ಜಿಲ್ಲೆ

ಕಡಿಯಾಳಿ ಗಣೇಶೋತ್ಸವ ಸಮಿತಿ ಆಮಂತ್ರಣ ಪತ್ರಿಕೆ ಬಿಡುಗಡೆ

ಗೋಪಾಲಕೃಷ್ಣ ಪಾದೂರ್

ಉಡುಪಿ: ಕಡಿಯಾಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಶ್ರಯದಲ್ಲಿ ನಡೆಯುವ 57ನೇ ವರ್ಷದ ಗಣೇಶೋತ್ಸವ ಆಮಂತ್ರಣ ಪತ್ರಿಕೆಯನ್ನು ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಸಮಾಜಸೇವಕ ಈಶ್ವರ್​ ಮಲ್ಪೆ ಮತ್ತು ವಿಶು ಶೆಟ್ಟಿ ಅಂಬಲಪಾಡಿ ಮತ್ತು ನಗರಸಭೆಯ ಮಾಜಿ ಪೌರಾಯುಕ್ತ ಮಂಜುನಾಥಯ್ಯ ಬಿಡುಗಡೆಗೊಳಿಸಿದರು.

ಈ ಸಮಯದಲ್ಲಿ ಗಣೇಶೋತ್ಸವ ಸಮಿತಿಯ ಸಂಚಾಲಕ ಮಟ್ಟಾರ್​ ಗಣೇಶ್​ ಕಿಣಿ, ಪ್ರಧಾನ ಕಾರ್ಯದರ್ಶಿ ಕೆ ರಾಘವೇಂದ್ರ ಕಿಣಿ, ನಗರಸಭಾ ಸದಸ್ಯೆ ಗೀತಾ ಶೇಟ್​, ಗಣೇಶೋತ್ಸವ ಸಮಿತಿ ಕಾರ್ಯದರ್ಶಿಗಳಾದ ಸಂತೋಷ್​ ಕಿಣಿ ಮತ್ತು ಸತೀಶ್​ ಕುಲಾಲ್​ ಕಡಿಯಾಳಿ, ಗಣೇಶೋತ್ಸವ ಸಮಿತಿಯ ಉಪಾಧ್ಯೆ ಭಾರತಿ ಚಂದ್ರಶೇಖರ್​, ಅನ್ನ ಸಂತರ್ಪಣೆ ಸಮಿತಿಯ ಸಂಚಾಲಕ ಮಂಜುನಾಥ್​ ಹೆಬ್ಬಾರ್​, ಗಣೇಶೋತ್ಸವ ಸಮಿತಿಯ ಆಮಂತ್ರಣ ಪತ್ರಿಕೆ ಸಂಚಾಲಕ ಜಯಂತ್​ ಕುಂದರ್​ ಮತ್ತು ಸಂದೀಪ್​ ಸನಿಲ್​, ಸಮಿತಿಯ ಪದಾಧಿಕಾರಿಗಳಾದ ಜೀವರತ್ನ ದೇವಾಡಿಗ, ಮಂಜುನಾಥ್​ ರಾವ್​, ಮುರುಳಿಧರ್​ ಪೈ, ಹರಿಪ್ರಸಾದ್​ ರಾವ್​ ಕಡಿಯಾಳಿ, ಲೀಲಾ ಆರ್​ ಅಮೀನ್​, ವಸಂತಿ ರಾವ್​ ಇನ್ನಿತರರು ಉಪಸ್ಥಿತರಿದ್ದರು.