ಕಲಬುರಗಿಯ ಪೊಲೀಸ್ ಆಯುಕ್ತಾಲಯದ ಸೇವೆಗೆ ಸೇರ್ಪಡೆಯಾಗಿರುವ ಪತ್ತೆದಾರಿ ಐದು ನಾಯಿ ಮರಿಗಳಿಗೆ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಅವರು ನಾಮಕರಣ ಮಾಡಿದರು. ಡಿಸಿಪಿಗಳಾದ ಕನ್ನಿಕಾ ಸಿಕ್ರಿವಾಲ್, ಪ್ರವೀಣ ನಾಯಕ, ಎಸಿಪಿಗಳಾದ ಡಿ.ಜಿ.ರಾಜಣ್ಣ, ಮಡಿವಾಳಪ್ಪ, ಇಸ್ಮಾಯಿಲ್ ಶರೀಫ್,ಚಂದ್ರಶೇಖರ ಇತರರಿದ್ದರು 
ಜಿಲ್ಲೆ

ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯಕ್ಕೆ ಹೊಸ ಶ್ವಾನದಳ : ಐದು ನಾಯಿ ಮರಿಗಳಿಗೆ ನಾಮಕರಣ ಮಾಡಿದ ಡಾ.ಶರಣಪ್ಪ

೯ ತಿಂಗಳು ತರಬೇತಿಗಾಗಿ ಬೆಂಗಳೂರಿಗೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ನಗರ ಪೊಲೀಸ್ ಆಯುಕ್ತಾಲಯದಲ್ಲಿ ಸೋಮವಾರ ಸಂಭ್ರಮ ಮನೆ ಮಾಡಿತ್ತು. ನಾಯಿ ಮರಿಗಳಿಗೆ ಹೊಸ ದಿರಿಸು ತೊಡಿಸಿದ್ದರು. ಅವುಗಳಿಗೆ ನಾಮಕರಣ ಮಾಡಿ ಎಲ್ಲರು ಸಿಹಿ ಸವಿದು ಖುಷಿಯಲ್ಲಿದ್ದರು.

ಹೌದು ಇದೇನಪ್ಪ ಎಂದು ಹುಬ್ಬೇರಿಸಬೇಡಿ !. ಪತ್ತೆದಾರಿ ನಾಯಿಗೂ ಖಾಕಿಗೂ ಗಾಢವಾದ ನಂಟಿದೆ. ಹಲವಾರು ಪ್ರಕರಣಗಳನ್ನು ಪೊಲೀಸರು ಪತ್ತೆ ಮಾಡಲು ಸಹಕಾರಿಯಾಗುವುದೇ ಈ ನಾಯಿಗಳು. ಇದುವರೆಗೂ ಅಪರಾಧ ಕೃತ್ಯಗಳು ನಡೆದಾಗ ತನಿಖೆ ನಡೆಸಲು ಇಡಿ ಜಿಲ್ಲೆಗೆ ಒಂದೇ ಶ್ವಾನದಳ ಘಟಕವಿತ್ತು. ಈಗ ಹೊಸದಾಗಿ ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಗಾಗಿ ಶ್ವಾನದಳ ಘಟಕವನ್ನು ಅಸ್ತಿತ್ವಕ್ಕೆ ತರಲಾಗಿದೆ. ಇದರಿಂದಾಗಿ ಕೇಸ್‌ಗಳ ತನಿಖೆಗೆ ಹೆಚ್ಚಿನ ಅನುವು ಆಗಲಿದೆ.

ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾದ ಆರ್.ಹಿತೇಂದ್ರ ಅವರು ಈಚೆಗೆ ಕಲಬುರಗಿ ಆಯುಕ್ತಾಲಯಕ್ಕೆ ಭೇಟಿ ನೀಡಿದಾಗ ಪೊಲೀಸ್ ಡಾ.ಶರಣಪ್ಪ ಎಸ್.ಡಿ.ಅವರು ಶ್ವಾನದಳ ಘಟಕ ಮಂಜೂರಿಗೆ ಕೋರಿದ್ದರು. ಅದಕ್ಕೆ ಸ್ಪಂದಿಸಿ ಅನುಮೋದನೆ ನೀಡಿದ್ದರು. ಅದರಂತೆ ಐದು ನಾಯಿ ಮರಿಗಳನ್ನು ಖರೀದಿಸಲಾಯಿತು. ಜರ್ಮನ್ ಶೆಪರ್ಡ್, ಲ್ಯಾಬಾಡರ್, ಬೆಲ್ಜಿಯನ್ ಮೆಲ್ಲಿ

