ಜಿಲ್ಲೆ

ಎಸ್‌ಬಿ ಏರ್‌ಪೋರ್ಟ್ ಎಕ್ಸ್ ಅಭಿಯಾನ

ಕಲಬುರಗಿ: ವಿಮಾನ ನಿಲ್ದಾಣಕ್ಕೆ ಶ್ರೀ ಶರಣಬಸವೇಶ್ವರರ ನಾಮಕರಣ ಮಾಡಬೇಕು ಎಂದು ಆಗ್ರಹಿಸಿ ವೀರಶೈವ ಲಿಂಗಾಯತ ಮಹಾ ವೇದಿಕೆಯಿಂದ ಶನಿವಾರ ಬೆಳಗ್ಗೆ ೧೦ರಿಂದ ಸಂಜೆ ೧೦ರವರೆಗೆ ಎಕ್ಸ್ (ಟ್ವಿಟರ್) ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಜಿಲ್ಲಾಧ್ಯಕ್ಷ ದಯಾನಂದ ಪಾಟೀಲ್, ಮುಖಂಡ ಶ್ರೀಧರ ನಾಗನಹಳ್ಳಿ ತಿಳಿಸಿದ್ದಾರೆ. ಎಸ್‌ಬಿಏರ್‌ಪೋರ್ಟ್ಕಲಬುರಗಿ #SBAirportKalburgi ಹ್ಯಾಶ್‌ಟ್ಯಾಗ್ ಅಭಿಯಾನವನ್ನು ಹಮ್ಮಿಕೊಂಡಿದ್ದು, ಶರಣರು, ದಾಸೋಹದ ಭಕ್ತರು ಕೈಜೋಡಿಸಬೇಕು ಎಂದು ಕೋರಿದ್ದಾರೆ. #SBAirportKalburgi