ಜಿಲ್ಲೆ

‘ಕಾಕನಕೋಟೆ’ ನಾಟಕ ಪ್ರದರ್ಶನ

ಅವಿನಾಶ್ ಜೈನಹಳ್ಳಿ

ಮೈಸೂರು: ರಂಗಾಯಣದ ವನರಂಗದಲ್ಲಿ ಡಿ.30 ಮತ್ತು 31 ರಂದು ಸಂಜೆ 6.30ಕ್ಕೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರಚನೆಯ ‘ಕಾಕನಕೋಟೆ’ ನಾಟಕ ಪ್ರದರ್ಶನ ನಡೆಯಲಿದೆ.

ಎಸ್.ರಾಮನಾಥ ಅವರ ನಿರ್ದೇಶನದಲ್ಲಿ ಭಾರತೀಯ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಿಂದ ನಾಟಕವನ್ನು ಪ್ರಸ್ತುತ ಪಡಿಸಲಿದ್ದಾರೆ.

ಕಥೆ ಕೇಳೋಣ ಬನ್ನಿ

ಕುವೆಂಪುನಗರದ ಕಲಾ ಸುರುಚಿ ಸಂಸ್ಥೆಯಲ್ಲಿ ಡಿ.30 ರಂದು ಸಂಜೆ 4.30ರಿಂದ 5.30ರವರೆಗೆ ಮಕ್ಕಳಿಗಾಗಿ ‘ಕಥೆ ಕೇಳೋಣ ಬನ್ನಿ-808’ ಕಾರ್ಯಕ್ರಮ ಆಯೋಜಿಸಲಾಗಿದೆ.