ಜಿಲ್ಲೆ

ಕಲಬುರಗಿ ಪಾಲಿಕೆ ಕೈವಶ: ಮುರಿದ ಕಮಲ-ದಳ ಮೈತ್ರಿ: ವರ್ಷಾ ಮೇಯರ್, ತೃಪ್ತಿ ಉಪಮೇಯರ್

ರಮೇಶ ಮೇಳಕುಂದಾ

ಕಲಬುರಗಿ: ಇಲ್ಲಿನ ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ಮತ್ತೊಮ್ಮೆ ಗದ್ದುಗೆಗೇರಿದ್ದು, ಪಕ್ಷದ ಅಭ್ಯರ್ಥಿ ವರ್ಷಾ ಜಾನೆ 36 ಮತಗಳನ್ನು ಪಡೆದು ಮೇಯರ್ ಹುದ್ದೆಗೆ ಏರಿದ್ದಾರೆ.

ಉಪಮೇಯರ್ ಹುದ್ದೆಗೆ 33 ಮತಗಳನ್ನು ಪಡೆದು ತೃಪ್ತಿ ಲಾಖೆ ಆಯ್ಕೆಯಾಗಿದ್ದಾರೆ.

ಪಾಲಿಕೆಯ ೨೩ ನೇ ಅವಧಿಗೆ ನಡೆದ ಚುನಾವಣೆಯಲ್ಲಿ ವರ್ಷಾ ಜಾನೆ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಗಂಗಮ್ಮ ಮನ್ನೋಳಿ ಅವರಿಗೆ 27 ಮತ ಸಿಕ್ಕಿದ್ದು, ಸ್ಬಹುಮತದ ಬಲದಿಂದ ಕಾಂಗ್ರೆಸ್ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ತನ್ನ ಹಿಡಿತವನ್ನು ಮತ್ತೊಮ್ಮೆ ಸ್ಥಿರಪಡಿಸಿಕೊಂಡಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಕಣದಲ್ಲಿದ್ದಾರೆ.