ಕೊಟ್ಟೂರು: ಕೊಟ್ಟೂರು ಕೆರೆಗೆ ನೂರು ವರ್ಷ ತುಂಬಿದ್ದು, ಹಲವು ಸಮಸ್ಯೆಗಳ ಗೂಡಾಗಿದೆ. ಈ ವರೆಗೂ ದುರಸ್ತಿ ಕಾರ್ಯಕ್ಕೆ ಯಾವ ಅಧಿಕಾರಿಗಳು ಮುಂದಾಗುತ್ತಿಲ್ಲ ಎನ್ನುವುದೇ ವಿಪರ್ಯಾಸ.
ಇದನ್ನೂ ಓದಿ: ಕೊಟ್ಟೂರು ಬಸವೇಶ್ವರ ದೇಗುಲ ಲೋಕಾರ್ಪಣೆ
ಕೆರೆಯ ಎರಡೂ ತೂಬುಗಳು ಶಿಥಿಲಗೊಂಡಿವೆ. ಕೆರೆ ತುಂಬಿದಾಗ ನೀರು ವ್ಯರ್ಥವಾಗಿ ಹರಿಯುತ್ತದೆ. ರಭಸವಾಗಿ ಮಳೆ ಬಂದರೆ, ಕೋಡಿ ಕಿತ್ತುಹೋಗುತ್ತದೆ. ಕೆರೆಯ ಹಿಂಭಾಗ ಮುಳ್ಳಿನ ಗಿಡಗಳಿಂದ ತುಂಬಿದೆ.
ಅವಸಾನದತ್ತ ಸಾಗಿದ ಕೆರೆಯನ್ನು ಉಳಿಸಲು ಹಠತೊಟ್ಟ ಅಂಚೆ ಕೊಟ್ರೇಶ ಅವರು 2017ರಲ್ಲಿ ನಮ್ಮ ಕೆರೆ ನಮ್ಮ ಹಕ್ಕು ಅಭಿಯಾನ ಆರಂಭಿಸಿದಾಗ ಕೆರೆಯಲ್ಲಿ ನೀರಲಿಲ್ಲ. ಕೆರೆ ಉಳಿಸುವ ಇವರ ಒಂಟಿ ಹೋರಾಟ ನಂತರ ಆಂದೋಲನವಾಗಿ ಪರಿವರ್ತನೆಯಾಯಿತು. ಇವರೊಂದಿಗೆ ಸಂಘ ಸಂಸ್ಥೆಗಳು, ಸಾರ್ವಜನಿಕರು ಕೈಜೋಡಿಸಿ ಜಾಲಿಗಿಡಗಳ ಕಾಡಾಗಿದ್ದ ಕರೆಯನ್ನು ತಕ್ಕ ಮಟ್ಟಿಗೆ ಮುಕ್ತಿಗೊಳಿಸಿದರು.
ನಂತರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಈ ಕೆರೆ ಉಳು ತೆಗೆಯಲು ಆರಂಭಿಸಿತು. ಎಷ್ಟೇ ಆದರೂ, ಸರ್ಕಾರ ಯೋಜನೆ ಅಲ್ಲಿನ ಮಣ್ಣು ಕೆರೆ ಅಂಗಳಬಿಟ್ಟು ಹೊರಗೆ ಹೋಗಲೇ ಇಲ್ಲ. ಆದರೆ ಉದ್ದೇಶಿತ ಯೋಜನೆ ಯಶಸ್ವಿಯಾಗದೆ ಸರ್ಕಾರದ ಹಣ ವ್ಯರ್ಥವಾಯಿತು.
ಮೊದಲ ಸಾರಿ ಕೆರೆ ತುಂಬಿದಾಗ ನೇಮಿರಾಜ ನಾಯ್ಕ, ನಂತರ ಎರಡು ಸಾರಿ ಕೆರೆ ತುಂಬಿದಾಗ ಭೀಮಾನಾಯ್ಕ ಶಾಸಕರಾಗಿದ್ದರು. ಕೆರೆ ಅಭಿವೃದ್ಧಿಗೊಳಿಸುತ್ತೇವೆ, ಏರಿ ಮೇಲೆ ಪಾರ್ಕ್ ಮಾಡುವ ಭರವಸೆ ಇಬ್ಬರೂ ನೀಡಿದರೂ ಈವರೆಗೂ ಈಡೇರಿದಿಲ್ಲ. ಈಗ ಮತ್ತೆ ಶಾಸಕರಾಗಿರುವ ನೇಮಿರಾಜ ನಾಯ್ಕ ಪುನಾ ಕೆರೆ ಅಭಿವೃದ್ಧಿಗೊಳಿಸಲು ಮನಸ್ಸು ಮಾಡಬೇಕಿದೆ. ಕೊಟ್ಟೂರು ಕೆರೆಯ ವಿಸ್ತೀರ್ಣ 266.15 ಹೆಕ್ಟೇರ್ ಇದೆ. 304 ಹೆಕ್ಟೇರ್ ಅಚ್ಚುಕಟ್ಟು ಹೊಂದಿದೆ.
