ಚಿಕ್ಕಮಗಳೂರು: ಕೀರ್ತನೆಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡಿದವರು ಕೈವಾರ ತಾತಯ್ಯ. ಅವರ ತತ್ವ, ಆದರ್ಶದ ಬದುಕನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಆನಂದ್ ಶೆಟ್ಟಿ ತಿಳಿಸಿದರು.
ತಾಲೂಕಿನ ಸಗನೀಪುರ ರಸ್ತೆಯ ಕೈವಾರ ಗಿರಿಯಲ್ಲಿ ಜಿಲ್ಲಾ ಹಾಗೂ ತಾಲೂಕು ಬಲಿಜ ಸಂಘ ಮತ್ತು ಶ್ರೀಯೋಗಿ ನಾರೇಯಣ ಬಲಿಜ ಸಂಘದ ಸೇವಾ ಟ್ರಸ್ಟ್ನಿಂದ ಸೋಮವಾರ ಆಯೋಜಿಸಲಾಗಿದ್ದ ಕೈವಾರ ತಾತಯ್ಯರ ೨೯೮ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಾನೀಯರ ಬದುಕು, ತತ್ವ, ಜೀವನ ಮೌಲ್ಯ ಅರಿಯುವುದು, ಅನುಸರಿಸುವುದರಿಂದ ಬದುಕು ಹಸನಾಗುತ್ತದೆ. ಕೈವಾರ ತಾತಯ್ಯ ಸಮಾಜ ಕಟ್ಟುವ ಕೆಲಸಕ್ಕೆ ಕೊಡುಗೆ ನೀಡಿದ್ದಾರೆ. ಎಲ್ಲರಿಂದ ಒಳ್ಳೆಯ ಯೋಚನೆಗಳ ಕೆಲಸಗಳಾಗುವ ಮೂಲಕ ಸಮಾಜಕ್ಕೆ ಕೊಡುಗೆ ಸಿಗುವಂತಾಗಲಿ ಎಂದು ಆಶಿಸಿದರು.
ಕೈವಾರ ತಾತಯ್ಯ ಅವರ ಕ್ಷೇತ್ರಕ್ಕೆ ತೆರಳಿದರೆ ಆತ್ಮಸ್ಥೆÊರ್ಯ ಮೂಡಲಿದೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸಾಹಿತ್ಯ ರಚಿಸಿದ್ದಾರೆ. ಜನರ ಕಣ್ಣು ತೆರೆಸುವಂತಹ ಪದ್ಯಗಳನ್ನು ಬರೆದಿದ್ದಾರೆ. ಶರಣ, ದಾಸ ಪರಂಪರೆಗಳಿಗೆ ಕೊಂಡಿಯಾಗಿ ಕೆಲಸ ಮಾಡಿದ ಕೀರ್ತಿ ಅವರಿಗೆ ಸಲುತ್ತದೆ ಎಂದು ಶ್ಲಾಘಿಸಿದರು.
ತಾಲೂಕು ಬಲಿಜ ಸಂಘದ ಅಧ್ಯಕ್ಷ ದೇವರಾಜ್ ಮಾತನಾಡಿ, ಕೈವಾರ ತಾತಯ್ಯನವರು ಸಮಾಜ ಸುಧಾರಕರಾಗಿದ್ದು, ಅವರು ತೋರಿದ ಮಾರ್ಗದಲ್ಲಿ ಪ್ರತಿಯೊಬ್ಬರೂ ಸಾಗಬೇಕಿದೆ. ಅವರ ಕಾಲಜ್ಞಾನದಲ್ಲಿ ಜಗತ್ತು ಅರಿಯಬೇಕಾದ ಅನೇಕ ಅಂಶಗಳಿವೆ. ಅವರು ತೋರಿದ ಮಾರ್ಗದರ್ಶನ ಪಾಲಿಸಿದರೆ ಎಲ್ಲೆಡೆ ಶಾಂತಿ ನೆಲೆಸುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.
ಕೈವಾರ ತಾತಯ್ಯ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀಯೋಗಿನಾರೇಯಣ ತಾತಯ್ಯನವರು ಅಧ್ಯಾತ್ಮ ಚಿಂತಕರು, ಸಮಾಜ ಸುಧಾರಕರು, ದಾಸ ಸಾಹಿತ್ಯದ ಹರಿಕಾರರು, ಯೋಗತತ್ವಸಿದ್ದಾಂತದ ಪ್ರತಿಪಾದಕರಾಗಿದ್ದವರು. ಬಾಲ್ಯದಿಂದಲೇ ಅಧ್ಯಾತ್ಮದತ್ತ ಒಲವಿದ್ದ ಯೋಗಿ ನಾರೇಯಣರು ದಿನದ ಬಹುಸಮಯವನ್ನು ಧ್ಯಾನದಲ್ಲೇ ಕಳೆಯುತ್ತಿದ್ದರು ಎಂದರು.
ಮೂಲತ ಕುಲವೃತ್ತಿ ಬಳೆ ತೊಡಿಸುವ ಕಾಯಕ. ಬಳೇ ವ್ಯಾಪಾರಕ್ಕಾಗಿ ಊರೂರು ಸುತ್ತುತ್ತಾ ಮಹಾಲಕ್ಷಿö್ಮÃ ಸ್ವರೂಪರಾದ ಮಹಿಳೆಯರಿಗೆ ಬಳೆಯನ್ನು ತೊಡಿಸುತ್ತಾ, ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ಜನರ ಮನೋ ನಾಡಿ ಅರಿತವರಾಗಿದ್ದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾಹಿತಿ ಪ.ಶ್ರೀನಿವಾಸ್, ಗಾಯಕ ಮಲ್ಲಿಗೆ ಸುಧೀರ್, ಬಲಿಜ ಸೇವಾ ಟ್ರಸ್ಟ್ ಉಪಾಧ್ಯಕ್ಷ ಸಿ.ಟಿ.ಜಯವರ್ಧನ್, ಪ್ರಧಾನ ಕಾರ್ಯದರ್ಶಿ ಆರ್.ಕುಮಾರ್, ಖಜಾಂಚಿ ಪೂಜಾರ್ ಮಂಜಪ್ಪ, ಲೆಕ್ಕ ಪರಿಶೋಧಕ ರತೀಶ್‌ಕುಮಾರ್, ಸಹ ಕಾರ್ಯದರ್ಶಿ ಮಹೇಶ್, ಕಾನೂನು ಸಲಹೆಗಾರರಾದÀ ಜಿ.ಬಾಲಕೃಷ್ಣ, ಜಿ.ಆರ್.ಶ್ರವಣ್, ಸದಸ್ಯರಾದ ಎ.ಯಶ್ವಂತ್, ಕೆ.ಬಿ.ಗಿರೀಶ್, ಸಿ.ಎಲ್.ಅಲೋಕ್, ಕೆ.ಪಿ.ಪ್ರಸನ್ನ ಕುಮಾರ್, ಕೆ.ಟಿ. ಮರಿಶೆಟ್ಟಿ, ಧರ್ಮಶೆಟ್ಟಿ ಮತ್ತಿತರರಿದ್ದರು.