ಜಿಲ್ಲೆ

ಎನ್‌ವಿ ಡಿಗ್ರಿ ಕಾಲೇಜಿಗೆ ನ್ಯಾಕ್ ಎ ಗ್ರೇಡ್

ಕಲಬುರಗಿ: ನಗರದ ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯಕ್ಕೆ ನಿರಂತರ ಮೂರನೇ ಬಾರಿ ನ್ಯಾಕ್ ಎ ಗ್ರೇಡ್ ಮಾನ್ಯತೆ ದೊರೆತಿದೆ ಎಂದು ಪ್ರಾಚಾರ್ಯ ಡಾ.ಶ್ರೀಕಾಂತ ಏಖಳೀಕರ್ ತಿಳಿಸಿದರು.
೨೦೦೪ರಲ್ಲಿ ಮೊದಲ ಬಾರಿಗೆ ಶೇ.೮೭ ಅಂಕದೊಂದಿಗೆ ಗ್ರೇಡ್ ಪಡೆದರೆ, ೨೦೧೨ರಲ್ಲಿ ೩.೩೨ ಸಿಜಿಪಿಎ ಅಂಕ ಪಡೆದಿದೆ. ಮೂರನೇ ಬಾರಿಗೆ ೨೦೨೩ರಲ್ಲಿ ಸಿಜಿಪಿಎ ೩.೦೯ ಅಂಕ ಪಡೆದು ನ್ಯಾಕ್ ಎ ಗ್ರೇಡ್ ಮಾನ್ಯತೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಮುಂಬರುವ ದಿನಗಳಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಉಪಯುಕ್ತವಾಗುವ ಯೋಜನೆಯತ್ತ ಹೆಜ್ಜೆ ಇರಿಸಲು ಈ ಹ್ಯಾಟ್ರಿಕ್ ಸಾಧನೆ ಸಹಕಾರಿಯಾಗಲಿದೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಬಾಲಗಂಗಾಧರ ತಿಲಕರ ಪ್ರೇರಣೆಯಿಂದ ಕಲಬುರಗಿಯಲ್ಲಿ ವಿಠ್ಠಲರಾವ್ ದೇವುಳಗಾಂವಕರ್ ಅವರು ಏಳು ಮಕ್ಕಳು ಮತ್ತು ಒಬ್ಬ ಶಿಕ್ಷಕರಿಂದ ನೂತನ ವಿದ್ಯಾಲಯ ಸಂಸ್ಥೆಯನ್ನು ೧೯೦೭ರಲ್ಲಿ ಪ್ರಾರಂಭಿಸಿದರು. ಇದೀಗ ಒಂದರಿAದ ಸ್ನಾತಕೋತ್ತರ ಸೇರಿ ತಾಂತ್ರಿಕ ಶಿಕ್ಷಣದ ಅಂಗ ಸಂಸ್ಥೆಗಳು ಅಕ್ಷರ ಸೇವೆ ಸಲ್ಲಿಸುತ್ತಿದ್ದು, ಒಂದು ಸಾವಿರ ಶಿಕ್ಷಕರು, ೫ ಸಾವಿರ ವಿದ್ಯಾರ್ಥಿಗಳಿದ್ದಾರೆ ಎಂದರು.
ಸAಸ್ಥೆಯು ಪದವಿ ಶಿಕ್ಷಣವನ್ನು ೧೯೭೯ರಲ್ಲಿ ಪ್ರಾರಂಭಿಸಿತು. ಕಲಾ, ವಾಣಿಜ್ಯ ವಿಭಾಗಗಳಿಂದ ಶುರುವಾದ ಡಿಗ್ರಿ ಕಾಲೇಜಿಗೆ ೧೯೮೭ರಲ್ಲಿ ವಿಜ್ಞಾನ ವಿಭಾಗ ಸೇರಿಕೊಂಡಿತು. ೨೦೦೪ರಲ್ಲಿ ಎಂಎ ಸಂಗೀತ, ಸ್ನಾತಕೋತ್ತರ ಮತ್ತು ೨೦೧೦ರಲ್ಲಿ ಎಂಕಾA ವಿಭಾಗ ಪ್ರಾರಂಭಗೊAಡಿದೆ. ಪದವಿ ಕಾಲೇಜುಗಳಲ್ಲಿ ವಿರಳವಾಗಿರುವ ವಿಷಯಗಳಾದ ಸಂಗೀತ, ಲಲಿತಕಲೆ ವಿದ್ಯಾರ್ಥಿಗಳ ಮೆಚ್ಚುಗೆ ಪಡೆದಿವೆ. ಜತೆಗೆ ಎನ್‌ಇಪಿ ಧ್ಯೇಯೋz್ದೆÃಶಕ್ಕೆ ಪೂರಕವಾಗಿದೆ ಎಂದು ವಿವರಿಸಿದರು.
