- ಲಕ್ಷ್ಮೀ ಪಾಟೀಲ್ ರೇವೂರ ಹೇಳಿಕೆ
- ಜ್ಞಾನದೀಪ ನೃತ್ಯ ಕಲಾ ಸಂಸ್ಥೆಯಿಂದ ಆಯೋಜನೆ
ಕಲಬುರಗಿ: ನಮ್ಮ ಸಂಸತಿ ಮತ್ತು ಪರಂಪರೆ ಉಳಿಸಿ ಬೆಳೆಸುವಲ್ಲಿ ನೃತ್ಯ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಸಾಮಾಜಿಕ ಕಾರ್ಯಕರ್ತೆ ಲಕ್ಷಿ$್ಮ ಡಿ. ಪಾಟೀಲ್ ರೇವೂರ ಹೇಳಿದರು.
ನಗರದ ಅನ್ನಪೂರ್ಣ ಕ್ರಾಸ್ ಬಳಿಯ ಕಲಾಮಂಡಲದಲ್ಲಿ ಜ್ಞಾನದೀಪ ನೃತ್ಯ ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸತಿ ಇಲಾಖೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ನೃತ್ಯೋತ್ಸವದಲ್ಲಿ ಮಾತನಾಡಿದರು.
ಲೇಖಕಿ ಶ್ರೀಮತಿ ಪಲ್ಲವಿ ಆರ್. ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು. ಕಲಾವಿದರಾದ ಸೂರ್ಯಕಾಂತ ನಂದೂರ ಹಾಗೂ ಹಿರಿಯ ನೃತ್ಯ ಕಲಾವಿದ ಯಂಕಪ್ಪ (ಅಕ್ಷಯ್), ಸೂರಜ್ ಲೋನಾರ್, ಸಂಸ್ಥೆ ಅಧ್ಯೆ ಪ್ರೇಮ ಭಾವಿಮನಿ ಹಾಗೂ ಕಾರ್ಯದರ್ಶಿ ಶ್ವೇತಾ ಕಟ್ಟಿಮನಿ ಇತರರಿದ್ದರು. ಶರಣಬಸಪ್ಪ ಬಮನಳ್ಳಿ ನಿರೂಪಣೆ ಮಾಡಿದರು.
ಸಾಂಸ್ಕೃತಿಕ ವೈಭವ: ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಕಲಾ ತಂಡಗಳಿಂದ ಭರತನಾಟ್ಯ, ಜಾನಪದ ಹಾಗೂ ಸಮೂಹ ನೃತ್ಯಗಳ ವೈವಿಧ್ಯಮಯ ಪ್ರದರ್ಶನ ನಡೆದವು. ಪಂಚಾಕ್ಷರಿ ಸಂಗೀತ ಕಲಾತಂಡ, ಪ್ರಿಯಾ ನೃತ್ಯಾಲಯ, ವಿವಿಎನ್ ನೃತ್ಯ ಕಲಾತಂಡ, ಸೂರಜ್ ಲೋನಾರ ಕಲಾತಂಡ, ಶಾಂತಲೇ ಸಾಂಸತಿಕ ನೃತ್ಯ ತಂಡ, ಜ್ಯೋತಿ ಜಾನಪದ ಕಲಾತಂಡ, ಮನಸ್ವಿ ಸಾಂಸತಿಕ ನಾಟ್ಯ ಕಲಾತಂಡ ಹಾಗೂ ಜ್ಞಾನ ಸುರಭಿ ಕಲಾತಂಡಗಳ ಕಲಾವಿದರು ಅದ್ಭುತ ನೃತ್ಯ ಚಾತುರ್ಯದ ಮೂಲಕ ಪ್ರೇಕ್ಷಕರ ಮನಗೆದ್ದರು.