ಜಿಲ್ಲೆ

ಕಕ್ಕೇರಿ ಬಿಷ್ಠಾದೇವಿ ಜಾತ್ರೆಗೆ ಚಾಲನೆ

ಸೋಮಲಿಂಗ ತಳವಾರ

ಕಕ್ಕೇರಿ: ವಿಜಯದಶಮಿ ಪ್ರಯುಕ್ತ ಕಕ್ಕೇರಿಯ ಬಿಷ್ಠಾದೇವಿ ಹಾಗೂ ಸಹೋದರಿ ಮೂಕಮ್ಮದೇವಿಯ ಭವ್ಯ ಜಾತ್ರೆಗೆ ಅದ್ದೂರಿಯಾಗಿ ಬುಧವಾರ ಚಾಲನೆ ನೀಡಲಾಯಿತು. ರಾಜ್ಯ ಹಾಗೂ ನೆರೆ ಮಹಾರಾಷ್ಟ್ರ, ಗೋವಾದಿಂದ ಆಗಮಿಸಿದ ಲಾಂತರ ಭಕ್ತರು ದೇವಿಯ ದರ್ಶನ ಪಡೆದರು.

ದೇವಿಯ ಉಡಿ ತುಂಬುವ ಕಾರ್ಯಕ್ರಮ ಬುಧವಾರ ಸಂಜೆ 7ರಿಂದ ರಾತ್ರಿ 3ರ ವರೆಗೆ ಹಾಗೂ ತೆಂಗಿನಕಾಯಿ ಒಡೆಯುವ ಕಾರ್ಯಕ್ರಮ ಗುರುವಾರ ಬೆಳಗ್ಗೆ 4ರಿಂದ ಸೂಯೋರ್ದಯದವರೆಗೆ ನೆರವೇರಿತು. ಬುಧವಾರ ದೇವಸ್ಥಾನದ ವಂಶಸ್ಥರಾದ ಕೌಜಲಗಿ&ದೇಸಾಯಿ ಹಾಗೂ ಆಡಳಿತ ಮಂಡಳಿ ಅಧ್ಯ ಕಾರ್ತಿಕ ಅಂಬೋಜಿ, ಗ್ರಾಪಂ ಮಾಜಿ ಅಧ್ಯ ಭೀಮಪ್ಪ ಅಂಬೋಜಿ ಹಾಗೂ ಅರ್ಚಕರಾದ ಯಲ್ಲಪ್ಪ ದಾಮನೇಕರ ಹಾಗೂ ಬಸವರಾಜ ದುಂಡೆಣ್ಣವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಜರುಗಿದವು. ಒಂದು ವಾರ ಜಾತ್ರೆ ಜರುಗಲಿದೆ. ಭಕ್ತರು ದೇವಿಯ ಆಶೀರ್ವಾದ ಪಡೆದು ಬೆಳ್ಳಿ, ಬಂಗಾರ, ಹಣ, ಸೀರೆ, ಬಾಳೆಹಣ್ಣು, ತೆಂಗಿನಕಾಯಿ, ಕುಪ್ಪಸ ಅರ್ಪಿಸಿ ಹರಕೆ ತೀರಿಸಿದರು. ಕಲಾವಿದರಿಂದ ಭಜನಾ ಕಾರ್ಯಕ್ರಮ ಜರುಗಿದವು.