ಗುಲ್ಬರ್ಗ ವಿವಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ರ‍್ಯಾಂಕ್ ಪಡೆದಿದ್ದು, ಈವರೆಗೆ ೬೭ ವಿದ್ಯಾರ್ಥಿಗಳು ರ‍್ಯಾಂಕ್ ಮತ್ತು ವಿವಿಧ ವಿಷಯಗಳಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಮಹಾವಿದ್ಯಾಲಯ ಕೇವಲ ಶಿಕ್ಷಣಕ್ಕೆ ಮೀಸಲಾಗಿರದೆ ಪಠ್ಯೇತರ, ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳಲ್ಲೂ ತನ್ನದೇ ಆದ ಛಾಪು ಮೂಡಿಸಿದೆ. ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಐದಾರು ವರ್ಷಗಳಿಂದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಸಾಮಾಜಿಕ ಪ್ರಜ್ಞೆ ಮೂಡಿಸುತ್ತಿದ್ದಾರೆ. ಸ್ವಯಂ ಸೇವಕರು ೨೦೨೦ರಲ್ಲಿ ದಕ್ಷಿಣ ಭಾರತದ ರಿಪಬ್ಲಿಕ್ ಡೇ ಪರೇಡ್‌ನಲ್ಲಿ ಭಾಗವಹಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ವಿಶ್ವವಿದ್ಯಾಲಯದ ಧನಸಹಾಯ ಆಯೋಗ ಮತ್ತು ಗುಲ್ಬರ್ಗ ವಿಶ್ವವಿದ್ಯಾಲಯ ಪ್ರತಿವರ್ಷ ಆಯೋಜಿಸುವ ಅಂತರ ಕಾಲೇಜು, ದಕ್ಷಿಣ ವಲಯ ಮತ್ತು ರಾಷ್ಟçಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ಬಾಚಿಕೊಂಡಿದ್ದಾರೆ. ಕ್ರೀಡಾ ವಿಭಾಗದಲ್ಲಿ ಕಾಲೇಜು ವಿದ್ಯಾರ್ಥಿಗಳು ಅಂತಾರಾಷ್ಟಿçÃಯ ಮಟ್ಟದ ಥ್ರೋಬಾಲ್ ಮತ್ತು ರಾಷ್ಟçಮಟ್ಟದ ಕಬ್ಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿ ಕೀರ್ತಿ ತಂದಿದ್ಧಾರೆ. ಮುಂಬರುವ ದಿನಗಳಲ್ಲಿ ಎಎಂಸ್ಸಿ ಗಣಿತ ಮತ್ತು ಎಂಎ ಇಂಗ್ಲಿಷ್ ಕೋರ್ಸ್ ಪ್ರಾರಂಭಿಸುವ ಯೋಜನೆ ಇದೆ ಎಂದು ತಿಳಿಸಿದರು.
ಸಂಸ್ಥೆ ಅಧ್ಯಕ್ಷ ಡಾ.ಗೌತಮ ಜಹಾಗೀರದಾರ್, ಕಾರ್ಯದರ್ಶಿ ಅಭಿಜೀತ ದೇಶಮುಖ, ಐಕ್ಯೂಎಸಿ ಸಂಚಾಲಕ ಗೋವಿಂದ ಪೂಜಾರ, ಡಾ.ಗಿರೀಶ ಗಲಗಲಿ, ಡಾ.ವೀಣಾ ಪತಕಿ, ರವೀಂದ್ರ ಟೆಂಗಳಿ, ಶಶಾಂಕ್ ಪಟ್ಟಣಕರ್ ಇತರರಿದ್ದರು.