಯದಶಮಿ ನಿಮಿತ್ತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಭಾನುವಾರ ಆಕರ್ಷಕ ಪಥಸಂಚಲನ ನಡೆಸಿದರು.

ಮಾತೃಛಾಯ ಕಾಲೇಜು ಆವರಣದಿಂದ ಒಂದು ತಂಡದ ಸಂಚಲನ ಆರಂಭಗೊಂಡು ಬಸವನಗರ, ಇಂದಿರಾನಗರ, ವಿದ್ಯಾನಗರ, ಬಸವನಗರ ತಾಂಡಾ, ಡಿಬಿಆರ್​ ಕಾಂಪೌಂಡ್​, ಎಲ್​ಎನ್​ಟಿ ರಸ್ತೆ, ದೊಡ್ಡ ಅಗಸಿ, ರಂಗರೇಜಗಲ್ಲಿ, ಹೋಳಿ ಮೈದಾನ, ತೆಗ್ಗಿನಗೇರಿ, ನೂಲಾಗಲ್ಲಿ, ಬ್ರಾಹ್ಮಣಗಲ್ಲಿ, ಹಲಕರ್ಟಿಗಲ್ಲಿ ಸೇರಿ ಇನ್ನಿತರ ಬಡಾವಣೆಗಳಲ್ಲಿ ಸಂಚರಿಸಿತು. ಇನ್ನೊಂದು ತಂಡದ ಸಂಚಲನ ಹೌಸಿಂಗ್​ ಬೋರ್ಡ್​ ಕಾಲನಿ ಶ್ರೀ ಶಿವಾಂಜನೇಯ ದೇವಸ್ಥಾನದಿಂದ ಆರಂಭಗೊಂಡು, ಗಣೇಶನಗರ, ಊಡಗಿ ರಸ್ತೆ, ವೆಂಕಟೇಶನಗರ, ವಿದ್ಯಾನಗರ, ಮುಖ್ಯರಸ್ತೆ, ರಥಬೀದಿ ಮುಖಾಂತರ ಚೌರಸ್ತಾ ತಲುಪಿತು. ಇಲ್ಲಿ ಎರಡು ತಂಡಗಳು ಸಂಗಮಗೊಂಡವು. ಅಲ್ಲಿಂದ ಕಿರಾಣಾ ಬಜಾರ್​ ಮಾರ್ಗವಾಗಿ ಮರಳಿ ಶಿಸ್ತಿನ ನಡಿಗೆಯೊಂದಿಗೆ ಮಾತೃಛಾಯ ಕಾಲೇಜು ಆವರಣಕ್ಕೆ ವಾಪಸ್​ ಆಗಿ ಸಮಾವೇಶಗೊಂಡವು. ದಾರಿಯುದ್ದಕ್ಕೂ ಸಾರ್ವಜನಿಕರಿಂದ ಭವ್ಯ ಸ್ವಾಗತ ಕೋರಲಾಯಿತು. ಗಣವೇಷಧಾರಿಗಳ ಮೇಲೆ ಪುಷ್ಪವೃಷ್ಟಿ ಸುರಿಸಿದರು. ಭಾರತ್​ ಮಾತಾಕೀ ಜೈ.. ಸೇರಿ ವಿವಿಧ ಜೈೂಷ ಮೊಳಗಿದವು.

ಮಾಜಿ ಶಾಸಕ ರಾಜಕುಮಾರ ಪಾಟೀಲ್​ ತೆಲ್ಕೂರ, ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ತಾಲೂಕು ಅಧ್ಯಕ್ಷ ಶರಣು ಮೆಡಿಕಲ್​, ಪ್ರಮುಖರಾದ ಡಾ.ಪ್ರಕಾಶ ಕುಲಕರ್ಣಿ, ಶಿವಕುಮಾರ ಪಾಟೀಲ್​ ತೆಲ್ಕೂರ, ಶಿವಲಿಂಗರೆಡ್ಡಿ ಪಾಟೀಲ್​ ಬೆನಕನಹಳ್ಳಿ, ರಾಜಶೇಖರ ನೀಲಂಗಿ, ಪ್ರವಿಣ ಕುಲಕರ್ಣಿ, ಶಿವಕುಮಾರ ಬೋಳಶೆಟ್ಟಿ, ಡಾ.ಶ್ರೀನಿವಾಸ ಮೊಕದಂ, ಡಾ.ರಾಜಕುಮಾರ ಬಿರಾದಾರ, ಡಾ.ಎಚ್​.ಎಸ್​.ಲಗಶೆಟ್ಟಿ, ಸತೀಶ ಪಾಟೀಲ್​ ತರನಳ್ಳಿ, ಡಾ.ಸಾಬಯ್ಯ ಬೋವಿ, ಡಾ.ವಿನೋದಕುಮಾರ ಸಂಗಾವಿ, ಓಂಪ್ರಕಾಶ ಪಾಟೀಲ್​, ರಾವೇಂದ್ರ ಮೆಕಾನಿಕ್​, ರಾವೇಂದ್ರ ಮುಸ್ತಾಜರ್​, ವಸಂತ ಪೂಜಾರಿ, ಸಿದ್ದಣ್ಣಶೆಟ್ಟಿ, ವೆಂಕಟೇಶ ಪಾಟೀಲ್​, ರಾಜು ಅವಂಟಿ, ಶಾಂತಕುಮಾರ ಚನ್ನಕ್ಕಿ, ಅಶೋಕ ಪವಾರ, ವೀರೇಶ ಹೂಗಾರ, ಕಾಶೀನಾಥ ನಿಡಗುಂದಾ, ಶ್ರೀಮಂತ ಅವಂಟಿ, ನಾಗಪ್ಪ ಕೊಳ್ಳಿ, ಅನೀಲ ಐನಾಪುರ ಇತರರಿದ್ದರು.