ಜಿಲ್ಲೆ

ಕೈ ಅಭ್ಯರ್ಥಿ ವಿನೋದ ಅಸೂಟಿ ನಾಮಪತ್ರ ಸಲ್ಲಿಕೆ

ವಿಜಯವಾಣಿ ಸುದ್ದಿಜಾಲ ಧಾರವಾಡ
ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ವಿನೋದ ಅಸೂಟಿ ಅವರು ಬೃಹತ್​ ಮೆರವಣಿಗೆ ನಡೆಸುವ ಮೂಲಕ ಮಂಗಳವಾರ ನಾಮಪತ್ರ ಸಲ್ಲಿಸಿದರು.
ನಗರದ ವಿವಿಧ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದ ವಿನೋದ ಅಸೂಟಿ, ಶಿವಾಜಿ ವೃತ್ತದಲ್ಲಿನ ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ತೆರದ ವಾಹನದಲ್ಲಿ ಕಾರ್ಯಕರ್ತರು, ಬೆಂಬಲಿಗರೊಂದಿಗೆ ಮೆರವಣಿಗೆ ಪ್ರಾರಂಭಿಸಿದರು.
ರೀಗಲ್​ ವೃತ್ತ, ಸಿಬಿಟಿ, ಅಂಜುಮನ್​ ವೃತ್ತ, ಆರದ್​ ಪಾರ್ಕ್​, ಜ್ಯುಬಿಲಿ ವೃತ್ತ, ಕೋರ್ಟ್​ ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಚುನಾವಣಾಧಿಕಾರಿ ದಿವ್ಯ ಪ್ರಭು ಅವರಿಗೆ ನಾಮಪತ್ರ ಸಲ್ಲಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್​, ಶಾಸಕರಾದ ಪ್ರಸಾದ ಅಬ್ಬಯ್ಯ, ಎನ್​.ಎಚ್​. ಕೋನರಡ್ಡಿ, ವಿಧಾನಪರಿಷತ್​ ಸದಸ್ಯ ಸಲೀಂ ಅಹ್ಮದ್​, ಮುಖಂಡರಾದ ವಿಜಯ ಕುಲಕಣಿರ್, ಕುಸುಮಾವತಿ ಶಿವಳ್ಳಿ, ಅಲ್ತಾ್​ ಹಳ್ಳೂರ, ಅನಿಲಕುಮಾರ ಪಾಟೀಲ, ಇಸ್ಮಾಯಿಲ್​ ತಮಟಗಾರ, ಎ.ಎಂ. ಹಿಂಡಸಗೇರಿ, ರಾಜಶೇಖರ ಮೆಣಸಿನಕಾಯಿ, ರಜತ ಉಳ್ಳಾಗಡ್ಡಿಮಠ, ಬಸವರಾಜ ಗುರಿಕಾರ, ಈಶ್ವರ ಶಿವಳ್ಳಿ, ಎಂ.ಎಸ್​. ಅಕ್ಕಿ, ದೀಪಕ ಚಿಂಚೋರೆ, ವಸಂತ ಅರ್ಕಾಚಾರ, ಸೇರಿದಂತೆ ನೂರಾರು ಕಾರ್ಯಕರ್ತರು, ಬೆಂಬಲಿಗರು ಇದ್ದರು.