cyber crime 
ಕಲಬುರಗಿ

ಮೊಬೈಲ್​ ಹ್ಯಾಕ್​ ಮಾಡಿ 2.58 ಲಕ್ಷ ವಂಚನೆ

ಪ್ರಮುಖ ಮುಖ್ಯಾಂಶಗಳು

  • ಎಪಿಕೆ ಆ್ಯಪ್​ ಕಳುಹಿಸಿ, ಮೊಬೈಲ್​ ಹ್ಯಾಕ್​ ಮಾಡಿ ಸೈಬರ್​ ವಂಚನೆ
ಕಲಬುರಗಿ: ಮೊಬೈಲ್​ಗೆ ಬಂದ ಎಪಿಕೆ ಆ್ಯಪ್​ ಲಿಂಕ್​ ಮೇಲೆ ಕ್ಲಿಕ್​ ಮಾಡಿದ್ದರಿಂದ ಮೊಬೈಲ್​ ಹ್ಯಾಕ್​ ಮಾಡಿ, 2.58 ಲಕ್ಷ ರೂ. ವಂಚನೆ ಮಾಡಿರುವ ಟನೆ ನಡೆದಿದೆ. ಮಹೇಂದ್ರ ೈನಾನ್ಸ್​ ಕಂಪನಿಯ ಅಕೌಂಟೇಂಟ್​, ದುಬೈ ಕಾಲನಿ ನಿವಾಸಿ ರಾಜು ದೈುಲೆ ವಂಚನೆಗೆ ಒಳಗಾದವರು.
ಮೇ 13ರಂದು ಮೊಬೈಲ್​ಗೆ ಆರ್​ಟಿಒ ಇ&ಚಲನ್​ ಆ್ಯಪ್​ ಲಿಂಕ್​ ಸಂದೇಶ ಬಂದಿದ್ದು, ಅದರ ಮೇಲೆ ಕ್ಲಿಕ್​ ಮಾಡಿದ್ದು, ತಕ್ಷಣ ಮೊಬೈಲ್​ ಹ್ಯಾಕ್​ ಆಗಿ, ವಾಟ್ಸ್​ಪ್​ ಸಂಖ್ಯೆಯೂ ಹ್ಯಾಕ್​ ಆಗಿದೆ. ಸುಮಾರು ಒಂದು ಗಂಟೆ ಮೊಬೈಲ್​ ಬಳಸದಂತೆ ಹ್ಯಾಕ್​ ಆಗಿದ್ದು, ರಾಜು ಅವರ ಕ್ರೆಡಿಟ್​ ಕಾರ್ಡ್​ನಿಂದ ಹಂತ ಹಂತವಾಗಿ 2.58 ಲಕ್ಷ ರೂ. ಕಡಿತವಾಗಿದೆ. ಸಂದೇಶ ಪರಿಶೀಲಿಸಿದಾಗ ಬಿಹಾರದ ರಾಜೇಶ ಮಿಶ್ರಾ ಸಿಂಗ್​ ಎಂಬಾತ ಮೂರು ಮೊಬೈಲ್​ಗಳನ್ನು ಖರೀದಿಸಿ, ತನ್ನ ವಿಳಾಸಕ್ಕೆ ತರಿಸಿಕೊಂಡಿದ್ದಾನೆ ಎಂಬುದು ತಿಳಿದಿದೆ. ಈ ಕುರಿತು ಸಿಇಎನ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.