ಜಾತ್ರೆಗೆ ಸಿಸಿ ಕ್ಯಾಮರಾ ಅಳವಡಿಕೆ: ಈ ಬಾರಿಯೂ ಜಾತ್ರೆ ಪ್ರಾಣಿಬಲಿ ರಹಿತ ಬಿಷ್ಠಾದೇವಿ ಹಾಗೂ ಸಹೋದರಿ ಮೂಕಮ್ಮ ದೇವಿಯ ಜಾತ್ರೆ ಆಚರಿಸಲಾಯಿತು. ಮುಂಜಾಗ್ರತವಾಗಿ ಎರಡು ಚೆಕ್​ ಪೋಸ್ಟ್​ ತೆರೆಯಲಾಗಿತ್ತು. ಎಲ್ಲ ವಾಹನಗಳಿಗೂ ಪ್ರವೇಶ ರ್ನಿಬಂಧಿಸಲಾಗಿತ್ತು. ಜತೆಗೆ 36 ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿತ್ತು. ಜಿಲ್ಲಾಡಳಿತ, ತಾಲೂಕಾಡಳಿತ ಹಾಗೂ ಪೊಲೀಸ್​ ಅಧಿಕಾರಿಗಳು ಗುರುವಾರ ತಪಾಸಣೆ ನಡೆಸಿದರು. ದೇವಸ್ಥಾನದ ಎದುರಿನ ಚಪ್ಪರದಲ್ಲಿ ತಡರಾತ್ರಿ ಪ್ರಾಣಿಬಲಿ ನಡೆಯುವ ಸಾಧ್ಯತೆ ಇತ್ತು. ಆದರೆ, ಪೊಲೀಸರನ್ನು ನಿಯೋಜಿಸಿದ್ದರಿಂದ ಸಾಧ್ಯವಾಗಲಿಲ್ಲ.

ಖಾನಾಪುರ ತಹಸೀಲ್ದಾರ್​ ದುಂಡಪ್ಪ ಕೋಮಾರ, ಬೆಲಹೊಂಗಲ ಡಿವೆಎಸ್ಪಿ ಡಾ.ವೀರಯ್ಯ ಹಿರೇಮಠ, ನಂದಗಡ ಠಾಣೆ ಪಿಐ ಎಸ್​.ಸಿ.ಪಾಟೀಲ, ನಂದಗಡ ಪಿಎಸ್​ಐ ಎಸ್​.ಎಸ್​.ಬದಾಮಿ, ಪೊಲೀಸ್​ ಸಿಬ್ಬಂದಿ ನಿಯೋಜಿಸಲಾಗಿತ್ತು.

ಗ್ರೇಡ್​ 2 ತಹಸೀಲ್ದಾರ್​ ಎಸ್​. ತಂಗೋಳಿ, ಬೀಡಿ ಉಪತಹಸೀಲ್ದಾರ್​ ರೋಹಿತ್​ ಬಡಚಿಕರ, ಬಿ.ಎನ್​.ಸೀಮಾನಿ, ಗ್ರಾಮ ಲೆಕ್ಕಾಧಿಕಾರಿ ರಾಜೇಶ್​ ಯು. ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ದೇವಸ್ಥಾನಗಳು ಮತ್ಯು ಕೂಪವಾಗಬಾರದು

ಕಕ್ಕೇರಿ ಬಿಷ್ಠಾದೇವಿ ಜಾತ್ರಾ ಮಹೋತ್ಸವದಲ್ಲಿ ಪ್ರಾಣಿ ಬಲಿ ನೀಡುವುದು ನಿಷೇಧ ಕುರಿತಾಗಿ ಅರಿವು ಮೂಡಿಸಿದ್ದರಿಂದ ಯಾವುದೇ ಪ್ರಾಣಿಬಲಿ ನೀಡಿಲ್ಲ. ಜಿಲ್ಲಾಡಳಿತದ ಸಹಕಾರದಿಂದ ಇದು ಸಾಧ್ಯವಾಯಿತು. ದೇವಸ್ಥಾನಗಳು ಜೀವ ತೆಗೆಯುವ ಮತ್ಯು ಕೂಪವಾಗಬಾರದು ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಪಶು ಪ್ರಾಣಿ ಬಲಿ ನಿಮೂರ್ಲನ ಮಹಾಸಂ ಅಧ್ಯ ದಯಾನಂದ ಸ್ವಾಮೀಜಿ ಹೇಳಿದರು.