ಕೆರೆ ಅಭಿವೃದ್ಧಿಗೆ 2.50 ಕೋಟಿ ರೂ. ಯೋಜನೆ ರೂಪಿಸಿ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಕರೊನಾ ಕಾರಣದಿಂದ ಅದು ನಿಂತುಹೋಯಿತು. ಈಗ ಹೊಸ ಪ್ರಪೋಸಲ್ ಕಳುಹಿಸಿದ್ದೇವೆ. ಎರಡೂ ತೂಬುಗಳನ್ನು ಹೊಸದಾಗಿ ನಿರ್ಮಿಸಬೇಕು. ಕೋಡಿಯನ್ನು ಕಿತ್ತು ಕಟ್ಟಿಸಬೇಕು. ಬಂಡ್ ಹೆಚ್ಚಿಸಬೇಕು. ಪ್ರವಾಸೋದ್ಯಮ ಇಲಾಖೆ ಟೂರಿಸಂ ಸ್ಪಾಟ್‌ನ್ನಾಗಿ ಪರಿವರ್ತಿಸಲು ಪ್ರಪೋಸಲ್ ಕೇಳಿದೆ. ಆದರೆ, ಸಂಡೂರು, ಕೂಡ್ಲಿಗಿ, ಕೊಟ್ಟೂರು ತಾಲೂಕಿನಲ್ಲಿ ಒಂದು ಕೆರೆಗೆ ಮಾತ್ರ ಅನ್ವಯ ಎಂದು ತಿಳಿಸಲಾಗಿದ್ದು, ಇದು ನಮ್ಮನ್ನು ಚಿಂತೆಗೆ ತಳ್ಳಿದೆ. ಸೂಗಪ್ಪ ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್, ಕೂಡ್ಲಿಗಿ (ಜೂನ್ 28 ಕೊಟ್ಟೂರು 1) ಕೆರೆ ಅಭಿವೃದ್ಧಿ ಬಗ್ಗೆ ಇಲ್ಲಿಯವರೆಗೆ ಸಣ್ಣ ನೀರಾವರಿ ಇಲಾಖೆಯಿಂದ ಯಾವುದೇ ಪ್ರಪೋಸಲ್ ಬಂದಿಲ್ಲ. ಅವರು ನೀಲಿನಕ್ಷೆ ಸಿದ್ದಪಡಿಸಿಕೊಟ್ಟರೆ ಖಂಡಿತ ಸರ್ಕಾರದಿಂದ ಅನುದಾನ ತಂದುಕೊಡುತ್ತೇನೆ. ಶತಮಾನದ ಕೆರೆ ಅಭಿವೃದ್ಧಿಗೊಳಿಸುವುದು ನನ್ನ ಹೊಣೆ. ನೇಮಿರಾಜ ನಾಯ್ಕ ಶಾಸಕ ಹಗರಿಬೊಮ್ಮನಹಳ್ಳಿ ಪ್ರತಿ ಸಾರಿ ಕೆರೆ ತುಂಬಿದಾಗ, ಕೆರೆಯ ಏರಿಯ ಮೇಲಿರುವ ಗಿಡಗಳನ್ನು ಹಾಗೂ ಕೆರೆ ಹಿಂಭಾಗದಲ್ಲಿನ ಗಿಡಗಳನ್ನು ಕಡಿದು ಸ್ವಚ್ಛಗೊಳಿಸುತ್ತೇವೆ. ಕಾಲುವೆ, ತೂಬುಗಳನ್ನು ರಿಪೇರಿ ಮಾಡುತ್ತೇವೆ. ಸರ್ಕಾರಕ್ಕೆ ಪ್ರಪೋಸಲ್ ಕಳಿಸಿದ್ದೇವೆ. ಅನುದಾನ ಬರಬೇಕು ಎಂದು ಸಣ್ಣ ನೀರಾವರಿ ಇಲಾಖೆ ಹೇಳುತ್ತಿದೆ. ಆದರೆ, ಇಲ್ಲಿವರೆಗೆ ಯಾವ ಅಭಿವೃದ್ಧಿ ಕಾರ್ಯ ನೋಡಿಲ್ಲ. ಅಂಚೆ ಕೊಟ್ರೇಶ ನಮ್ಮ ಕೆರೆ ನಮ್ಮ ಹಕ್ಕು ಹೋರಾಟಗಾರ. ಕೊಟ್ಟೂರು