ಕಾಡಿನತಾರು ಸೂರ್ಯ ಕಂಬಳೋತ್ಸವ 
ಜಿಲ್ಲೆ

ಕಾಡಿನತಾರು ಸೂರ್ಯ ಕಂಬಳೋತ್ಸವ ಸಂಪನ್ನ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಬೈಂದೂರು

ಬೈಂದೂರು ತಾಲೂಕು ಕಂಬಳ ಸಮಿತಿ ಸಹಕಾರದೊಂದಿಗೆ ಪ್ರಸಕ್ತ ವರ್ಷದ ಮೊದಲ ಕಂಬಳ ಬಿಜೂರು ಗ್ರಾಮದ ಮಿಯ್ಯಣಿ ಕಾಡಿನತಾರು ಸೂರ್ಯ ಕಂಬಳೋತ್ಸವ ಸಂಪನ್ನಗೊಂಡಿತು. 65 ಜೋಡಿ ಕೋಣಗಳು ಪಾಲ್ಗೊಂಡಿದ್ದವು.

ಪ್ರಥಮ ದರ್ಜೆ ಗುತ್ತಿಗೆದಾರ ಗಾಯಾಡಿ ಗೋಕುಲ್ ಶೆಟ್ಟಿ ಕಂಬಳೋತ್ಸವ ಉದ್ಘಾಟಿಸಿದರು. ಬಿಜೂರು ರಘುರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಗುರುರಾಜ ಗಂಟಿಹೊಳೆ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ, ಕಂಬಳದ ಆಯೋಜಕ ಸಂತೋಷ ಪೂಜಾರಿ ಕಾಡಿನತಾರು, ಬೈಂದೂರು ವಲಯ ಕಂಬಳ ಸಮಿತಿ ಉಪಾಧ್ಯಕ್ಷ ಪರಮೇಶ್ವರ ಭಟ್ ಬೋಳಂಬಳ್ಳಿ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ ವಿವರ

ಹಗ್ಗ ಅತೀ ಕಿರಿಯ ವಿಭಾಗದಲ್ಲಿ ಶ್ರೀ ಸ್ವಾಮಿಧಾಮ್ ಹೊಳೆಕಟ್ಟು ಪ್ರಥಮ, ಕೆರ್ಗಾಲ್ ಹೊಸಮನೆ ಶೌರ್ಯ ದೇವಾಡಿಗ ದ್ವಿತೀಯ, ಸಂಕು ಮಹಾಸತಿ ಸಂಕದಗುಂಡಿ ಶಿರೂರುರವರ ಕೋಣಗಳು ತೃತೀಯ ಸ್ಥಾನ ಪಡೆದವು. ಹಗ್ಗ ಕಿರಿಯ ವಿಭಾಗದಲ್ಲಿ ಸ್ವಾಮಿಧಾಮ ಹೊಳೆಕಟ್ಟು ಕುಂಬಾಸಿ ಪ್ರಥಮ, ಎಚ್.ಎನ್ ನಿವಾಸ್ ಭಟ್ಕಳ ದ್ವಿತೀಯ, ಹಗ್ಗ ಹಿರಿಯ ವಿಭಾಗದಲ್ಲಿ ವೆಂಕಟ ಪೂಜಾರಿ ಸಸಿಹಿತ್ಲು ಕಳವಾಡಿಯವರ ಕೋಣಗಳು ಪ್ರಥಮ, ದಿಶಾ ಶ್ರೇಯಸ್ ಅಚಿಂತ್ಯ ರಾಜೇಶ್ ದೇವಾಡಿಗ ಮಿಯ್ಯಣಿ ಕಂಚಿಕಾನ್ ದ್ವಿತೀಯ, ಹಲಗೆ ಮುಕ್ತ ವಿಭಾಗದಲ್ಲಿ ಪವನ್‌ಕುಮಾರ್ ಮೊಳೆಬೈಲು ಗಂಗೆಬೈಲು ಕೊಡೇರಿ ಪ್ರಥಮ, ತೆಕ್ಕೆಟ್ಟೆ ಮೇಲಗುಡ್ಡೆಮನೆ ಆನಂದ ದೇವಾಡಿಗರ ಕೋಣಗಳು ದ್ವಿತೀಯ ಸ್ಥಾನ ಪಡೆದವು.

ಹಿರಿಯ ಓಟಗಾರರಿಗೆ ಗೌರವ

ಬೈಂದೂರು ತಾಲೂಕು ಕಂಬಳ ಸಮಿತಿ ವತಿಯಿಂದ ಹಿರಿಯ ಕಂಬಳ ಓಟಗಾರರಾದ ಹೆರಿಯ ದೇವಾಡಿಗ ಮೆಲ್‌ಮಿಯಾಣಿ, ಉದಯ ದೇವಾಡಿಗ ಮೇಲ್‌ಮಿಯಾಣಿ, ಆನಂದ ಪೂಜಾರಿ ಹರ್ಲಮಕ್ಕಿ, ಚಂದ್ರ ದೇವಾಡಿಗ ಮೇಲ್‌ಮಿಯಾಣಿ, ವಾಸು ದೇವಾಡಿಗ ಮೇಲ್‌ಮಿಯಾಣಿ ಸನ್ಮಾನಿಸಲಾಯಿತು.