ಜಿಲ್ಲೆ

ಭರತನಾಟ್ಯ ಶಿಷ್ಯವೇತನಕ್ಕೆ ಆಯ್ಕೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಕಲಾ ಸುಜಯ ಸಂಸ್ಥೆಯ ಸಂಪದಾ ಕುಲಕರ್ಣಿ ಹಾಗೂ ಅಂಕಿತಾ ಭಟ್ಟಾಚಾರ್ಯ ಅವರು ಭರತ ನಾಟ್ಯ ಪ್ರಾವಿಣ್ಯತೆಗಾಗಿ ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಕೊಡಮಾಡುವ ಶಿಷ್ಯವೇತನಕ್ಕಾಗಿ ಆಯ್ಕೆಯಾಗಿದ್ದಾರೆ.

ಇವರು ಕಲಾ ಸುಜಯ ಸಂಸ್ಥೆಯ ವಿದ್ವಾನ್ ಸುಜಯ್ ಶಾನಭಾಗ ಅವರ ಶಿಷ್ಯಂದಿರಾಗಿದ್ದು, ಇವರನ್ನು ಜನವರಿ 16ರಂದು ಬೆಂಗಳೂರಿನ ಕನ್ನಡ ಭವನದಲ್ಲಿ ನೃತ್ಯ ಪ್ರದರ್ಶನ ನೀಡಲು ಆಹ್ವಾನಿಸಲಾಗಿದೆ.

ಇದು ಹುಬ್ಬಳ್ಳಿಗರಿಗೆ ಹೆಮ್ಮೆ ಪಡುವ ವಿಷಯ ಎಂದು ಸುಜಯ್ ಶಾನಭಾಗ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.