ಜಿಲ್ಲೆ

ಕಲಾ ಗೋಪಿನಾಥ್ ನಿಧನ

Webdesk - Ravikanth

ಬೆಂಗಳೂರು: ಯುವ ಉದ್ಯಮಿ ಸುಹಾಸ್ ಗೋಪಿನಾಥ್ ಅವರ ತಾಯಿ ಕಲಾ ಗೋಪಿನಾಥ್ (ಜಯಶ್ರೀ) (70) ಅವರು ಹೃದಯಾಘಾತದಿಂದ ಬೆಂಗಳೂರಿನಲ್ಲಿ ಶುಕ್ರವಾರ ನಿಧನರಾಗಿದ್ದಾರೆ.

ಮೃತರು ಎಂ.ಆರ್. ಗೋಪಿನಾಥ್, ಶ್ರೇಯಸ್ ಗೋಪಿನಾಥ್, ಸುಹಾಸ್ ಗೋಪಿನಾಥ್, ಅಮೃತಾ ಗೋಪಿನಾಥ್ ಮತ್ತು ಕುಟುಂಬದವರನ್ನು ಅಗಲಿದ್ದಾರೆ.

ಸಂಕೇಶ್ವರರ ಕಂಬನಿ: ಕಲಾ ಗೋಪಿನಾಥ್ ಅವರ ನಿಧನಕ್ಕೆ ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ‌್ಮನ್ ಡಾ. ವಿಜಯ ಸಂಕೇಶ್ವರ ಹಾಗೂ ಎಂಡಿ ಆನಂದ ಸಂಕೇಶ್ವರ ಅವರು ಸಂತಾಪ ಸೂಚಿಸಿದ್ದಾರೆ.