ವಿಜಯಪುರದ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿರುವ ಡಿಡಿಪಿಐ ಉಮೇಶ ಶಿರಹಟ್ಟಿಮಠ ಕೊಠಡಿಗೆ ಬೀಗ ಜಡಿದಿರುವುದು. 
ಜಿಲ್ಲೆ

ಕಲಬುರಗಿ ಬಂದ್: ನಗರದ ಶಾಲೆಗಳಿಗೆ ರಜೆ ಘೋಷಣೆ

ಕಲಬುರಗಿ: ಡಾ.ಬಿ.ಆರ್.ಅಂಬೇಡ್ಕರ್‌ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂವಿಧಾನ ರಕ್ಷಣಾ ಸಮಿತಿಯೂ ಡಿ.೨೪ರಂದು ಮಂಗಳವಾರ ಬಂದ್ ಘೋಷಿಸಿದ ಹಿನ್ನೆಲೆಯಲ್ಲಿ ನಗರದ ವ್ಯಾಪ್ತಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಮಕ್ಕಳ ರಕ್ಷಣೆ ದೃಷ್ಟಿಯಿಂದ ನಗರ ವ್ಯಾಪ್ತಿಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಸೇರಿ ಎಲ್ಲ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಿಸಿದ್ದು, ಸದರಿ ರಜಾ ದಿನದ ಅವಧಿಯನ್ನು ಮುಂದಿನ ಎರಡು ಶನಿವಾರದಂದು ಪೂರ್ಣಪ್ರಮಾಣದಲ್ಲಿ ಪಾಠ ಬೋಧಿಸುವ ಮೂಲಕ ಪಾಠ ಬೋಧನೆ ಕೊರತೆಯನ್ನು ನೀಗಿಸುವಂತೆ ಆದೇಶಿಸಲಾಗಿದೆ.

ಬೆಳಗ್ಗೆ ೬ರಿಂದಲೇ ಬಂದ್: ಕಲಬುರಗಿ ಬಂದ್ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ೬ಗಂಟೆಯಿಂದಲೇ ಬಂದ್ ಆಚರಣೆ ನಡೆಯಲಿದ್ದು, ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆಗಲಿವೆ. ವ್ಯಾಪಾರ ವಹಿವಾಟು ಸ್ಥಗಿತವಾಗಲಿದ್ದು, ಸರ್ಕಾರಿ ಸಾರಿಗೆಯೂ ಬಂದ್ ಆಗುವ ಸಾಧ್ಯತೆ ಇದೆ. ಸಂಜೆ ೫ಗಂಟೆವರೆಗೆ ಬಂದ್ ಮುಂದುವರಿಯು ಸಾಧ್ಯತೆ ಇದೆ.