ಚಿಂತಾಮಣಿ: ಕೈವಾರದ ಮುಖ್ಯ ರಸ್ತೆಯಲ್ಲಿರುವ ನಂದಿನಿ ಭವನದಲ್ಲಿ ಸೆ.15 ರಂದು ಬೆಳಗ್ಗೆ 11ಕ್ಕೆ ಕೈವಾರ ಡೇರಿಯ 2024-&25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ನಡೆಯಲಿದೆ. ಸಂದ ಅಧ್ಯಕ್ಷ ಎಂ.ನರಸಿಂಹಮೂರ್ತಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಕೋಚಿಮುಲ್ ಮಾಜಿ ನಿರ್ದೇಶಕ ಬಿ.ಅಶ್ವತ್ಥ್ನಾರಾಯಣ, ಬೆಂಗಳೂರು ಜಂಟಿ ನಿರ್ದೇಶಕ ಡಾ.ಎಲ್.ರಾಘವೇಂದ್ರ, ಚಿಂತಾಮಣಿ ಶಿಬಿರದ ಉಪ ವ್ಯವಸ್ಥಾಪಕ ಡಾ.ಡಿ.ಎಂ.ಮಹೇಶ್, ವಿಸ್ತರಣಾಧಿಕಾರಿ ಗುಲಾಬ್ಜಾನ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಎಸ್.ರಾಜೇಶ್ ಪಾಲ್ಗೊಳ್ಳುವರು ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎನ್.ಬಾಲಕೃಷ್ಣ ತಿಳಿಸಿದ್ದಾರೆ.