ಕಲಬುರಗಿ:ಅಪ್ಪಟ ಸ್ವದೇಶಿ ಹರಿಕಾರ ರಾಜೀವ್ ದೀಕ್ಷಿತ್ ಅವರ ಪ್ರೇರಣೆಯಿಂದ ಹುಟ್ಟಿಕೊಂಡ
ನಗರದ ಸ್ವಾಭಿಮಾನ ಸ್ವದೇಶಿ ಮಾರ್ಟ್,ನ 11ನೇ ವಾರ್ಷಿಕೋತ್ಸವ ನಿಮಿತ್ತ ನಾಳೆಯಿಂದ ಎರಡು ದಿನಗಳ ಕಾಲ ಸ್ವದೇಶಿ ಉತ್ಸವ ಹಾಗೂ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಸ್ವದೇಶಿ ಚಿಂತಕ ಮುಖ್ಯಸ್ಥ ಅನಿಲಕುಮಾರ್ ತಂಬಾಕೆ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಕಾಲ ನಡೆಯಲಿರುವ ಉತ್ಸವಕ್ಕೆ ಫೆ. 7ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಸೇಡಂ ರಸ್ತೆಯಲ್ಲಿರುವ ಸ್ವಾಭಿಮಾನ ಸ್ವದೇಶಿ ಮಳಿಗೆ ಪಕ್ಕದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಗತಿಪರ ರೈತರಾದ ಗೌರಿಶಂಕರ ಕರೋಶಿ ಅವರು ಉಪನ್ಯಾಸ ನೀಡುವರು, ಸಮಾರಂಭವು ಮಾತೋಶ್ರೀ ಡಾ. ದಾಕ್ಷಾಯಣಿ ಅವ್ವಾಜೀ ಅವರ ಸಾನಿಧ್ಯದಲ್ಲಿ ನಡೆಯಲಿದ್ದು, ಗೌರವಾಧ್ಯಕ್ಷರಾಗಿ ಡಾ. ರಾಜು ಜಿ ತೆಗ್ಗಳ್ಳಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 1ಗಂಟೆಗೆ ಸಿರಿಧಾನ್ಯಗಳ ಭೋಜನದ ವ್ಯವಸ್ಥೆ ಮಾಡಲಾಗಿದ್ದು, ನಂತರ ಯುವಕರ ಕೈಯಲ್ಲಿ ಕೃಷಿಯ ಭವಿಷ್ಯ ವಿಶೇಷ ಭಾಷಣ ಸ್ಪರ್ಧೆ ನಡೆಯಲಿದೆ, ಅಂದು ಸಂಜೆ ೬-೩೦ರಿಂದ ಹಿಂದೂಸ್ತಾನಿ ಗಾಯನ ಕಾರ್ಯಕ್ರಮ ಜರುಗಲಿದೆ ಎಂದರು.
ಎರಡನೇಯ ದಿನವಾದ ರವಿವಾರ ಫೆ.8ರಂದು ಬೆಳಿಗ್ಗೆ 10.30ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಡಾ. ಖಾದರ ವಲಿ ಉಪನ್ಯಾಸ ನೀಡುವರು, ಈ ಸಂದರ್ಭದಲ್ಲಿ ಡಾ. ಕೆ. ಮುಲ್ಹಾರ ರಾವ್ ಮಲ್ಲೆ ಗೌರವಾಧ್ಯಕ್ಷರಾಗಿ ಪಾಲ್ಗೊಳ್ಳುವರು. ಸಾಧಕರಿಗೆ ಸನ್ಮಾನ ಸಮಾರಂಭ ಜರುಗಲಿದೆ, ನಂತರ ಜಂಕ್‌ಫುಡ್‌ನ ಹಾನಿ ಹಾಗೂ ಪರಿಹಾರ ವಿಷಯದ ಕುರಿತು ವಿಶೇಷ ಭಾಷಣ ಸ್ಪರ್ಧೆ ಜರುಗಲಿದೆ. ನಂತರ ೫-೩೦ರಿಂದ ಬದರಿನಾಥ ಮುಡಬಿ ಹಾಗೂ ವಿಜಯೇಂದ್ರ ಸಗರ ಅವರಿಂದ ಪೀಟೀಲು ವಾದನ ಮತ್ತು ತಬಲಾವಾದನ ನಡೆಯಲಿದ್ದು, ಸಂಜೆ ೬-೩೦ಗಂಟೆಗೆ ಹಿಂದೂಸ್ತಾನಿ ಗಾಯನ ಕಾರ್ಯಕ್ರಮ ಜರುಗಲಿದೆ ಎಂದರು.
ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಸ್ವದೇಶಿ ಮಳಿಗೆಯ ಮುಖ್ಯಸ್ಥರಾದ ಪ್ರಭು ಪಾಟೀಲ್,ವಿಶಾಲ ಲೋಖಂಡೆ, ಚೈತನ್ಯ ಮಠ, ಅಕ್ಷಯ್ ಕುಲಕರ್ಣಿ ಇದ್ದರು.