ಕಲಬುರಗಿ: ನಗರದಿಂದ ಬೆಂಗಳೂರಿನ ಬೈಯ್ಯಪ್ಪನಹಳ್ಳಿ ರೈಲು ನಿಲ್ದಾಣಕ್ಕೆ ವಂದೇ ಭಾರತ್ ರೈಲು ಉದ್ಘಾಟನೆ ಮಂಗಳವಾರ ನಡೆಯಲಿದೆ ಎಂದು ಸಂಸದ ಡಾ.ಉಮೇಶ ಜಾಧವ್ ತಿಳಿಸಿದ್ದಾರೆ. ಶೀಘ್ರದಲ್ಲಿ ರೈಲು ಬೆಂಗಳೂರು ಕಂಟೋನ್ಮೆಂಟ್‌ಗೆ ವಿಸ್ತರಣೆಯಾಗಲಿದೆ. ವಾರದಲ್ಲಿ ಆರು ದಿನ ಸಂಚರಿಸಲಿದ್ದು, ಮಂಗಳವಾರ ಬೆಳಗ್ಗೆ ೮ಕ್ಕೆ ಪ್ರಧಾನಿ ನರೇಂದ್ರ ಮೋದಿ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ವಂದೇ ಭಾರತ್ ಸಮಯ: ಕಲಬುರಗಿಯಿಂದ ಬೆಳಗ್ಗೆ ೫.೧೫ ಹೊರಟು, ಮಧ್ಯಾಹ್ನ ೨ಕ್ಕೆ ಬೈಯ್ಯಪ್ಪನಹಳ್ಳಿ ತಲುಪಲಿದೆ. ಮಧ್ಯಾಹ್ನ ೨.೪೦ಕ್ಕೆ ಹೊರಟು ರಾತ್ರಿ ೧೧.೩೦ಕ್ಕೆ ಕಲಬುರಗಿ ರೈಲು ನಿಲ್ದಾಣಕ್ಕೆ ತಲುಪಲಿದೆ. ಬೈಯಪ್ಪನಹಳ್ಳಿಯಿಂದ ಗುರುವಾರ, ಕಲಬುರಗಿಯಿಂದ ಶುಕ್ರವಾರ ವಂದೇ ಭಾರತ್ ರೈಲು ಸಂಚಾರ ಇರಲ್ಲ.
ಸಂಚಾರದ ಟೈಮ್‌ಲೈನ್: ಕಲಬುರಗಿಯಿಂದ ಬೆಳಗ್ಗೆ ೫ .೧೫ಕ್ಕೆ ಹೊರಟು ವಾಡಿಗೆ ೫.೪೦ಕ್ಕೆ, ರಾಯಚೂರಿಗೆ ೬.೫೩ಕ್ಕೆ, ಮಂತ್ರಾಲಯA ರೋಡ್ ೭.೦೮, ಗುಂತಕಲ್‌ಗೆ ೮.೨೫ಕ್ಕೆ, ಅನಂತಪುರ ೯.೨೮ಕ್ಕೆ, ಧರ್ಮಾವರಂ ೧೦.೫೦ಕ್ಕೆ, ಯಲಹಂಕ ೧೨.೪೫ಕ್ಕೆ, ಬೈಯಪ್ಪನಹಳ್ಳಿ ಟರ್ಮಿನಲ್‌ಗೆ ೨ಕ್ಕೆ ತಲುಪಲಿದೆ.
ಬೈಯ್ಯಪ್ಪನ ಹಳ್ಳಿಯಿಂದ ಮಧ್ಯಾಹ್ನ ೨.೪೦ಕ್ಕೆ ಹೊರಟು ಯಲಹಂಕಕ್ಕೆ ೩.೦೮, ಧರ್ಮಾವರಂ ಸಂಜೆ ೫.೪೫ಕ್ಕೆ, ಅನಂತಪುರ ೫.೫೮, ಗುಂತಕಲ್ ೭ಕ್ಕೆ, ಮಂತ್ರಾಲಯಂ ರೋಡ್ ರಾತ್ರಿ ೮.೧೫ಕ್ಕೆ, ರಾಯಚೂರು ೮.೪೫ಕ್ಕೆ, ವಾಡಿ ೧೧.೫ಕ್ಕೆ ಕಲಬುರಗಿಗೆ ರಾತ್ರಿ ೧೧.೩೦ಕ್ಕೆ ತಲುಪಲಿದೆ.