ಜಿಲ್ಲೆ

ಕಲಬುರಗಿ ಪಾಲಿಕೆಗೆ ಕಾಂಗ್ರೆಸ್ ನ ಯಲ್ಲಪ್ಪ ಮೇಯರ್, ಹೀನಾ ಬೇಗಂ ಉಪ ಮೇಯರ್

ರಮೇಶ ಮೇಳಕುಂದಾ

ಕಲಬುರಗಿ: ಮಹಾನಗರ ಪಾಲಿಕೆಯ ಮೇಯರ್ ಹುದ್ದೆಗೆ ಕಾಂಗ್ರೆಸ್ ನ ಯಲ್ಲಪ್ಪ ನಾಯ್ಕೋಡಿ, ಉಪ ಮೇಯರ್ ಸ್ಥಾಪಕ್ಕೆ ಕಾಂಗ್ರೆಸ್ ನ ಹೀನಾ ಬೇಗಂ ಅವಿರೋಧವಾಗಿ ಆಯ್ಕೆಯಾದರು.

ಮೇಯರ್ ಸ್ಥಾನ ಎಸ್ ಟಿಗೆ ಮೀಸಲಾಗಿದ್ದು, ಇಡೀ ಪಾಲಿಕೆ ಸದಸ್ಯರಲ್ಲಿ ವಾರ್ಡ್ ನಂ.53ರ ಸದಸ್ಯ ಯಲ್ಲಪ್ಪ ನಾಯ್ಕೋಡಿ ಒಬ್ಬರೇ ಎಸ್ ಟಿ ಪ್ರಮಾಣ ಪತ್ರ ಹೊಂದಿದ್ದರು. ಬಿಜೆಪಿಯ ದಿಗಂಬರ ನಾಡಗೌಡ ಸಹ ನಾಮಪತ್ರ ಸಲ್ಲಿಸಿದ್ದರೂ, ಅವರ ನಾಮಪತ್ರ ತಿರಸ್ಕೃತ ಹಿನ್ನೆಲೆಯಲ್ಲಿ ಅವಿರೋಧವಾಗಿ ಯಲ್ಲಪ್ಪ ನಾಯ್ಕೋಡಿ ಮೇಯರ್ ಆಗಿ ಆಯ್ಕೆಯಾದರು.

ಉಪ ಮೇಯರ್ ಸ್ಥಾನಕ್ಕೆ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ನ ಅಲೀಂ ಪಟೇಲ್ ಹಾಗೂ ಕಾಂಗ್ರೆಸ್ ನ ಹೀನಾ ಬೇಗಂ ನಾಮಪತ್ರ ಸಲ್ಲಿಸಿದ್ದರು. ಆದರೆ ಕೊನೇ ಕ್ಷಣದಲ್ಲಿ ಮೈತ್ರಿ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆದ ಹಿನ್ನೆಲೆಯಲ್ಲಿ ಉಪ ಮೇಯರ್ ಸ್ಥಾನಕ್ಕೆ ಹೀನಾ ಬೇಗಂ ಅವಿರೋಧವಾಗಿ ಆಯ್ಕೆಯಾದರು.

ನಾಲ್ಕು ಸ್ಥಾಯಿ ಸಮಿತಿಗಳಿಗೆ ಸದಸ್ಯರ ಸ್ಥಾನಕ್ಕೂ ಅವಿರೋಧವಾಗಿ ಆಯ್ಕೆ ನಡೆಯಿತು ಎಂದು ಚುನಾವಣಾ ಅಧಿಕಾರಿಯಾಗಿ ಕೃಷ್ಣಾ ಬಾಜಪೇಯಿ ತಿಳಿಸಿದರು.

ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.