ಕಾಡರಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಮಂಡಳಿಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಸಂಭ್ರಮಿಸಿದರು. ರಾಜು ಮುದಕವಿ, ಪ್ರಶಾಂತ ಹುಣಸಿಕಟ್ಟಿ, ರಾಮನಗೌಡ ನಾಯಕ, ಶಿವಪ್ಪ ಬೆನಕಟ್ಟಿ, ಶಿವಣ್ಣ ಚಿಕ್ಕೂರ, ವೆಂಕಪ್ಪ ಬ್ಯಾಳಿ, ಗೋವಿಂದಪ್ಪ ನಾಯಕ, ಜ್ಞಾನೇಶವರ ನಾಯಕ, ರಮೇಶ ಅರಕೇರಿ ಮತ್ತಿತರರಿದ್ದಾರೆ. 
ಜಿಲ್ಲೆ

ಕಾಡರಕೊಪ್ಪ ಪಿಕೆಪಿಎಸ್ ಫಲಿತಾಂಶ ಘೋಷಣೆ

ಕೆರೂರ: ಸಮೀಪದ ಕಾಡರಕೊಪ್ಪ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ.

12 ಅಭ್ಯರ್ಥಿಗಳ ಸ್ಥಾನಕ್ಕೆ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ. ಇನ್ನುಳಿದ ಅಭ್ಯರ್ಥಿಗಳ ಆಯ್ಕೆಗೆ ಡಿ.15 ರಂದು ಚುನಾವಣೆ ನಡೆದಿದ್ದರೂ ಮತ ಎಣಿಕೆ ಕಾರ್ಯಕ್ಕೆ ಹೈಕೋರ್ಟ್ ತಡೆ ನೀಡಿತ್ತು. ಭಾನುವಾರ ಮತ ಎಣಿಕೆ ಕಾರ್ಯ ನಡೆದು ಬಿಜೆಪಿ ಬೆಂಬಲಿತ 11 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಸಾಲೇತರ ಕ್ಷೇತ್ರದಿಂದ ವಿಠ್ಠಲ ವಾಸನದ ಅವಿರೋಧವಾಗಿ ಆಯ್ಕೆಯಾಗಿದ್ದು, ಸಾಲಗಾರ ಸಾಮಾನ್ಯ ಕ್ಷೇತ್ರಕ್ಕೆ ಮನು ಹುಣಸಿಕಟ್ಟಿ, ಹೊಳಬಸು ಚಿಕ್ಕೂರ, ಶ್ರೀನಿವಾಸ ನಾಯಕ, ಗೋವಿಂದಗೌಡ ಹಳೆಮನಿ, ನೀಲಪ್ಪ ಸಣ್ಣಪ್ಪನವರ, ಪ.ಜಾತಿ ಕ್ಷೇತ್ರಕ್ಕೆ ಮಂಜುನಾಥ ಮಾದರ, ಪ.ಪಂಗಡ ಕ್ಷೇತ್ರಕ್ಕೆ ಮಂಜಪ್ಪ ಮುದಕವಿ, ಹಿಂದುಳಿದ ‘ಅ’ ವರ್ಗ ಕ್ಷೇತ್ರದಿಂದ ಗಿರೀಶ ಸುಣಗದ, ಹಿಂದುಳಿದ ‘ಬ’ ವರ್ಗ ಕ್ಷೇತ್ರದಿಂದ ಶ್ರೀದೇವಿ ಆಲೂರ, ಮಹಿಳಾ ಮೀಸಲು ಕ್ಷೇತ್ರದಿಂದ ಕಲಾವತಿ ನಾಯಕ, ಕಸ್ತೂರಿಬಾಯಿ ನಾಯಕ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಎಸ್.ಕೆ. ಬೆಳವಲದ ತಿಳಿಸಿದ್ದಾರೆ.

ಲಿತಾಂಶ ಘೋಷಣೆ ಬಳಿಕ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ರಾಜು ಮುದಕವಿ, ಗಣ್ಯರಾದ ಪ್ರಶಾಂತ ಹುಣಸಿಕಟ್ಟಿ, ರಾಮನಗೌಡ ನಾಯಕ, ಶಿವಪ್ಪ ಬೆನಕಟ್ಟಿ, ಶಿವಣ್ಣ ಚಿಕ್ಕೂರ, ವೆಂಕಪ್ಪ ಬ್ಯಾಳಿ, ಗೋವಿಂದಪ್ಪ ನಾಯಕ, ಜ್ಞಾನೇಶವರ ನಾಯಕ, ರಮೇಶ ಅರಕೇರಿ, ಕೆ.ಎಸ್. ಅರಕೇರಿ, ಎಚ್.ವಿ. ನಾಯಕ ಇದ್ದರು.

ಪಿಎಸ್‌ಐ ಭೀಮಪ್ಪ ರಬಕವಿ, ಕ್ರೈಂ ಪಿಎಸ್‌ಐ ಐ.ಎಂ. ಹಿರೇಗೌಡರ ನೇತೃತ್ವದಲ್ಲಿ ಸೂಕ್ತ ಬಂದೊಬಸ್ತ್ ಒದಗಿಸಲಾಗಿತ್ತು.