prison for corrupt officials
ಕಲಬುರಗಿ: ಹೊರಗುತ್ತಿಗೆ ನೌಕರನ ನೇಮಕಾತಿಗೆ ಶಿಫಾರಸು ಮಾಡಲು ಲಂಚ ಪಡೆದಿದ್ದ ಎಂಎಸ್ಐಎಲ್ ಕಚೇರಿಯ ಇಬ್ಬರು ಅಧಿಕಾರಿಗಳಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯವು ೪ ರ‍್ಷ ಜೈಲು ಶಿಕ್ಷೆ ಹಾಗೂ ತಲಾ ೨೦ ಸಾವಿರ ರೂ. ದಂಡ ವಿಧಿಸಿ ಸೋಮವಾರ ತರ‍್ಪು ನೀಡಿದೆ.
ಎಂಎಸ್ಐಎಲ್ನಲ್ಲಿ ಎ.ಡಿ.ಇ.ಓ ಆಗಿ ನೇಮಕಗೊಳ್ಳಲು ಸಿದ್ದಲಿಂಗ ಎಂಬುವವರು ರ‍್ಜಿ ಸಲ್ಲಿಸಿದ್ದರು. ಅವರ ನೇಮಕಾತಿಗೆ ಶಿಫಾರಸು ಮಾಡಲು ಡಿಎಲ್ಓ ಚಂದ್ರಶೇಖರ ಸಲಾಕೆ ೧ ಲಕ್ಷ ರೂ. ಬೇಡಿಕೆಯಿಟ್ಟು, ಮುಂಗಡವಾಗಿ ೫೦ ಸಾವಿರ ರೂ. ಪಡೆದಿದ್ದರು. ಹಣವನ್ನು ಶಾಖಾ ವ್ಯವಸ್ಥಾಪಕ ಬಿ.ಕೃಷ್ಣಮರ‍್ತಿ ಅವರಿಗೆ ನೀಡುತ್ತಿದ್ದಾಗ ಲೋಕಾಯುಕ್ತ (ಅಂದಿನ ಎಸಿಬಿ) ಪೊಲೀಸರು ದಾಳಿ ನಡೆಸಿ ಬಂಧಿಸಿದ್ದರು. ನ್ಯಾಯಾಧೀಶ ಜಿ.ಎಲ್. ಲಕ್ಷ್ಮೀನಾರಾಯಣ ಅವರು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಶಿಕ್ಷೆ ಪ್ರಕಟಿಸಿದ್ದಾರೆ. ರ‍್ಕಾರದ ಪರ ವಿಶೇಷ ಅಭಿಯೋಜಕ ಅಶೋಕ ಎಸ್. ಚಾಂದಕವಠ ವಾದ ಮಂಡಿಸಿದ್ದರು. ಅಂದಿನ ಪೊಲೀಸ್ ಉಪ ಅಧೀಕ್ಷಕಿ ಸುಧಾ ಆದಿ ಪ್ರಕರಣ ದಾಖಲಿಸಿದ್ದರೆ, ಇನ್ಸ್ಪೆಕ್ಟರ್ ಮಹಮ್ಮದ ಇಸ್ಮಾಯಿಲ್ ದೋಫಿಾರೋಪಣ ಪಟ್ಟಿ ಸಲ್ಲಿಸಿದ್ದರು. ಸಿಬ್ಬಂದಿ ಹಣಮಂತರಾಯ, ಗುಂಡುರಾವ ಸಾದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.