ಆಯುಕ್ತಾಲಯದಲ್ಲಿ ಸೋಮವಾರ ಜರುಗಿದ ಸಮಾರಂಭದಲ್ಲಿ ಐದು ನಾಯಿ ಮರಿಗಳಿಗೆ ರೂಬಿ, ರೀಟಾ, ಸ್ಪಾರ್ಕಿ, ಸ್ಪೂರ್ತಿ, ಲಿಯೋ ಎಂದು ಪೊಲೀಸ್ ಆಯುಕ್ತ ಡಾ.ಶರಣಪ್ಪ.ಎಸ್.ಡಿ., ಡಿಸಿಪಿಗಳಾದ ಕನ್ನಿಕಾ ಸಿಕ್ರಿವಾಲ್, ಪ್ರವೀಣ ನಾಯಕ, ಎಸಿಪಿ ಇನ್ನಿತರ ಅಧಿಕಾರಿಗಳು ಸೇರಿಕೊಂಡು ನಾಮಕರಣ ಮಾಡಿದರು.

ರೀಟಾ ಮತ್ತು ರೂಬಿ ಕ್ರೆÊಂಗಳ ಪತ್ತೆಗೆ, ಸ್ಪಾರ್ಕಿ ಹಾಗೂ ಸ್ಪೂರ್ತಿ ಸ್ಪೋಟಕ ವಸ್ತುಗಳ ಪತ್ತೆಗೆ ಹಾಗೂ ಲಿಯೋಳನ್ನು ಮಾದಕ ವಸ್ತುಗಳ ಪತ್ತೆ ಮಾಡುವ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತದೆ. ನಗರ ಪೊಲೀಸ್ ಪಡೆಗೆ ಹೊಸದಾಗಿ ಸೇರಿಕೊಂಡಿರುವ ಐದು ನಾಯಿ ಮರಿಗಳನ್ನು ಬೆಂಗಳೂರಿನ ಆಡುಗೋಡಿಯಲ್ಲಿರುವ ಸಿಎಆರ್ ಕೇಂದ್ರಕ್ಕೆ ತರಬೇತಿಗಾಗಿ ಕಳುಹಿಸಲಾಗುತ್ತದೆ ಎಂದು ಪೊಲೀಸ್ ಆಯುಕ್ತ ಡಾ.ಶರಣಪ್ಪ ತಿಳಿಸಿದರು.

ನಗರ ಪೊಲೀಸಗೆ ಸೇರ್ಪಡೆಯಾಗಿರುವ ಐದು ನಾಯಿ ಮರಿಗಳು ೫೭ರಿಂದÀ ೮೭ ದಿನಗಳದ್ದಾಗಿದ್ದು ಚಿತ್ರದುರ್ಗದ ಬ್ರೀಡರ್ ಬಳಿ ಖರೀದಿಸಲಾಗಿದೆ. ನಾಮಕರಣ ಮಾಡಿದ್ದು ೯ ತಿಂಗಳ ಕಾಲ ವಾಸನೆ ಕಂಡು ಹಿಡಿಯುವುದು, ಈಜು,ರನ್ನಿಂಗ್, ಸೆಲ್ಯೂಟ್, ಕಮಾಂಡ್ ಇನ್ನಿತರ ಕುರಿತು ತರಬೇತಿಯನ್ನುಬೆಂಗಳೂರಿನಲ್ಲಿ ಕೊಡಲಾಗುತ್ತದೆ. ಅವುಗಳಿಗೆ ವರ್ಷ ತುಂಬವ ಹೊತ್ತಿಗೆ ಕರ್ತವ್ಯಕ್ಕೆ ಸಜ್ಜಾಗಲಿವೆ.

| ಡಾ.ಶರಣಪ್ಪ ಎಸ್.ಡಿ. ಪೊಲೀಸ್ ಆಯುಕ್ತರು