ಉಡುಪಿ: ಕನ್ನಡ ಭಾಷೆ ಅನ್ನ ನೀಡುವ ಭಾಷೆಯಾಗಿದೆ. ಕನ್ನಡದ ಏಳಿಗೆಗೆ ನಾವೆಲ್ಲ ಶ್ರಮಿಸಬೇಕು. ದಿನನಿತ್ಯವೂ ಕನ್ನಡ ಭಾಷೆಯನ್ನು ಹೆಚ್ಚು ಬಳಸುವ ಮೂಲಕ ಜನರಲ್ಲಿ ಭಾಷೆಯ ಮಹತ್ವ ತಿಳಿಸಬೇಕು. ಕನ್ನಡದ ಏಳಿಗೆಗೆ ಕಂಕಣಬದ್ಧರಾಗಬೇಕು ಎಂದು ಸಮಾನ ಮನಸ್ಕ ಕನ್ನಡಿಗರ ವೇದಿಕೆ ಅಧ್ಯಕ್ಷ ಶ್ರೀನಿವಾಸ್ ರಾವ್ ಕೆ. ಹೇಳಿದರು.
ಕಡಿಯಾಳಿ ಕಾತ್ಯಾಯಿನಿ ನಗರದಲ್ಲಿ ಸಮಾನ ಮನಸ್ಕ ಕ್ನನಡಿಗರ ವೇದಿಕೆಯಿಂದ ರಾಜ್ಯೋತ್ಸವದ ಅಂಗವಾಗಿ ನಡೆದ ಕನ್ನಡ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೆರೆ ರಾಜ್ಯಗಳೊಂದಿಗೆ ಭಾಷಾ ಸಮಸ್ಯೆಗಳಿದ್ದರೂ ದೇಶದ ಎಲ್ಲರಿಗೂ ಆಶ್ರಯ ನೀಡಿ ಸಾಮರಸ್ಯ ಜೀವನ ನಡೆಸುವ ಉದಾರತೆ ಕನ್ನಡ ನಾಡಿನ ವೈಶಿಷ್ಟ$್ಯತೆ ಆಗಿದೆ. ಗಡಿಭಾಗದಲ್ಲಿ ಕನ್ನಡ ಉಳಿಸಿ ಬೆಳೆಸುವಲ್ಲಿ ಕೈ ಜೋಡಿಸಬೇಕು ಎಂದರು.
ವೇದಿಕೆ ಸದಸ್ಯ ನಾಗೇಶ್ ಮಾತನಾಡಿ, ಕನ್ನಡ ಕೇವಲ ಭಾಷೆಯಲ್ಲ. ಅದು ಬದುಕು. ವಿದ್ಯಾರ್ಥಿಗಳು ಕನ್ನಡ ಕಲಿಯುವಿಕೆಯಿಂದ ಬದುಕು ಭದ್ರವಾಗುತ್ತದೆ. ಬದುಕಲು ಎಲ್ಲಾ ಭಾಷೆಗಳು ಬೇಕಿದ್ದರೂ ಕನ್ನಡಿಗರಿಗೆ ಉಸಿರು ನೀಡುವ ಭಾಷೆ ಮಾತ್ರ ಕನ್ನಡ ಎಂದು ತಿಳಿಸಿದರು. ವೇದಿಕೆಯ ಸದಸ್ಯರಾದ ಸುರೇಶ್, ಅನುರಾಧ ಜಿ.ಎಸ್., ರಾಘವೇಂದ್ರ ಜಿ., ಜನಾರ್ಧನ, ಪ್ರೀತಿ, ಸ್ವಾತಿ, ಅಶ್ವಿನಿ, ಶಿಲ್ಪ, ಅರ್ಚನಾ, ಲಕ್ಷಿ$್ಮ, ವಿಜಯಲಕ್ಷಿ$್ಮ, ಉಮೇಶ್ ಎಂ, ದಿವ್ಯಾ, ಕಲ್ಪನಾ, ವನಜಾ ಮುಂತಾದವರು ಉಪಸ್ಥಿತರಿದ್ದರು.