online Fraud  
ಕಲಬುರಗಿ

ಕಲಬುರಗಿಯಲ್ಲಿ ಟ್ರೇಡಿಂಗ್​ ಲಾಭದಾಸೆ ತೋರಿಸಿ 16 ಲಕ್ಷ ಮೋಸ

ಕಲಬುರಗಿ: ಸ್ಟಾಕ್​ ಮಾರ್ಕೆಟ್​ನಲ್ಲಿ ಭರ್ಜರಿ ಲಾಭದ ಆಮಿಷಕ್ಕೆ ಒಳಗಾಗಿ 16 ಲಕ್ಷ ರೂ. ವಂಚಿಸಿದ ಟನೆ ನಡೆದಿದೆ. ಬಸವೇಶ್ವರ ಕಾಲನಿಯ ಆನಂದ ಶಿರವಾಳಕರ್​ ಹಣ ಕಳೆದುಕೊಂಡವರು.
ಮಹೀಂದ್ರಾ ೈನಾನ್ಸ್​ನಲ್ಲಿ ಐಟಿ ಮ್ಯಾನೇಜರ್​ ಆಗಿದ್ದು, ಕಳೆದ ಏಳು ವರ್ಷದಿಂದ ಸ್ಟಾಕ್​ ಮಾರ್ಕೆಟ್​, ಟ್ರೆಡಿಂಗ್​ ಮಾಡುತ್ತ ಬಂದಿದ್ದಾರೆ. ಈ ಮಧ್ಯೆ 2025 ಡಿ.3ರಂದು ವಾಟ್ಸ್​ಆ್ಯಪ್​ ಗ್ರೂಪ್​ವೊಂದರಲ್ಲಿ ಇವರ ನಂಬರ್​ ಸೇರಿಸಿ, ಹೆಚ್ಚಿನ ಆದಾಯದ ಆಮಿಷ ಒಡ್ಡಿದ್ದಾರೆ. ಈ ಬಗ್ಗೆ ಅಡ್ಮಿನ್​ಗೆ ಆನಂದ ಮಾಹಿತಿ ಕೇಳಿದ್ದು, ಆ್ಯಪ್​ ಡೌನ್​ಲೋಡ್​ಗೆ ಸೂಚಿಸಿದ್ದಾನೆ. ಆದಾಯಕ್ಕೆ ವಿವಿಧ ಬ್ಯಾಂಕ್​ ಖಾತೆಗೆ ಹಣ ಕಳಿಸುವಂತೆ ತಿಳಿಸಿದ್ದು, ಅದರಂತೆ ಹಂತ ಹಂತವಾಗಿ 16 ಲಕ್ಷ ರೂ. ಹಣ ವರ್ಗಾವಣೆ ಮಾಡಿದ್ದಾರೆ. 35 ಲಕ್ಷ ರೂ. ಲಾಭ ತೋರಿಸಿದ್ದು, ವಿಥ್​ಡ್ರಾಗೆ ಮುಂದಾದಾಗ 85 ಲಕ್ಷ ರೂ. ಜಮಾ ಮಾಡಿದರೆ 35 ಲಕ್ಷ ವಿಥ್​ಡ್ರಾ ಮಾಡಿಕೊಳ್ಳಬಹುದು ಎಂದಾಗ ಮೋಸ ಹೋಗಿದ್ದು, ತಿಳಿದಿದೆ. ಸೆನ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.