ಕಲಬುರಗಿ: ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ ಬೆಳೆಸುವುದರ ಜತೆ ರಸುವ ನಿಟ್ಟಿನಲ್ಲಿ ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅಕ್ಟೋಬರ್ ಕೊನೆಯ ವಾರ ಆಯೋಜಿಸಲು ಕನ್ನಡ ಸಾಹಿತ್ಯ ಪರಿಷತ್ ನಿರ್ಧರಿಸಿದೆ ಎಂದು ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ತಿಳಿಸಿದರು.
ಕನ್ನಡ ಭವನದಲ್ಲಿ ಮಂಗಳವಾರ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಈ ಸಮ್ಮೇಳನ ಕೇವಲ ಸಾಹಿತಿಗಳ ಸಮ್ಮಿಲನವಲ್ಲ. ಜಿಲ್ಲೆಯ ಸಾವಿರಾರು ಕನ್ನಡಿಗರು ಸೇರುವ ಒಂದು ಸಾಂಸತಿಕ ಉತ್ಸವವಾಗಲಿದೆ. ಕನ್ನಡದ ಉಳಿವಿಗೆ ನಡೆಯುವ ಈ ಸಮ್ಮೇಳನ ನಮ್ಮ ಸಂಸತಿಯ ಪ್ರತಿಕವಾಗಿದೆ ಎಂದರು.
ಸಮ್ಮೇಳನಾಧ್ಯಕ್ಷರ ಆಯ್ಕೆ ಮತ್ತು ಸ್ವಾಗತ ಸೇರಿ ವಿವಿಧ ಸಮಿತಿ ರಚನೆ ಮುಂದಿನ ವಾರ ಮಾಡಲಾಗುವುದು. ನಾಲ್ಕೂವರೆ ವರ್ಷಗಳಲ್ಲಿ ಐದು ಜಿಲ್ಲಾ ಸಮ್ಮೇಳನ, 15 ವಿಶೇಷ ಸಮ್ಮೇಳನ ಜತೆ ನೂರಾರು ರಚನಾತ್ಮಕ ಕಾರ್ಯಕ್ರಮಗಳನ್ನು ಮಾಡಲಾಗಿದೆ ಎಂದು ಹೇಳಿದರು.
ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ ಮಾತನಾಡಿ, ಆಡಂಬರವಿಲ್ಲದೆ ಅರ್ಥಪೂರ್ಣ ಚರ್ಚೆ ಮತ್ತು ಸಾಂಸ್ಕೃತಿಕ ಕ್ಷೇತ್ರ ಕುರಿತ ವಿಷಯಗಳ ವಿನಿಮಯಕ್ಕೆ ಸಮ್ಮೇಳನ ಆದ್ಯತೆ ನೀಡಲಿದೆ ಎಂದು ತಿಳಿಸಿದರು.
ಶಕುಂತಲಾ ಪಾಟೀಲ, ಜಯಶ್ರೀ ಜಮಾದಾರ, ಡಾ.ರೆಹಮಾನ್ ಪಟೇಲ್, ಕಲ್ಯಾಣಕುಮಾರ ಶೀಲವಂತ, ಶಿವಾನಂದ ಸುರವಸೆ, ಶಿವಾನಂದ ಪೂಜಾರಿ, ಧರ್ಮರಾಜ ಜವಳಿ, ಜೆ.ಎಸ್. ವಿನೋದಕುಮಾರ, ಸಿದ್ಧಲಿಂಗ ಬಾಳಿ, ಗಣೇಶ ಚಿನ್ನಾಕಾರ, ಸೋಮಶೇಖರಯ್ಯ ಹೊಸಮಠ, ಹಣಮಂತರಾವ ಪೆಂಚನಪಳ್ಳಿ, ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ, ರಾಜೇಂದ್ರ ಮಾಡಬೂಳ, ರಾಜಶೇಖರ ಚೌದ್ರಿ, ಸಂದೀಪ ಭರಣಿ, ರಮೇಶ ಬಡಿಗೇರ ಇತರರಿದ್ದರು.