ಕುಶಾಲನಗರ: ಕುಶಾಲನಗರ ತಾಲೂಕಿನ ಬಲಿಜ ಸಮಾಜದ ವತಿಯಿಂದ ಕೈವಾರ ತಾತಯ್ಯನವರ ೨೯೯ನೇ ಜಯಂತಿಯನ್ನು ಶುಕ್ರವಾರ ಬಲಿಜ ಸಮಾಜದ ಕಛೇರಿಯಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಯೋಗಿ ನಾರೇಯಣರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅವರ ಸೇವೆಯನ್ನು ಸ್ಮರಿಸಲಾಯಿತು. ಯೋಗಿ ನಾರಾಯಣರು ಈ ನಾಡು ಕಂಡ ಅಪ್ರತಿಮ ಶ್ರೇಷ್ಠ ಯತೀಂದ್ರರು. ಅವರು ತಮ್ಮ ಸಾಧನಾ ಶಕ್ತಿಯಿಂದ ಜಗತ್ತನ್ನು ಮುನ್ನಡೆಸುತ್ತಿರುವ ಪಾರ್ವತಿ ಪರಮೇಶ್ವರರೇ ಸ್ವತಃ ಲೇಖನಿ ಕೊಟ್ಟು ಬರೆಸಿದ ತ್ರಿಕಾಲ ಜ್ಞಾನವನ್ನು ಬರೆಸಿದ ಬಗ್ಗೆ ಪ್ರತೀತಿ ಇದ್ದು, ಇದು ಕೃತಯುಗ, ತ್ರೇತಾಯುಗ ಹಾಗೂ ದ್ವಾಪರ ಯುಗಗಳಿಗೂ ಅನ್ವಯವಾಗುವಂತಿತ್ತು. ಹಾಗಾಗಿ ನಾರಾಯಣರು ನಂತರ ಕೈವಾರ ತಾತಯ್ಯನಾಗಿ ಪ್ರಸಿದ್ಧಿ ಪಡೆದರೆಂದು ಬಲಿಜ ಸಮಾಜದ ಅಧ್ಯಕ್ಷ ಆರ್.ಬಾಬಣ್ಣ ಹೇಳಿದರು.
ಈ ಸಂದರ್ಭ ಸಮಾಜದ ಗೌರವಾಧ್ಯಕ್ಷ ಟಿ.ಎಸ್.ಬಾಲಕೃಷ್ಣ, ಉಪಾಧ್ಯಕ್ಷ ಎಂ.ಆರ್.ಗಣೇಶ್, ಕಾರ್ಯದರ್ಶಿ ಟಿ.ಎಸ್.ನಿರಂಜನ್, ಸಹಕಾರ್ಯದರ್ಶಿ ಟಿ.ಎನ್.ಜಯರಾಂ, ಖಜಾಂಚಿ ಟಿ.ಬಿ.ಸತೀಶ್, ಸಂಚಾಲಕ ಸಿ.ಎನ್.ಮದನ್, ಪ್ರಮುಖರಾದ ಟಿ.ಡಿ.ದಯಾನಂದ್, ಸವಿತಾ ದಯಾನಂದ, ಶಿಲ್ಪಾ ಸತೀಶ್, ಚಂದ್ರಕಲಾ, ಪುಷ್ಪಾವತಿ, ಸುನಿಲ್ ಬಾಬಣ್ಣ ಸೇರಿದಂತೆ ಸಮಾಜದವರು ಇದ್ದರು.