ಕಕ್ಕೇರಾ: ಪಟ್ಟಣದ ಆರಾಧ್ಯದೈವ ಸೌರಾಷ್ಟ್ರ ಅಧಿಪತಿ ಶ್ರೀ ಸೋಮನಾಥ ದೇವರ ಮಹಾರಥೋತ್ಸವ ಲಕ್ಷಾಂತರ ಭಕ್ತ ಸಮೂಹದ ಜೈಘೋಷಗಳ ಮಧ್ಯೆ ಅತ್ಯಂತ ಸಂಭ್ರಮದಿಂದ ಸೋಮವಾರ ಸಂಜೆ ನಡೆಯಿತು.
ದೇವಸ್ಥಾನದ ಪೂಜ್ಯ ನಂದಣ್ಣಪ್ಪ ಪೂಜಾರಿ ಅವರು ಸಂಜೆ ಸೂರ್ಯಾಸ್ತದ ೬-೫೧ಕ್ಕೆ ರಥೋತ್ಸವಕ್ಕೆ ಪೂಜೆ ಸಲ್ಲಿಸಿದ ಬಳಿಕ ಕರಿಮಡ್ಡೆಪ್ಪ ತಾತನವರು ಬಿಳಿವಸ್ತçವನ್ನು ಭಕ್ತರತ್ತ ಬೀಸಿ ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಸೋಮನಾಥ ದೇವರ ಉತ್ಸವ ಮೂರ್ತಿ ಹೊತ್ತಿದ್ದ ರಥೋತ್ಸವ ಭಕ್ತರನ್ನು ಉಲ್ಲಾಸಿತಗೊಂಡು ರಥವನ್ನು ಎಳೆಯತೊಡಗಿದರು. ಈ ವೇಳೆ ಶ್ರೀ ಸೋಮವನಾಥ ಮಹಾರಾಜಕೀ ಜೈ, ಕರಿಮಡ್ಡಿ ಸೋಮನಾಥ ಮಹಾರಾಜಕೀ ಜೈ, ಸೌರಾಷ್ಟç ಅಧಿಪತಿ ಸೋಮನಾಥ ಮಹಾರಾಜಕೀ ಜೈ ಎಂಬ ಘೋಷವಾಖ್ಯಗಳು ಮುಗಿಲು ಮುಟ್ಟುವಂತಿತ್ತು. ಅಲ್ಲದೆ ಲಕ್ಷಾಂತರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ರಥೋತ್ಸವಕ್ಕೆ ಉತ್ತತ್ತಿ, ಬಾಳೆ ಹಣ್ಣು ಮತ್ತು ಹೂವನ್ನು ಸಮರ್ಪಿಸುವ ಮೂಲಕ ತಮ್ಮ ಭಕ್ತಿಯ ಪರಾಕಷ್ಠೆ ಮೆರೆದರು.
ರಥೋತ್ಸವದುದ್ದಕ್ಕೂ ವಿವಿಧ ವಾದ್ಯಘೋಷಗಳು ಮುಗಿಲು ಮುಟ್ಟುವಂತಿತ್ತು. ರಥೋತ್ಸವ ಪಾದಗಟ್ಟೆ ತಲುಪಿ, ಸುರಕ್ಷಿತವಾಗಿ ಸ್ವಸ್ಥಳಕ್ಕೆ ಬಂದು ತಲುಪಿತು. ದೂರದಿಂದಲೇ ಚಪ್ಪಾಳೆ ತಟ್ಟಿ ಭಕ್ತರು ಭಕ್ತಿಯಿಂದ ಕೈಮುಗಿದರು. ಇದಕ್ಕೂ ಮೊದಲು ಹರಕೆ ಹೊತ್ತ ಭಕ್ತರು ಬಾಜಾ ಭಜಂತ್ರಿ, ಡೊಳ್ಳುವಾದ್ಯಗಳೊಂದಿಗೆ ಗಂಟೆ, ಕೊಡೆಯನ್ನು ದೇವಾಲಯಕ್ಕೆ ಅರ್ಪಿಸಿದರು. ಚಿಕ್ಕ ಮಕ್ಕಳು ಸೇರಿ ಹಿರಿಯರು, ಮಹಿಳೆಯರೂ ದೇವಸ್ಥಾನ ಸುತ್ತಲು ದೀರ್ಘದಂಡ ನಮಸ್ಕಾರ ಹಾಕಿದರು.
