ganja seized 
ಕಲಬುರಗಿ

ಕಲಬುರಗಿಯಲ್ಲಿ 56 ಗ್ರಾಂ ಗಾಂಜಾ ವಶಕ್ಕೆ

ಕಲಬುರಗಿ: ನಗರದ ಕೋರಂಟಿ ಹನುಮಾನ ಮಂದಿರದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಸ್ಟೇಷನ್​ ಬಜಾರ್​ ಪೊಲೀಸರು ವಶಕ್ಕೆ ಪಡೆದು, ಆತನಿಂದ ೫೬ ಗ್ರಾಂ. ಗಾಂಜಾ ವಶಕ್ಕೆ ಪಡೆಯಲಾಗಿದೆ. ತಾರೈಲ್​ ಇರಾನಿ ಗಲ್ಲಿಯ ಸಾದಿಕ್​ ಹುಸೇನ್​(೩೬) ಬಂಧಿತ ಆರೋಪಿ. ಕೋರಂಟಿ ಹನುಮಾನ್​ ಗುಡಿ ರಸ್ತೆಯ ನೀರಿನ ಟ್ಯಾಂಕ್​ ಕೆಳಗಿನ ಖುಲ್ಲಾ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಪೊಲೀಸರಿಗೆ ದೊರೆತ್ತಿತ್ತು. ಪಿಎಸ್​ಐ ಇಂದಿರವ್ವ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ, ೨೫೦೦ ರೂ. ಮೌಲ್ಯದ ೫೬ ಗ್ರಾಂ ಗಾಂಜಾ ಹಾಗೂ ಸ್ಕೂಟರ್​, ಮೊಬೈಲ್​, ೧೦೦ ನಗದು ಜಪ್ತಿ ಮಾಡಿಕೊಳ್ಳಲಾಗಿದೆ. ವಿಚಾರಣೆ ನಡೆಸಿದಾಗ ಬೀದರ್​ ನಗರದ ಇರಾನಿ ಗಲ್ಲಿಯ ಅಪರಿಚಿತ ವ್ಯಕ್ತಿಯಿಂದ ೫೦ ಗ್ರಾಂ ಗಾಂಜಾವನ್ನು ಖರೀದಿಸಿ, ಇಲ್ಲಿ ಸರ‍್ವಜನಿಕರಿಗೆ ಮಾರಾಟ ಮಾಡುತ್ತಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.