ಮಂಗಳೂರು: ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವರ್ಷಾವಧಿ ಉತ್ಸವ ಸಂದರ್ಭ ಆರೋಹಣ ಮಾಡಲಾಗಿದ್ದ ಕೊಡಿಮರವನ್ನು ಪದ್ಧತಿ ಪ್ರಕಾರ ಪತ್ತನಾಜೆಯ ದಿನದಂದು ಅವರೋಹಣಗೊಳಿಸಲಾಯಿತು. ಜನವರಿ ತಿಂಗಳ ಮಕರ ಸಂಕ್ರಾಂತಿ ಪರ್ವ ದಿನದಂದು ಕೊಡಿಮರ ಏರಿಸಲಾಗಿತ್ತು.
ಕೊಡಿಮರ ಅವರೋಹಣಕ್ಕೆ ಮೊದಲು ಕ್ಷೇತ್ರದ ತಂತ್ರಿವರ್ಯರಾದ ದೇರೆಬೈಲ್ ಬ್ರಹ್ಮಶ್ರೀ ವಿಠಲದಾಸ ತಂತ್ರಿಯವರು ಪ್ರಾರ್ಥನೆ ನೆರವೇರಿಸಿದರು. ಮಂಗಳೂರು ಮೊಗವೀರ ಏಳು ಪಟ್ಟ ಸಂಯುಕ್ತ ಸಭೆಗೆ ಸೇರಿದ ಗ್ರಾಮ ಸಭೆಗಳ ಕಾರ್ಯಕರ್ತರು ಕೊಡಿಮರ ಏರಿಸುವ ಮತ್ತು ಇಳಿಸುವ ಕಾರ್ಯವನ್ನು ಅನಾದಿಕಾಲದಿಂದಲೂ ನಡೆಸುತ್ತಾ ಬಂದಿದ್ದಾರೆ ಎಂದು ಅವರು ಈ ಸಂದರ್ಭ ತಿಳಿಸಿದರು.
ಮೊಗವೀರ ಏಳುಪಟ್ಟ ಸಂಯುಕ್ತ ಸಭೆಯ ಪ್ರತಿನಿಧಿ ನಾರಾಯಣ ಕೋಟ್ಯಾನ್,ಅಧ್ಯಕ್ಷ ಸುಭಾಶ್ಚಂದ್ರ ಕಾಂಚನ್, ಉಪಾಧ್ಯಕ್ಷರಾದ ಹೇಮಚಂದ್ರ ಸಾಲ್ಯಾನ್, ರಂಜನ್ ಕಾಂಚನ್, ಪ್ರಧಾನ ಕಾರ್ಯದರ್ಶಿ ಯಶವಂತ ಬೋಳೂರ್, ಕೋಶಾಧಿಕಾರಿ ಸುರೇಶ್ ಸುವರ್ಣ, ಜತೆ ಕಾರ್ಯದರ್ಶಿ ಶ್ಯಾಮಸುಂದರ್ ಕಾಂಚ