ವಿಜಯವಾಣಿ ಸುದ್ದಿಜಾಲ ಬೀದರ್
ಇಲ್ಲಿಯ ನೆಹರು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಎರಡು ದಿನದ ವಿಭಾಗ ಮಟ್ಟದ ಮುಕ್ತ ಬಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಕಲಬುರಗಿ ತಂಡ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.
ಭಾನುವಾರ ಸಂಜೆ ನಡೆದ ಫೈನಲ್ ಪಂದ್ಯದಲ್ಲಿ ಕಲಬುರಗಿ ತಂಡ ಬಳ್ಳಾರಿಯನ್ನು ೪೬-೩೪ ಅಂಕಗಳಿAದ ಪರಾಭವಗೊಳಿಸಿ ಟ್ರೋಫಿ ಗೆದ್ದುಕೊಂಡಿತು. ಬಳ್ಳಾರಿ ತಂಡ ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಂಡಿತು. ವಿಜೇತ ತಂಡ ೧೫ ಸಾವಿರ ರೂ. ನಗದು ಮತ್ತು ಟ್ರೋಫಿ ಹಾಗೂ ರನ್ನರ್ ಅಪ್ ತಂಡ ೧೦ ಸಾವಿರ ರೂ. ನಗದು ಮತ್ತು ಟ್ರೋಫಿಗೆ ಭಾಜನವಾಯಿತು.
ಮಹೇಶ ಬಳ್ಳಾರಿ ೫ ಸಾವಿರ ರೂ. ನಗದಿನೊಂದಿಗೆ ಶ್ರೇಷ್ಠ ಆಟಗಾರ ಹಾಗೂ ಸಂದೀಪ್ ಕಲಬುರಗಿ ೧೦೦೦ ರೂ. ನಗದಿನೊಂದಿಗೆ ಉದಯೋನ್ಮುಖ ಆಟಗಾರ ಪ್ರಶಸ್ತಿ ಸ್ವೀಕರಿಸಿದರು.
ರಾಷ್ಟಿçÃಯ ಬಸವದಳ ಜಿಲ್ಲಾಧ್ಯP್ಷÀ ಸೋಮಶೇಖರ ಪಾಟೀಲ್ ಗಾದಗಿ ವಿಜೇತ ತಂಡಗಳಿಗೆ ಟ್ರೋಫಿ ನೀಡಿ ಅಭಿನಂದಿಸಿದರು. ಬಾಸ್ಕೆಟ್‌ಬಾಲ್ ಅಸೋಸಿಯೇಷನ್ ರಾಜ್ಯ ಜಂಟಿ ಕಾರ್ಯದರ್ಶಿ ವಿಜಯ ಎಸ್.ಬಳ್ಳಾರಿ, ಜಿಲ್ಲಾಧ್ಯP್ಷÀ ಸಂತೋಷ ತಾಳಂಪಳ್ಳಿ, ಡಾ.ನಾಗರಾಜ ಮಾತನಾಡಿದರು. ಅಸೋಸಿಯೇಷನ್ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ, ನಿರ್ದೇಶಕರಾದ ಮಂಗಲಾ ಭಾಗವತ್, ಗೀತಾ ಗಡ್ಡಿ ಇತರರಿದ್ದರು.
ಬಾಸ್ಕೆಟ್‌ಬಾಲ್ ಅಸೋಸಿಯೇಷನ್ ಆಯೋಜಿಸಿದ್ದ ಟೂರ್ನಿಯಲ್ಲಿ ಕಲಬುರಗಿಯ ಮೂರು, ಬೀದರ್ ಹಾಗೂ ಬಳ್ಳಾರಿಯ ತಲಾ ಎರಡು ಸೇರಿ ಒಟ್ಟು ಏಳು ತಂಡಗಳು ಭಾಗವಹಿಸಿದ್ದವು.