ಹನುಮಂತರಾಯ ಜಹಾಗಿರದಾರ್, ಕರಿಮಡ್ಡೆಪ್ಪ ಪೂಜಾರಿ, ಪರಮಣ್ಣ ಪೂಜಾರಿ, ಸೋಮನಿಂಗಪ್ಪ ಬೋಯಿ, ಭೀಮಣ್ಣ ಮುತ್ಯಾ ಪೂಲಭಾವಿ, ರಾಮಯ್ಯಶೆಟ್ಟಿ, ಗುಂಡಪ್ಪ ಸೊಲಾಪುರ, ಬಾಲಪ್ಪ ದೇಸಾಯಿ, ರಮೇಶ ಶೆಟ್ಟಿ, ರಾಜು ಹವಾಲ್ದಾರ್, ದೇವಿಂದ್ರಪ್ಪ ಬಳಿಚಕ್ರ, ಬಸಯ್ಯಸ್ವಾಮಿ, ಪರಮಣ್ಣ ಕಮತಗಿ, ಸಿದ್ದಣ್ಣ ದೇಸಾಯಿ, ಡಾ.ಅನೀಲ ಕುಲಕರ್ಣಿ, ಡಾ.ಅಮರಪ್ಪ ಜಂಪಾ, ಪ್ರಾಚಾರ್ಯ ರಾಮಣ್ಣ ಜುಮ್ಮಾ, ಪರಮಣ್ಣ ಕುಂಬಾರ, ಪಟ್ಟಣದ ವತನದಾರರು, ಉಪ ತಹಸೀಲ್ದಾರ್ ರೇವಪ್ಪ ತೆಗ್ಗಿನಮನಿ, ಪುರಸಭೆ ಮುಖ್ಯಾಧಿಕಾರಿ ಪ್ರವೀಣಕುಮಾರ, ಕಂದಾಯ ನಿರೀಕ್ಷಕ ಮಲ್ಕಜಪ್ಪ, ಗ್ರಾಮಾಡಳಿತಾಧಿಕಾರಿ ಬಸವರಾಜ ಶೆಟ್ಟಿ, ಪರಮಣ್ಣ ತೇರಿನ್, ಲಕ್ಷ್ಮಣ ಲಿಂಗದಳ್ಳಿ, ಕಸಾಪ ವಲಯ ಅಧ್ಯಕ್ಷ ಕೆ.ಗವಿಸಿದ್ದೇಶ ಹೊಗರಿ, ನಂದಣ್ಣ ವಾರಿ, ಬುಚ್ಚಪ್ಪ, ಚಂದ್ರು ವಜ್ಜಲ್, ಸೋಮು ದೊರೆ, ನ್ಯಾಯವಾದಿ ಸಂಗಣ್ಣ ಬಾಕ್ಲಿ, ಸಿದ್ದಣ್ಣ ಅಗ್ನಿ, ನಿಂಗಣ್ಣ ಗುರಿಕಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ತಿಂಗಳ ಹಿಂದೆ ನಂದಣ್ಣಪ್ಪ ಪೂಜಾರಿ ಅವರು ಮೊಣಕಾಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರಿಂದ ಭಕ್ತರು ಅವರ ಆರೋಗ್ಯ ವಿಚಾರಿಸಿ ಶುಭ ಕೋರಿದರು. ಈ ವೇಳೆ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಭಜಿ, ಜಿಲೇಬಿ ಖರೀದಿ ಜತೆಗೆ ಮಹಿಳೆಯರು ಆಟಿಕೆ ಸಾಮಾನು ಮತ್ತು ಬಳೆ ಖರೀದಿ ಜೋರಾಗಿತ್ತು.
ಹುಣಸಗಿ ವೃತ್ತ ನಿರೀಕ್ಷಕ ಸಚಿನ ಚೆಲುವಾದಿ ಹಾಗೂ ಕೊಡೇಕಲ್ ಪಿಎಸ್‌ಐ ಸುರೇಶ ಭಾವಿಮನಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದರು.