ಜಿಲ್ಲೆ

ಚಿಗುರು ಸಂಜೆ 10ರಂದು, ಕಲಾ ಸುಜಯ ದಶಮಾನೋತ್ಸವ ಸಂಭ್ರಮ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಕಲಾ ಸುಜಯ ಸಂಸ್ಥೆಯ ದಶಮಾನೋತ್ಸವ ಅಂಗವಾಗಿ ಪ್ರತಿ ತಿಂಗಳ ಚಿಗುರು ಸಂಜೆ 6ನೇ ಸರಣಿಯ ಭರತ ನಾಟ್ಯ ಕಾರ್ಯಕ್ರಮ ನ. 10ರಂದು ಸಂಜೆ 5.30ಕ್ಕೆ ನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ ಏರ್ಪಡಿಸಲಾಗಿದೆ ಎಂದು ಕಲಾ ಸುಜಯದ ಮ್ಯಾನೇಜಿಂಗ್ ಟ್ರಸ್ಟಿ, ವಿದ್ವಾನ್ ಸುಜಯ ಶಾನಭಾಗ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯ ಸುಮಾರು 150ಕ್ಕೂ ಹೆಚ್ಚು ಮಕ್ಕಳು ಒಂದೇ ವೇದಿಕೆಯಲ್ಲಿ ತಮ್ಮ ಕಲೆ ಪ್ರದರ್ಶನ ಮಾಡಲಿದ್ದಾರೆ. ಶಾಸ್ತ್ರೀಯ ರಾಗಗಳ ಆಧಾರಿತ ಕೃತಿಗಳಿಗೆ ನೃತ್ಯವನ್ನು ಸಂಯೋಜಿಸಲಾಗಿದೆ. ದಾಸ ಸಾಹಿತ್ಯದ ಹರವನ್ನು ಸಾರುವ ಪ್ರಯತ್ನ ಮಾಡಲಾಗಿದೆ. ಮಕ್ಕಳು ಅತ್ಯುತ್ಸಾಹದಿಂದ ಭಾರತೀಯ ಶಾಸ್ತ್ರೀಯ ನೃತ್ಯದ ಗರಿಮೆಯನ್ನು ಸಾರಲಿದ್ದಾರೆ ಎಂದರು.

ಅಂತಾರಾಷ್ಟ್ರೀಯ ಖ್ಯಾತಿಯ ಭರತನಾಟ್ಯ ಗುರು, ವಿದ್ವಾನ್ ಸುಜಯ ಶಾನಭಾಗರ ಗರಡಿಯಲ್ಲಿ ಪಳಗಿದ ಐದು ವರ್ಷದಿಂದ ಹಿಡಿದು ಹಿರಿಯ ವಿದ್ಯಾರ್ಥಿಗಳವರೆಗೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಅತಿಥಿಗಳಾಗಿ ಸಂಸ್ಕಾರ ಭಾರತಿ ಪ್ರಾಂತ ಸಂಟನಾ ಕಾರ್ಯದರ್ಶಿ ಶ್ರೀನಿವಾಸಜಿ, ಸಾಮಾಜಿಕ ಕಾರ್ಯಕರ್ತೆ ಭಾರತಿ ಪಾಟೀಲ, ಪತ್ರಕರ್ತೆ ಕೃಷ್ಣಿ ಶಿರೂರ, ಭಾರತೀಯ ರೈಲ್ವೆಯ ಅರವಿಂದ ಹೇರ್ಳೆ, ಸುಕನ್ಯಾ ಭಟ್, ರತ್ನಾಕರ ಶೆಟ್ಟಿ, ಪ್ರಕಾಶ ತಾವರಗೇರಿ, ಗೀತಾ ಮುಳ್ಳಳ್ಳಿ, ವಿವೇಕ ಪವಾರ ಪಾಲ್ಗೊಳ್ಳುವರು.