ಮಡಿಕೇರಿ:
ಕೈಲ್ ಪೋಳ್ದ್ ಹಬ್ಬವನ್ನು ಕೊಡಗಿನ ಹಲವೆಡೆ ಬುಧವಾರ ಸಾಂಪ್ರದಾಯಿಕವಾಗಿ ಅಚರಿಸಲಾಯಿತು. ಚೆಟ್ಟಳ್ಳಿಯಲ್ಲಿರುವ ಪುತ್ತರಿರ ಕುಟುಂಬದವರೆಲ್ಲ ಐನ್ ಮನೆಯಲ್ಲಿ ಸೇರಿ ಸಾಂಪ್ರದಾಯಿಕವಾಗಿ ಅಯುಧ ಪೂಜೆ ಮಾಡಿದರು.
ಕುಟುಂಬದ ಹಿರಿಯ ಪುತ್ತರಿರ ಗಣೇಶ್ ಭೀಮಯ್ಯ ನಡುಬಾಡೆಯಲ್ಲಿ ಮೀದಿನೀರಿಟ್ಟು ಪೂಜೆ ಸಲ್ಲಿಸಿ ಕೈಲ್ ಪೊಳ್ದ್ ಆಚರಣೆ ಮಾಡಲಾಗುತಿದ್ದು ಎಲ್ಲರಿಗೂ ಒಳಿತಾಗಲೆಂದು ಬೇಡಿ ಕೊಂಡರು. ಅದೇ ರೀತಿ ಹಿರಿಯರಾದ ಪುತ್ತರಿರ ಸುಜು ಬಿದ್ದಪ್ಪ ಅವರು ಅಡುಗೆ ಮನೆಯಲ್ಲಿ ಮೀದಿ ನೀರಿಟ್ಟು ಬೇಡಿಕೊಂಡರು.
ಹಬ್ಬದ ಅಂಗವಾಗಿ ಮಹಿಳೆಯರು ತಯಾರಿಸಿದ ವಿಶೇಷ ಕಡುಂಬುಟ್ಟು, ಪಂದಿಕರಿ, ನೈಯಿಕೂಳ್, ಕೋಳಿಕರಿ, ಪಾಯಸ ಹೀಗೆ ಹಲವು ಬಗೆಯ ಖಾದ್ಯಗಳನ್ನು ಸವಿಯಲಾಯಿತು. ಬೋಜನದ ಸವಿದನಂತರ ಕುಟುಂಬದವರೆಲ್ಲ ಸೇರಿ ತೆಂಗಿನಕಾಯಿಗೆ ಗುಂಡು ಹೊಡೆಯು ಕಾರ್ಯಕ್ರಮದಲ್ಲಿ ಭಾಗಿಯಾದರು. ನಂತರ ಊರಿನವರೆಲ್ಲ ಮಂದ್‌ನಲ್ಲಿ ಸೇರಿ ತೆಂಗಿನಕಾಯಿಗೆ ಗುಂಡು ಹೊಡೆದು ಸಂಭ್ರಮಿಸಿದರು.