ಕೊಕ್ಕರ್ಣೆ: ಕಾಡೂರು ಶ್ರೀ ಅಮ್ಮನವರ ದೇವಸ್ಥಾನ ಪುನಃಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವ ಪ್ರಯುಕ್ತ ವಿವಿಧ ಧಾರ್ಮಿಕ ವಿಧಿವಿಧಾನಗಳು ಶನಿವಾರ ಜರುಗಿದವು.
ಮಾ.12ರ ತನಕ ನೂತನ ಶಿಲಾಮಯ ಗರ್ಭಗೃಹ, ಸುತ್ತು ಪೌಳಿ, ಸ್ವಾಗತ ಗೋಪುರ ಲೋಕಾರ್ಪಣೆ ಹಾಗೂ ಶ್ರೀ ಅಮ್ಮನವರು, ಶ್ರೀ ವೀರಭದ್ರ ಹಾಗೂ ಪರಿವಾರ ದೈವಗಳ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ, ವರ್ಷಾವಧಿ ಉತ್ಸವ ಮತ್ತು ಸಿರಿ ಸಿಂಗಾರ ಸೇವೆ ಪ್ರತಿನಿತ್ಯ ವೈವಿಧ್ಯಮಯ ಧಾರ್ಮಿಕ ಸಾಂಸ್ಕೃತಿಕ, ಸಭಾ ಕಾರ‌್ಯಕ್ರಮಗಳೊಂದಿಗೆ ನಡೆಯಲಿದೆ. ಮಾರ್ಚ್ 6ರಂದು ಪುನಃ ಪ್ರತಿಷ್ಠಾಪನೆ 7ರಂದು ಬ್ರಹ್ಮಕಲಶೋತ್ಸವ ನೆರವೇರಲಿದೆ.