ಜಿಲ್ಲೆ

ಚಟ್ನಿಗೆ ಕೆಟ್ಟ ಟೆಂಗಿನಕಾಯಿ: ಪ್ರಶ್ನಿಸಿದ್ದಕ್ಕೆ ಹಲ್ಲು ಮುರಿದ್ರು

ರಮೇಶ ಮೇಳಕುಂದಾ

ಕಲಬುರಗಿ: ಕುಸನೂರು ರೋಡ್‌ನಲ್ಲಿನ ಗಾಂಧಿ ಬಿಗ್ ಬಜಾರ್‌ನಲ್ಲಿ ಟೆಂಗಿನ ಕಾಯಿ ಕೆಟ್ಟಿದೆ ಎಂದು ಕೇಳಲು ಹೋದ ಗ್ರಾಹಕನಿಗೆ ಮಾಲೀಕ ಹಾಗೂ ನೌಕರರು ಹಲ್ಲೆ ಮಾಡಿರುವ ಕುರಿತು ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ತೇಲಕರ ಕಾಲೊನಿ ನಿವಾಸಿ ರವಿಶಂಕರ ಪ್ರಭುಲಿಂಗ ನಿಗ್ಗುಡಗಿ ಹಲ್ಲೆಗೆ ಒಳಗಾಗಿ ದೂರು ನೀಡಿದವರು. ದೂರುದಾರರ ತಾಯಿ ಚಟ್ನಿ ಮಾಡಲು ಟೆಂಗಿನ ಕಾಯಿ ತರುವಂತೆ ಹೇಳಿದ್ದರು. ಮಧ್ಯಾಹ್ನ 3ರಕ್ಕೆ ಗಾಂಧಿ ಬಿಗ್‌ಬಜಾರ್‌ನಿಂದ 35 ರೂ. ನೀಡಿ ಟೆಂಗು ಖರೀದಿ ಮಾಡಿದ್ದರು. ಈ ವೇಳೆ ಟೆಂಗು ಖರಾಬ್ ಇದ್ದರೆ ವಾಪಾಸ್ ಪಡೆಯುವುದಾಗಿ ಭರವಸೆ ನೀಡಿದರು. ಅದನ್ನು ಮನೆಗೆ ತಂದು ನೋಡಿದಾಗ ಅದು ಖರಾಬ್ ಬಂದಿರುತ್ತದೆ. ಕೂಡಲೇ ವಾಪಸ್ ಕೊಡಲು ಹೋದಾಗ ಮಾಲೀಕ ಮತ್ತು ಅಲ್ಲಿನ ಕೆಲಸಗಾರರು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.